ಕೃಷಿಕರ ಸೇವಾ ಒಕ್ಕೂಟ
ಪ್ರತಿ ವೃತ್ತಿಯಲ್ಲಿ ತೊಡಗಿಕೊಳ್ಳುವವರು ತಮಗೆ ಸಹಕಾರಿಯಾಗಬಲ್ಲ ಸೇವಾ ಒಕ್ಕೂಟವನ್ನು ಮಾಡಿಕೊಂಡು, ಎದುರಿಸುತಿರುವ ಸಮಸ್ಯೆಗಳಿಗೆ ಪರಿಹಾರ , ನವ ಪೀಳಿಗೆಯನ್ನು ತಮ್ಮ ವೃತ್ತಿಗೆ ಆಕರ್ಷಿಸುವ ಭಿನ್ನ ಆವಿಸ್ಕಾರಗಳನ್ನು ಅಳವಡಿಸಿ, ಕನಿಷ್ಠ ವೆಚ್ಚದಲ್ಲಿ ಗರಿಷ್ಠ ಸಂಪಾದನೆಗೆ ಒತ್ತುಕೊಟ್ಟು. ಪ್ರತಿ ಉದ್ಯೋಗವನ್ನು ಅಳಿವಿನ ಅಂಚಿನಿಂದ ಉತ್ತುಂಗ ಶಿಖರಕ್ಕೇರಿಸುವ ನಮ್ಮ ನಿಮ್ಮೆಲ್ಲರಲ್ಲಿ ಹುದುಗಿರುವ ಬದ್ದತೆಯೇ ಸೇವಾ ಒಕ್ಕೂಟಗಳ ಜನನ.
ಪ್ರತಿ ಊರಿನಲ್ಲಿ ಕೃಷಿಕರ ಸೇವಾ ಒಕ್ಕೂಟ ಸ್ಥಾಪನೆ ಬಗ್ಗೆ ಚಿಂತನೆ
ಪ್ರತಿ ಒಕ್ಕೂಟಕ್ಕೆ ಕನಿಷ್ಠ ಮೊಬೈಲಿನಲ್ಲಿ ಮಾಹಿತಿ ಕೊಡಬಲ್ಲ ವ್ಯಕ್ತಿಯ ನೇಮಕ
ಪ್ರತಿ ಕೃಷಿಕರನ್ನು ಜಗತ್ತಿಗೆ ಪರಿಚಯಿಸುವುದರ ಜೊತೆಗೆ ಕೃಷಿ ಅನುಭವಗಳ ಸಂಕ್ಷಿಪ್ತ ಪ್ರಕಟಣೆ
ಕೃಷಿ ಬದುಕು ಶ್ರೇಷ್ಠ ನೆಮ್ಮದಿ ಅತ್ಯುನ್ನತ ಬದುಕು – ಅನ್ಯ ಬದುಕುಗಳಿಗಿಂತ ಹೇಗೆ ಉತ್ತಮ ಬಗ್ಗೆ ತಿಳುವಳಿಕೆ ನೀಡೋಣ
ತಪ್ಪು ದಾರಿಗೆ ತಳ್ಳುವವರ ನಿಖರ ಮಾಹಿತಿ ಕೊಡುವ ಕೆಲಸವಾಗಲಿ
ಕನಿಷ್ಠ ವೆಚ್ಚದಿಂದ ಗರಿಷ್ಠ ಉತ್ಪನ್ನ ತೆಗೆಯುವ ಅನುಭವ ಮಾತುಗಳ ಪ್ರಕಟಣೆ
ಎಲ್ಲ ಸಮಸ್ಯೆಗಳಿಗೆ ವ್ಯಾಪಾರ, ದರೋಡೆ ಬದುಕು ಮೂಲ ಕಾರಣ – ಸೇವಾ ಬದುಕಿನತ್ತ ಒಲವು ಸಮಸ್ಯೆಗಳ ನಿರ್ಮೂಲನೆಗೆ ದಾರಿ
ಸ್ವಚ್ಛ ಗಾಳಿ ನೀರು ಆಹಾರಕ್ಕೆ ನಾವು ಬೇಕೇ ಬೇಕು – ನಾವು ಬದುಕುವ ದಾರಿಯನ್ನು ಉತ್ತಮಗೊಳಿಸೋಣ
ಯುವ ಪೀಳಿಗೆ ವಿಮುಖರಾಗಿರುವುದು ಎಂಬುದ ಅರಿತು ಅವರನ್ನು ನಮ್ಮತ್ತ ಸೆಳೆಯೋಣ
ಗರಿಷ್ಠ ಉದ್ಯೋಗ ಈ ಕ್ಷೇತ್ರದಲ್ಲಿ ಹವಾ ನಿಯಂತ್ರಿತ ಕೊಠಡಿಯಲ್ಲಿ ಕೂತು ಮಾಡುವುದನ್ನು ಎತ್ತಿ ತೋರಿಸೋಣ
ನಗರಕ್ಕೆ ಹೋಗುವ ಬಾಗಿಲನ್ನು ಮುಚ್ಚಿ ಗ್ರಾಮಾಂತರಕ್ಕೆ ಹೋಗುವ ಬಾಗಿಲನ್ನು ತೆರೆಯುವ ಕೆಲಸ ನಮ್ಮಿಂದಾಗಲಿ
ಉದ್ಯೋಗ ಹುಡುಕುವ ಯುವ ಪೀಳಿಗೆಗೆ ಉದ್ಯೋಗ ಸೃಷ್ಟಿಸುವ ಪಾಠ ಸೇವಾ ಒಕ್ಕೂಟಗಳಿಂದ ನಿರಂತರ ಸಾಗಲಿ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ೯೪೮೦೨೪೧೭೬೫