ಹಿಂದೆ ಹಿಂದೆ – ಮುಂದೆ ಮುಂದೆ 
ಮಾನವರಾದ ನಮ್ಮ ಬದುಕು ನಿಂತ ನೀರಾಗಬಾರದು – ಅದು ಚಲಾವಣೆಯಲ್ಲಿರುವ ನಾಣ್ಯದಂತಿರಬೇಕು – ಇದಕ್ಕೆ ನಾವು ಏನುಮಾಡಬೇಕು 
ನನಗೆ ವಯಸ್ಸಾಗಿದೆ > ೯೨ ನೇ ವಯಸ್ಸಿನ ಜಗತ್ತಿನ ೫ ನೇ ಶ್ರೀಮಂತ ವಾರೆನ್ ಬಾಫ್ಫ್ಟ್ ನೋಡಿ 
ನನಗೆ ವಿದ್ಯೆ ಇಲ್ಲ > ಬುದ್ದಿ ಮಾತ್ರ ಇದ್ದಾರೆ ಸಾಕು – ರಾಜಕಾರಿನಗಳನ್ನು ನೋಡಿ ಅರಿಯೋಣ 
ನಾನು ಹಳ್ಳಿಯಲ್ಲಿದ್ದೇನೆ > ಹಳ್ಳಿಯನ್ನು ಡೆಲ್ಲಿಯಂತೆ ಮಾಡಿದ ನೂರಾರು ಸಾಧಕರನ್ನು ನೋಡೋಣ 
ನಾನು ಹೆಣ್ಣು > ದೇಶವನ್ನು ಪ್ರಧಾನಿಯಾಗಿ ರಾಷ್ಟ್ರಪತಿಗಳಾಗಿ ಮುನ್ನಡೆಸುವವರು ನಮಗೆ ಆದರ್ಶ 
ನನಗೆ ಮೀಸಲಾತಿ ಇಲ್ಲ > ಮೀಸಲಾತಿ ಮೆಟ್ಟಲು ಸೋಮಾರಿಗೆ – ಸಾಧಕನಿಗೆ ಲಿಫ್ಟ್ 
ಆವಿಸ್ಕಾರಕ್ಕೆ ನನ್ನ ಮಾನದಂಡ ಸಲ್ಲ > ಆವಿಸ್ಕಾರ ಮಾಡಿದವನ ಮಾನದಂಡ ಬಳಸಿ ನೋಡೋಣ 
ಕಾಪಿ ಕೆಲಸ ನಮಗೆ ಅಭ್ಯಾಸ > ಹೊಸತನ ನಮ್ಮ ಗುರಿಯಾಗಲಿ
ಮೊಬೈಲ್ ಸಮಯ ಹಣ ಪೋಲು ಸಾಧನ > ಸಾಧಕನಿಗೆ ಅತ್ಯಂತ ಶ್ರೇಷ್ಠ ಆಯುಧ – ವಿದ್ಯೆ ಬುದ್ದಿ ಸಂಪಾದನೆಗೆ 
ಕಿರಿಯರು ನಮಗೆ ಗುರುಗಳು > ಹಿರಿಯರು ನಾವು ಕಿರಿಯರಿಗೆ ಮಾರ್ಗದರ್ಶಕರಾಗೋಣ 
ಮೊಬೈಲಿನಿಂದ ಮಕ್ಕಳ ದಾರಿತಪ್ಪುತ್ತಾರೆ > ಮೊದಲು ನಾವು ದಾರಿಯಲ್ಲಿ ಹೋಗೋಣ ಅವರು ನಮ್ಮನ್ನು ಹಿಂಬಾಲಿಸುತಾರೆ 
ಜಗದ ವಸ್ತುಗಳು ಮೊಬೈಲಿನಲ್ಲಿ ನೋಡಬಹುದು > ಜಗದಿ ಮಾನವರ ನೋಡುವ ಅವಕಾಶ ಕಲ್ಪಿಸೋಣ 
ಶಾಪಿಂಗ್ ಕಾಂಪ್ಲೆಕ್ಸ್ ಅಜ್ಜ ನೆಟ್ಟ ಆಲದ ಮರ > ಆನ್ಲೈನ್ ಕಾಂಪ್ಲೆಕ್ಸ್ – ಮನೋ ವೇಗದ ಬದುಕು – ಮುನ್ನುಗ್ಗೋಣ