ನ್ಯೂಸ್ ಮತ್ತು ಬುಲೆಟಿನ್ – News and Bulletin

ಶೇರ್ ಮಾಡಿ

ಪ್ರಸ್ತುತ ಪ್ರಪಂಚದ , ನಿರ್ದಿಷ್ಟ ಪ್ರದೇಶದ ,ಜಾತಿಯ …………ಇತ್ಯಾದಿ ಇತ್ಯಾದಿ ಆಗುಹೋಗುಗಳನ್ನು ಬೇರೆ ಬೇರೆ ಮಾಧ್ಯಮಗಳ ಮೂಲಕ ಜನರಿಗೆ ತಲುಪಿಸುವ ವ್ಯವಸ್ಥೆ ನ್ಯೂಸ್ ಆಗಿದ್ದು ಅಧಿಕೃತ ವಿಷಯವನ್ನು ಮಾತ್ರ ಜನರಿಗೆ ತಲುಪಿಸುವ ವ್ಯವಸ್ಥೆಗೆ ಬುಲೆಟಿನ್ ಎಂದು – ಎರಡು ಪದಗಳ ಆಳಕ್ಕೆ ಹೋಗಿ ಚಿಂತನೆ ಮಾಡಿದಾಗ ದೊರಕುವ ಫಲ ಆದರೂ ರೂಡಿಯಲ್ಲಿ ಬಹುತೇಕ ಒಂದೇ ಅರ್ಥವನ್ನು ಕೊಡುವುದು ವಾಡಿಕೆಯಲ್ಲಿದೆ.
ಒಂದು ಕಾಲದಲ್ಲಿ ಪ್ರಸಾರ ಮಾದ್ಯಮವೆಂದು ಕರೆಯಲ್ಪಡುತ್ತಿದ್ದ ನ್ಯೂಸ್ ಪ್ರಚಾರ ಮಾಧ್ಯಮದ ಹಾದಿಯಲ್ಲಿ ಮುಂದುವರಿದು – ಪ್ರಚಲಿತ ಘಟನೆ ಮತ್ತು ಅದಕ್ಕೆ ಸಮರ್ಪಕ ಪರಿಹಾರ ಎರಡನ್ನು ಪ್ರಕಟಿಸುವ ಕಾಲ ಮಾಯವಾಗಿ – ಘಟನೆ ಪ್ರಕಟಿಸಲು ಮಾತ್ರ ಸೀಮಿತವಾಗಿದ್ದು – ನಾಯಿಕೊಡೆಗಳಂತೆ ಹುಟ್ಟುವ ನ್ಯೂಸ್ ಮಾಧ್ಯಮ ಜನನ – ತನ್ನ ಮಹತ್ವವನ್ನು ಹಂತ ಹಂತವಾಗಿ ಕಳೆದುಕೊಳ್ಳುತಿದೆ. ಒಂದು ಹೆಜ್ಜೆ ಮುಂದೆ ಹೋಗಿ ಬುಲೆಟಿನ್ ಪದವನ್ನು ತಮ್ಮದಾಗಿಸಿ ವೇಗವನ್ನು ಹೆಚ್ಚಿಸಿಕೊಳ್ಳುವ ಜಾಣ್ಮೆ ವಸ್ತುಸ್ಥಿತಿಯ ನಿಜ ಸ್ವರೂಪ ಜನಸಾಮಾನ್ಯರಿಂದ ದೂರವಾಗುತಿದೆ.
ಬುಲೆಟಿನ್ ಮಾಧ್ಯಮ ತನ್ನ ಅಸ್ತಿತ್ವನ್ನು ಉಳಿಸಿ , ನ್ಯೂಸ್ ಮಾದ್ಯಮದಂತೆ ಹೆಮ್ಮರವಾಗಿ ಬೆಳೆದು – ವಸ್ತುಸ್ಥಿತಿಯ ನಿಜಸ್ವರಪ ತಿಳಿಯಬಯಸುವ ಜನರ ಮನದಾಳದ ಹಸಿವಿಗೆ ಸಾಂತ್ವನ ಹೇಳಬೇಕಾಗಿದೆ. ಅಧಿಕೃತ ಪ್ರಚಾರ ಬುಲೆಟಿನ್ ಅನಧಿಕೃತ ಪ್ರಚಾರ ನ್ಯೂಸ್ ಎಂಬುದನ್ನು ಸ್ಪಷ್ಟ ಮಾತುಗಳಲ್ಲಿ ಸಮಾಜಕ್ಕೆ ತಿಳಿಯಪಡಿಸುವ ಅನಿವಾರ್ಯತೆ ಎದುರಾಗಿದೆ. ಸಕಲ ಕ್ಷೇತ್ರಗಳು ಕೂಡ – ಸೇವೆ ವ್ಯಾಪಾರವಾಗಿ ಮುಂದುವರಿದು ದರೋಡೆ ವೇಷದ ರೂಪದಲ್ಲಿ ಮಾನವ ಬದುಕನ್ನು ಕಾಡುತಿರುವ ಕುರುಕ್ಷೇತ್ರಕ್ಕೆ ಬುಲೆಟಿನ್ ಮಾಧ್ಯಮದ ರಂಗಪ್ರವೇಶ ನೆಮ್ಮದಿ ಬದುಕಿಗೆ ನಾಂದಿ.

See also  ದಾರಿ ತಪ್ಪಿದ ಪ್ರಜಾಪ್ರಭುತ್ವಕ್ಕೆ ಮದ್ದು

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?