ದೀಪಾವಳಿಯ ಈ ಸುದಿನ ದೈವಾಲಯಕ್ಕೆ ಬೆಳಕು ಚೆಲ್ಲಿ ದೈವದ ಬಗ್ಗೆ ನನ್ನ ಅತಿ ಪುಟ್ಟ ಜೋಳಿಗೆಯಲ್ಲಿ ಸಂಗ್ರವಾದ ಮಾಹಿತಿಯನ್ನು ಹಂಚಿಕೊಳ್ಳುತಿದ್ದೇನೆ.ತಪ್ಪುಗಳಿದ್ದರೆ ಕ್ಸಮೆಯಿರಲಿ, ಮೂಲ ದೈವಾರಾಧನೆಗೆ ಒಂದು ಪುಟ್ಟ ಪ್ರಯತ್ನ. ನಮ್ಮೆಲ್ಲರ ಕೊಡುಗೆ – ಒಮ್ಮತದ ಚಿಂತನ ಮಂಥನ ಅನುಷ್ಠಾನ – ಸ್ವರ್ಗದ ಸೋಪಾನಕ್ಕೆ ಮುನ್ನುಡಿ.
ದೈವಾಲಯಕ್ಕೆ – ಒಂಟಿ ಮಾಡ ಬೇಡವೇ ಬೇಡ – ಅಂತರ ಮಾಡ ಬೇಡ – ಮೂರು ಮಾಡ ಬೇಕು.ಅದುವೇ ಶ್ರದ್ದೆ ಭಕ್ತಿ ನಂಬಿಕೆ ಎಂಬ ಆಂತರಿಕ ಮೂರು ಮಾಡ. ಈ ಮೂರು ಮಾಡಗಳು ಆಂತರಿಕವಾಗಿ ಯಾರಿಗೆ ನಿರ್ಮಾಣ ಮಾಡಲು ಸಾಧ್ಯವಾಗುವುದಿಲ್ಲವೋ ಅವನು ಬಾಹ್ಯವಾಗಿ ಕಲ್ಲು ಮಣ್ಣು ಸಿಮೆಂಟು ಬೆಳ್ಳಿ ಬಂಗಾರ ವಜ್ರ ವೈಡೂರ್ಯಗಳಿಂದ ಮಾಡಲ್ಪಡುವ ದೈವಾಲಯಗಳು ಕಣ್ಮನ ತಣಿಸುವ ಸುಂದರ ಕಟ್ಟಡಗಳಾಗುತ್ತವೆ
ದೈವದ ಮೂಲವನ್ನು ಅರಿಯದೆ – ಜೋತಿಷ್ಯ ವಾಸ್ತು ತಂತ್ರಿ ಯಜಮಾನ ವೈದಿಕ ಪರಿಚಾರಕ ನೇಮ ಜಾತ್ರೆ ……… ಇತ್ಯಾದಿ ವ್ಯಕ್ತಿ ವರ್ಗಗಳಿಗೆ ಆರೋಪ ಮಾಡಿ ತನ್ನ ತಪ್ಪನ್ನು ಮರೆಮಾಚುವ ನಿಜವಾದ ಅಪರಾಧಿಗಳು ನಾವು ದೈವ ಆರಾಧಕರು.
ದೈವ ಅಂದರೆ ಏನು – ಆರಾಧಕರು ಯಾರು – ಈಗ ಆರಾಧಕರು ಇದ್ದಾರೆಯೋ – ಹೇಗಿರಬೇಕು – ಏನುಮಾಡಬೇಕು – ಪೂರಕ ವೇದಿಕೆ
೧ . ಯಾರೇ ತಪ್ಪು ಮಾಡಿದರು ತಿದ್ದಿ ಸರಿ ದಾರಿಗೆ ತರುವ ಅವ್ಯಕ್ತ ಶಕ್ತಿ – ಈ ದೇಶದ – ನಮ್ಮ ನ್ಯಾಯ ದೇಗುಲ – ದೈವ
೨. ನೂರಕ್ಕೆ ನೂರು ಶ್ರದ್ದೆ ಭಕ್ತಿ ನಂಬಿಕೆಯಿಂದ ದೈವದ ಅರಿವು ಇದ್ದವರು ಮಾತ್ರ ದೈವ ಆರಾಧಕರು
೩. ಈಗ ನಿಜ ಸ್ವರೂಪದಲ್ಲಿ ದೈವ ಆರಾಧಕರು ಯಾರು ಕೂಡ ಇಲ್ಲ – ಎಲ್ಲರು ಕೂಡ ನೂರಕ್ಕೆ ನೂರು ಮುಟ್ಟುವ ಹಂತದಲ್ಲಿರಬಹುದು
೪. ದೈವ ಪ್ರತಿಷ್ಠೆ ತಂತ್ರ ಪ್ರತಿಷ್ಠೆ ಆದುನಿಕ ಪದ್ಧತಿ – ದೈವ ಪ್ರತಿಷ್ಠೆ ಭಾವ ಪ್ರತಿಷ್ಠೆ ಮೂಲ ಪದ್ಧತಿ – ಮೂಲಪದ್ಧತಿ ಅನುಕರಣೆ ಅತ್ಯಗತ್ಯ
೫. ದೈವಕ್ಕೆ ತಂಬಿಲ ಸೇವೆ ಯಜಮಾನನಿಂದ ಮಾತ್ರ, ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಅನ್ಯರಿಂದ ಮಾಡಬೇಕು.
೬. ಹಿರಿತಲೆಗೇ ಮಾತ್ರ ಅದಿಕಾರದ ಹೊಣೆಗಾರಿಕೆ – ಆತನ ಅಪ್ಪಣೆ ಆಶೀರ್ವಾದ ಮೇರೆಗೆ ಮಾತ್ರ ಅನ್ಯರಿಗೆ
೭. ಪ್ರತಿಷ್ಠ ಸಮಯದಲ್ಲಿ – ಮನೆಯಲ್ಲಿ ಮನೆಯವರೆಲ್ಲ , ಊರಿನಲ್ಲಿ ಊರಿನವರೆಲ್ಲ, ಗುತ್ತಿನಲ್ಲಿ ಗುತ್ತಿಗೆ ಸಂಬಂಧಿಸಿದವರೆಲ್ಲ, ಅರಸುಪಟ್ಟದಲ್ಲಿ ಅರಸುಪಟ್ಟಕ್ಕೆ ಸಂಬಧಪಟ್ಟವರೆಲ್ಲ ದೈಹಿಕವಾಗಿ ಹಾಜರಿರಬೇಕಾದುದು ಅನಿವಾರ್ಯ .
೮. ದೈವಕ್ಕೆ ನೇಮ ಪ್ರಸ್ತುತ ಜಾತ್ರೆ ಪ್ರೇಕ್ಷಕರಿಗೆ ಕಣ್ಮನ ತಣಿಸುವ ನಾಟಕ – ದೈವಕ್ಕೆ ನೇಮ ಬಹಿರಂಗ ನ್ಯಾಯಾಲಯ – ನೇಮಕ್ಕೆ ಸಂಬಂಧಪಟ್ಟ ವ್ಯಾಪ್ತಿಯಲ್ಲಿ ತಪ್ಪು ಮಾಡಿದವರನ್ನು ಬಹಿರಂಗವಾಗಿ ಶಿಕ್ಷಿಸಿ – ತಪ್ಪು ಎಸಗುವವರಿಗೆ ಎಚ್ಚರಿಕೆ ಗಂಟೆ.
೯. ಬುಲ್ಯೆ ಗಡಿ ಭಾಮಾ ಅರಸುಪಟ್ಟ ಇತ್ಯಾದಿಗಳು ವಿಧಿವತ್ತಾಗಿ – ಪರಿಚಾರಕರು ಗುತ್ತಿನವರು ಅರಸು ಪಟ್ಟದವರು ತನ್ನ ಸ್ಥಾನದಲ್ಲಿ ನಿಂತು ನೇಮ ಮಾಡಿದರೆ ಮಾತ್ರ ಅದು ನೇಮ ಇಲ್ಲದಿದ್ದರೆ ನಾಟಕ – ಪ್ರಸ್ತುತ ನಾಟಕ ನೇಮ ಚಾಲ್ತಿಯಲ್ಲಿದೆ.
೧೦. ದೈವಕ್ಕೆ ನಿಜವಾದ ಯಜಮಾನನ ಅರಿವು ೯೫ ಪ್ರತಿಶತ ದೈವ ಭಕುತರಿಗೆ ಅರಿವಿಲ್ಲದಿರುವುದು ದೈವಾರಾಧನೆಗೆ ತಟ್ಟಿರುವ ಮೊದಲ ಶಾಪ – ತೊಲಗಿಸೋಣ
೧೧. ಅದ್ದೂರಿ ಬಾಹ್ಯ ಆಡಂಬರ ಪ್ರಸ್ತುತ ಅಂಧಾನುಕರಣೆ – ಅದ್ದೂರಿ ಆಂತರಿಕ ಆಡಂಬರ ದೈವಾರಾಧನೆ ಮೂಲ
೧೨. ದೈವದ ಮೇಲೆ ನಿಜವಾದ ನಂಬಿಕೆ ಜನಸಾಮಾನ್ಯರಲ್ಲಿದ್ದರೆ – ಪೊಲೀಸ್ ನ್ಯಾಯಾಲಯದಿಂದ ಹಿಡಿದು ಯಾವುದೇ ವ್ಯವಸ್ಥೆಯ ಅಗತ್ಯವಿರುದಿಲ್ಲ
೧೩. ದೈವಾರಾಧನೆ ಅರಿವು ಮುಟ್ಟಿಸಲು ದೈವ ಆರಾಧಕರ ಕಮಿಟಿ ದೈವಾರಾಧಕರ ಒಕ್ಕೂಟವಾಗಿ ಪರಿವರ್ತನೆ ಅತ್ಯಗತ್ಯ
೧೪. ದೈವಾರಾಧನೆಗೆ ಶಿಕ್ಸಣದಲ್ಲಿ ಒತ್ತುನೀಡಬೇಕಾದ ಅನಿವಾರ್ಯತೆ ಇದೆ
೧೫. ಒಂದು ವ್ಯಕ್ತಿಯನ್ನು ಪರಿಪೂರ್ಣ ವ್ಯಕ್ತಿಯನ್ನಾಗಿಸುವ ಜವಾಬ್ದಾರಿ ದೈವಾರಾಧನೆಯಲ್ಲಿ ಅಡಗಿದೆ
೧೬. ಕಿಂಚಿತ್ತೂ ವೆಚ್ಚವಿಲ್ಲದೆ ನ್ಯಾಯ ದೊರಕಿಸುವ ಶಕ್ತಿ ದೈವಕ್ಕೆ ಇದೆ ಎನ್ನುವುದನ್ನು ಜಗತ್ತಿಗೆ ಸಾರೋಣ
೧೭. ದುಷ್ಟರನ್ನು ಶಿಕ್ಷಿಸಲು ಪ್ರತಿ ಮಾನವರಿಗೂ ದೊರಕುವ ದೈತ್ಯ ಶಕ್ತಿ ದೈವವೆಂದು ಡಂಗುರ ಸಾರೋಣ
೧೮. ನಮ್ಮಲ್ಲಿರುವ ದುರ್ಗುಣಗಳನ್ನು ಹೋಗಲಾಡಿಸುವ – ನಮ್ಮ ಬದುಕನ್ನು ಬಂಗಾರವಾಗಿಸುವ – ನಮ್ಮಿಷ್ಟವನ್ನು – ನಾವು ಇಷ್ಟಪಟ್ಟಲ್ಲಿ – ನಿತ್ಯ ನಿರಂತರ – ಜನ್ಮ ಜನ್ಮಾಂತರ – ದೊರಕಿಸುವ ಸೇವಕ – ದೈವ – ಅರಿತು – ಜ್ಞಾನದ ಬೆಳಕು ಚೆಲ್ಲಿ – ಮುಂದಿನ ಬಾಳು ದೀಪಾವಳಿಯಿಂದ ಬೆಳಗಲಿ