ಕೆಲವೇ ದಿನಗಳ ಹಿಂದೆ ಜೈನ ಮುನಿಯೊಬ್ಬರನ್ನು ಅತ್ಯಂತ ಕ್ರೂರ ರೀತಿಯಲ್ಲಿ ಹತ್ಯೆ ಮಾಡಿದ ಆ ವ್ಯಕ್ತಿಯು ಕೂಡ ತನ್ನ ವಿದ್ಯಾರ್ಥಿ ಜೀವನ ಪೂರೈಸಿ ಬಾಳುವೆ ನಡೆಸುವಾತ – ವಿದ್ಯಾರ್ಥಿ ಜೀವನದಲ್ಲಿ ಆತನಿಗೆ ಉತ್ತಮ ಸಂಸ್ಕಾರದ ಪಾಠದ ಕೊರತೆ ಇದೆಯಾ ಯಾ ಸಂಸ್ಕಾರವಂತರನ್ನಾಗಿ ಮಾಡುವ ಪಾಠದ ಬೋಧನೆಯನ್ನು ಕೈಬಿಡಲಾಗಿದೆಯೇ?.
ಸಂಚಾರ ನಿಯಮ ಪಾಲಿಸದಿದ್ದರೆ ಸಾವು – ದೇಹದ ರೋಗಕ್ಕೆ ಮದ್ದು ತೆಗೆದುಕೊಳ್ಳದಿದ್ದರೆ ಸಾವು – ಸಾಮಾಜಿಕ ಕಾಯಿಲೆಗೆ ಜೈಲೆಂಬ ಪರಿವರ್ತನಾ ಕೇಂದ್ರದ ಮೂಲಕ ಸನ್ಮಾರ್ಗದ ಪ್ರಜೆಯನ್ನಾಗಿ ಮಾಡಿದರೆ ಮಾತ್ರ – ಹುಲಿ ಮತ್ತು ದನವನ್ನು ಕೂಡಿಹಾಕಿದ ಸ್ಥಿತಿಯಲ್ಲಿರುವ ಪ್ರಸ್ತುತ ಸಮಾಜದಿಂದ ಹೊರ ಬಂದು ನೆಮ್ಮದಿ ಬದುಕು ಸಾಗಿಸಬಹುದು. ಜಾತಿ ಮತ ಧರ್ಮಗಳು ತನ್ನ ಕೆಲಸ ಮರೆತು ಕೈಕಟ್ಟಿ ಕುಳಿತಿರುವ ಇಂದು ಶಿಕ್ಷಣಕ್ಕೆಂದು ಕೋಟಿಗಟ್ಟಲೆ ಹಣ ಬದುಕಿನ ಅಮೂಲ್ಯ ಸಮಯ ವ್ಯಯ ಮಾಡುತಿರುವ ನಮಗೆ ಬದುಕುವ ದಾರಿ ಸ್ಪಷ್ಟವಾಗಿ ತಿಳಿಸಲು ಅಸಮರ್ಥವಾಗಿರುವುದರ ಸಂಕೇತ – ನಾವು ಇಂದು ಮಾನವರು ಮತ್ತು ದೇವಾ ಮಾನವರ ಮದ್ಯೆ ಬದುಕುವ ಬದಲಾಗಿ ದಾನವರ ಮದ್ಯೆ ಬದುಕುವ ಅನಿವಾರ್ಯತೆ ನರಕಕ್ಕೆ ತಳ್ಳುತಿದೆ.
ಪ್ರತಿ ಉದ್ಯೋಗ ಉದ್ಯಮ ವೃತ್ತಿಯಲ್ಲಿ ಸೇವಾ ಒಕ್ಕೂಟದ ಪರಿಕಲ್ಪನೆ ಸೃಷ್ಟಿಯಾಗಿ – ಸೇವಾ ಒಕ್ಕೂಟದ ಮೂಲಕ ಆದುನಿಕ ಜಗತ್ತು ಎದುರಿಸುತಿರುವ ಸರ್ವ ಸಮಸ್ಯೆಗಳಿಗೆ ಪರಿಹಾರದ ವಿಪುಲ ಅವಕಾಶವನ್ನು ನಮ್ಮದಾಗಿಸಿಕೊಳ್ಳುವ.
ಪ್ರತಿ ಗುರುಗಳ ಇತ್ತ ಗಮನ ಹರಿಸಿ ತಮ್ಮ ಕೊಡುಗೆಯನ್ನು ನೀಡಿದಲ್ಲಿ ಮುಂದಕ್ಕೆ ಶಿಷ್ಯರು ಅನುಷ್ಠಾನದತ್ತ ಮುಂದುವರಿದು ಕನಸಿನ ಸಾಮ್ರಾಜ್ಯ ಉದಯವಾಗಲಿದೆ.
ಈ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಪ್ರತಿಯೊಬ್ಬರಿಗೂ ಅವ್ಯಕ್ತ ಬುಲ್ಲೆಟಿನಿನಲ್ಲಿ ಅವಕಾಶ ಕಲ್ಪಿಸಿದ್ದು ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ