ಪಾಪ ಪುಣ್ಯದ ಬಗ್ಗೆ ಚಿಂತನೆ ಪ್ರಸ್ತುತ ಸಮಾಜಕ್ಕೆ ಅವಶ್ಯಕತೆ ಇದೆಯಾ – ಇದು ಸಾಯುವ ಕಾಲಕ್ಕೆ ಮಾಡತಕ್ಕ ಕೆಲಸ ಕಾರ್ಯಗಳು – ತಪ್ಪು ಸರಿಗಳ ನಿತ್ಯ ನಿರಂತರ ಮನೆಯಿಂದ ಹಿಡಿದು ಶಾಸಕರ ಸಂಸದರ ಮನೆಯಲ್ಲಿಯೂ ಸಂವಾದ ಧರಣಿ ಸಭಾತ್ಯಾಗದ ಪಾಠ ಬೋದನೆಯಾಗುತಿರುವ ನಮಗೆ ಅನ್ಯ ವಿಶಯ ಅಪಥ್ಯವಾಗಿದ್ದು – ಅರಸನಂತೆ ಪ್ರಜೆಗಳು ನಾಣ್ಣುಡಿ ಪ್ರಸ್ತುತ ಜನಪ್ರತಿನಿದಿಗಳು ಅರಸರಾಗಿ ನಾವು ಪ್ರಜೆಗಳಾಗಿ ಹಿಂಬಾಲಿಸುತಿದ್ದೇವೆ. ಪುಣ್ಯ ಪಾಪ – ಸರಿ ತಪ್ಪು- ನ್ಯಾಯ ಅನ್ಯಾಯ ಒಂದೇ ಅರ್ತವನ್ನು ಕೊಡುವ ಬೇರೆ ಬೇರೆ ಪದಗಳು. ಪುಣ್ಯ ಪಾಪ ಚಲಾವಣೆಯಲ್ಲಿ ಇಲ್ಲದ ನಾಣ್ಯವಾಗಿದೆ.
ಪಂಚ ಭೂತಗಳು – ನೀರು ಗಾಳಿ ಬೆಂಕಿ ಇತ್ಯಾದಿ ಅಂದಿನಿಂದ ಇಂದಿನವರೆಗೆ ತಮ್ಮ ದಿಕ್ಕು ಬದಲಿಸದೆ – ಕೆಳಮುಖ ಹರಿವು ನೀರು, ಮೇಲ್ಮುಖ ಚಾಲನೆ ಬೆಂಕಿ, ಅತಿಂದಿತ್ತ ಚಾಲನೆ ಗಾಳಿ – ನಮಗಿರುವ ಬದುಕಿನ ಪಾಠ ನಾವು ಮರೆತು ದಿಕ್ಕು ತಪ್ಪಿ ದೂರ ದೂರ ಸಾಗುತಿರುವುದಕ್ಕೆ ಅಂತ್ಯ ಹಾಡಲೇ ಬೇಕು.
ಭೂಮಿ ಜೀವರಾಶಿಗಳೊಂದಿಗೆ ಮಾನವರಿಗೆ ಬದುಕಲು ಮೀಸಲಿಟ್ಟ ಸ್ಥಳ ಎಂಬ ಕಠೋರ ಸತ್ಯ ಮರೆತು – ಇದು ಮಾನವರಾದ ನಮಗೆ ಮಾತ್ರ ಎನ್ನುವ ಬಾವಿಯೊಳಗೆ ಇಳಿದು ಮುಂದೆ ಸಾಗಿ ಕೊಳವೆಬಾವಿಯೊಳಗೆ ಇಳಿದು – ಇವೆಲ್ಲ ನನಗೋಸ್ಕರ ಎನ್ನುವ ಮನಸ್ಥಿತಿ ಅಧಪತನದ ಪರಾಕಾಷ್ಠೆ .
ನಮ್ಮ ಜನನಕ್ಕೆ ಕಾರಣ ಇಬ್ಬರು ತಂದೆ ತಾಯಿಗಳು – ನಮ್ಮ ಅಜ್ಜ ಅಜ್ಜಿ ಎರಡನೇ ತಲೆಮಾರು ೪ ಜನ – ಹೀಗೆ ೩ ೪ ೫ ೬ ೭ ೮ ೯ ೧೦ ತಲೆಮಾರಿಗೆ ಹೋದಾಗ ನಮ್ಮ ಹಿರಿಯರು ಸುಮಾರು ೧೦೨೪ ಮಂದಿ – ಪ್ರತಿ ತಲೆಮಾರಿಗೆ ೨ ರಿಂದ ಗುಣಿಸಿದಾಗ ಸಿಗುವ ಉತ್ತರ ಮುಂದಕ್ಕೆ ೨೦ ತಲೆಮಾರಿಗೆ ಗುಣಾಕಾರ ಮಾಡಿದಾಗ ಮಿಲಿಯಗಟ್ಟಲೆ ಜನರಿಗೆ ನಾವು ವಿದೇಯರಾಗಿರುವುದು ಮಾತ್ರವಲ್ಲ ಅವರ ಸೇವೆ ಮಾಡಿದರೆ ಮಾತ್ರ ಪುಣ್ಯ ನಮ್ಮ ಪಾಲಿಗೆ ದೊರಕಬಹುದು . ಇಷ್ಟು ಜನರು ಕೂಡ ಮಾನವರಾಗಿ ಯಾ ಪ್ರಾಣಿಗಳಾಗಿ ಜೀವಿಸುತಿರುವುದು ಅಪ್ಪಟ ಸತ್ಯಕ್ಕೆ ಕಾರಣ ಆತ್ಮಕ್ಕೆ ಸಾವಿಲ್ಲ.
ಈ ಕುರಿತು ಸುದೀರ್ಘ ಚಿಂತನೆ ಮಂಥನಕ್ಕೆ ಒಳಪಡಿಸಿದಾಗ ನಾವು ಯಾವುದೇ ಜೀವರಾಶಿಗೆ ಕೂಡ ಹಿಂಸೆ ಮಾಡದೇ ಬದುಕು ನಡೆಸುವುದು ನಮ್ಮ ಕರ್ತವ್ಯ. ಕೊನೆಯ ಪಕ್ಷ ಕೊಲೆ ಹಿಂಸೆ ಮೋಸ ವಂಚನೆ ಇತ್ಯಾದಿ ಇತ್ಯಾದಿ ತಪ್ಪುಗಳ ಸರಮಾಲೆಗೆ ಅಂಕಿತ ಹಾಕಿ ಕಾಲಕ್ರಮೇಣ ಸೂನ್ಯ ತಪ್ಪುಗಳತ್ತ ಗಮನಹರಿಸಲೇಬೇಕು.
ನಮ್ಮಿಂದ ಆದ ತಪ್ಪುಗಳಿಗೆ ನ್ಯಾಯಾಲಯದ ಮೂಲಕ ಜೈಲೆಂಬ ಪರಿವರ್ತನಾ ಕೇಂದ್ರದಲ್ಲಿ ಚಿಕೆತ್ಸೆ ಪಡೆದು ಮಾನವರಿಂದ ದೇವಮಾನವರಾಗಿ ಬಾಳುವೆ ನಡೆಸಲು ಪ್ರಾರಂಭಿಸಿದಾಗ ಬದುಕಿನ ಪಾಪ ತೊಳೆದುಹೋಗಿ ಪುಣ್ಯ ಸಂಪಾದನೆಯಾಗಿ ಸುಮದುರ ಬಾಳಿನ ಕನಸು ನನಸಾಗಬಹುದು. ಮುಂದೆ ಸಾಗೋಣ