ಮಹಿಳಾ ಸೇವಾ ಒಕ್ಕೂಟದ ಬಗ್ಗೆ ಸರಿಯಾದ ಅರಿವು ಪ್ರತಿಯೊಬ್ಬರಿಗೂ ಮನದಟ್ಟಾಗಲು ಪ್ರಶ್ನೆ ಮತ್ತು ಉತ್ತರ ರೀತಿಯಲ್ಲಿ ಮುಂದುವರಿಯುವುದು
ಈ ಒಕ್ಕೂಟದ ಬಗ್ಗೆ ಸಾಮಾನ್ಯ ಜನರಿಗೆ ಮನದಟ್ಟಾಗುವಂತೆ ಸ್ಪಷ್ಟವಾಗಿ ತಿಳಿಸಿ?
ಮಹಿಳೆಯು ಕೂಡ – ಸಾಮಾಜಿಕ ಆರ್ಥಿಕ ಧಾರ್ಮಿಕ – ಸ್ವಾವಲಂಬಿ ಮತ್ತು ಸಂತುಷ್ಟ ಜೀವನಕ್ಕಾಗಿ ಒಕ್ಕೂಟದ ಉದಯವಾಗಿದೆ. ಕನಿಷ್ಠ ಐದು ಮಂದಿ – ಮನೆಯವರು , ಜಾತಿಯವರು , ಕುಟುಂಬದವರು , ಬೇರೆ ಬೇರೆ ಸಂಘ ಸಮುಸ್ಥೆಯವರು , ಉದ್ಯಾಯೋಗದವರು ಇತ್ಯಾದಿ ಯಾರೇ ಆದರೂ – ಸೇವಾ ದೃಷ್ಟಿಯಿಂದ – ಪ್ರತ್ಯಕ್ಷ ಯಾ ಪರೋಕ್ಷ ಒಟ್ಟಾಗಿ – ದೃಢ ಸಂಕಲ್ಪದಿಂದ – ನಿಶ್ಚಿತವಾದ ಒಂದು ಕೆಲಸವನ್ನು ಮಾಡುವ ಪ್ರತಜ್ಞಾ ವಿಧಿ ಪೂರೈಸುವುದು. ಪ್ರಕೃತಿ ಕೂಡ ಒಕ್ಕೂಟಗಳ ಸಮೂಹ ಆದುದರಿಂದ ನಮ್ಮ ಸಂಕಲ್ಪಗಳಿಗೆ ಸದ್ರಡವಾದ ಬಲ ತುಂಬಲು ಕನಿಷ್ಠ ಮಂದಿಯೊಂದಿಗೆ ಒಟ್ಟಾಗಲು ಸೂಚಿಸಲಾಗಿದೆ. ಇಲ್ಲಿ ಪ್ರತಿ ಮಹಿಳೆಯರನ್ನು ಸಮಾಜಕ್ಕೆ ಪರಿಚಯಿಸುವ ಮೊದಲ ಕಾರ್ಯಕ್ರಮವಾಗಿದ್ದು – ಈ ಕೆಲಸ ಅನ್ಯ ಜಾಲತಾಣಗಳಲ್ಲಿ ಕೂಡ ಆಗುತಿದ್ದುದರ ಹಲವಾರು ನ್ಯೂನತೆಗಳ ಹೋಗಲಾಡಿಸಿ – ಯಾವುದೇ ಮೊಬೈಲ್ ಇನ್ನಿತರ ಸಾಧನಗಳನ್ನು ಬಳಸದವರಿಗೆ ಮತ್ತು ನಮ್ಮನ್ನು ಅಗಲಿದವರನ್ನು ಕೂಡ ನಮ್ಮೊಂದಿಗೆ ಅವ್ಯಕ್ತವಾಗಿ ಇರುವಂತೆ ಮಾಡುವ ಸದುದ್ದೇಶ ಹೊಂದಿದೆ. ಹೆಚ್ಚಿನ ಅರಿವು ತೊಡಗಿಸಿಕೊಂಡ ನಂತರ ಅನಿವಾರ್ಯತೆ ಬಗ್ಗೆ ತಿಳಿಯಬಹುದು.
ನಮ್ಮನ್ನು ನಾವು ಸಮಾಜಕ್ಕೆ ಲೋಕಕ್ಕೆ ಪರಚಯಿಸುವ ಅವಶ್ಯಕತೆ ಇದೆಯಾ ?
ನಮ್ಮ ಬದುಕಿನ ಎಲ್ಲ ಚಟುವಟಿಕೆಗಳು – ಉತ್ತಮವಾದ ಬಟ್ಟೆ ಚಿನ್ನಾಭರಣ ಕಾರು ಬಂಗಲೆ ಒಳ್ಳೆಯ ಹುದ್ದೆ ಸ್ಥಾನಗಳಿಗೆ ಪೈಪೋಟಿ ಪದವಿ ಪುರಸ್ಕಾರಗಳ ಹಿಂದೆ
ಹೋಗುವುದು …………. ಇತ್ಯಾದಿಗಳ ಸರಮಾಲೆ – ನಮ್ಮ ಬಗ್ಗೆ ಡಂಗುರ ಸಾರುವ ವ್ಯಕ್ತಿ ಅಥವಾ ವೇದಿಕೆ ಬೇಕೆನ್ನುವ ಅವ್ಯಕ್ತ ಮನದಾಳದ ನೋವಿನ ಪ್ರತೀಕ
ನಮ್ಮ ಬಗ್ಗೆ ಮಾಹಿತಿ ಕೊಟ್ಟರೆ ನಮಗೆ ತೊಂದರೆ ಕಟ್ಟಿಟ್ಟ ಬುತ್ತಿ , ನಿಮ್ಮ ಸಲಹೆ ಏನು ?
ನಮ್ಮ ಮಾಹಿತಿ ಬೇರೆ ಬೇರೆ ಸ್ಥಳಗಳಲ್ಲಿ – ಸಾಮಾಜಿಕ ಜಾಲತಾಣ ಇನ್ನಿತರ ವಿಷಯಗಳಲ್ಲಿ ಜಾಗತಿಕವಾಗಿ ಪ್ರಚಾರ ಮಾಡಿ ಆಗಿರುತದೆ. ಪರಿಚಯ ಭಾವಚಿತ್ರ ಸಹಿತ ಯಾ ಭಾವಚಿತ್ರ ರಹಿತ , ಮೊಬೈಲ್ ನಂಬರ್ ಪ್ರಕಟಣೆ ಬೇಕಿದ್ದರೆ ಮಾತ್ರ ಇತ್ಯಾದಿ ನೀವು ಕೊಟ್ಟರೆ ವೇದಿಕೆ ಇರುವುದನ್ನು ಜನರಿಗೆ ತಿಳಿಸುವ ಕೆಲಸ ಮಾಡುತಿದ್ದೇವೆ. ನಾನು ಏನನ್ನಾದರೂ ಸಾಧಿಸಬೇಕೆಂಬ ಉದ್ದೇಶ ಗುರಿ ಛಲ ಇದ್ದರೆ ಮಾತ್ರ ಬದುಕಿನಲ್ಲಿ ಸಾಧನೆ ಮಾಡಲು ಸಾಧ್ಯ
ಈ ಪ್ರಕಟಣೆಗೆ ಕಾಲಮಿತಿ ಇದೆಯಾ ?
ಇಲ್ಲ , ಈ ಸಮುಸ್ಟೆ ನಮ್ಮ ನಿಮ್ಮ ಸಹಕಾರದೊಂದಿಗೆ ಬಾಳುವಷ್ಟು ಕಾಲ ಇರುತದೆ
ನಮ್ಮ ಬೇರೆ ಬೇರೆ ಸಂಘಗಳ ಶಾಶ್ವತ ಪ್ರಕಟಣೆಗೆ ಅವಕಾಶ ಇದೆಯಾ ?
ಖಂಡಿತಾ ಇದೆ , ಸಂಕ್ಷಿಪ್ತ ಸಮಗ್ರ ಜೀವನ ಚರಿತ್ರೆ ರೂಪದಲ್ಲಿ ಕನಿಷ್ಠ ಸೇವಾ ಶುಲ್ಕದೊಂದಿಗೆ ಪ್ರಕಟಿಸಬಹುದು
ಒಕ್ಕೂಟಕ್ಕೆ ಯಾವುದೇ ರೀತಿಯಲ್ಲಿ ಆದಾಯ ಇದೆಯಾ ?
ಒಕ್ಕೂಟಕ್ಕೆ ೩೦% ವ್ಯಕ್ತಿಗೆ ೨೦% ಸೇವಾ ಶುಲ್ಕದಲ್ಲಿ ಪಾಲುದಾರಿಕೆ ಇದೆ
ನಮಗೆ ಫೇಸ್ಬುಕ್ ವಾಟ್ಸಾಪ್ ಇರುವಾಗ ಶುಲ್ಕ ಪಾವತಿಸಿ ಮಾಡುವ ಕೆಲಸಕ್ಕೆ ಯಾರಾದರೂ ಬರುವ ಸಾಧ್ಯವಿದೆಯೆ ?
ಕೇವಲ ಸೇವಾ ಶುಲ್ಕ ೧೦೦ ರೂಪಾಯಿ ಮಾತ್ರ ಜೀವಮಾನದಲ್ಲಿ ಭರಿಸುವ ವ್ಯಕ್ತಿ ಇಲ್ಲಿ – ವರುಷ ಒಂದಕ್ಕೆ ಮೊಬೈಲ್ ಖರೀದಿಗೆ ಕನಿಷ್ಠ ಐದು ಸಾವಿರ ಮತ್ತು ಮಾಸಿಕ ಪ್ಯಾಕೇಜಿಗೆ ೨೦೦ ವೆಚ್ಚ ಮಾಡುವ ವ್ಯಕ್ತಿಗೆ ಹೋಲಿಕೆ ಮಾಡಿ – ಇಷ್ಟು ಮಾತ್ರವಲ್ಲದೆ ಈ ಜ್ಞಾನವಿಲ್ಲದ ಮತ್ತು ಜೀವಂತವಾಗಿರದ ಕೋಟಿಗಟ್ಟಲೆ ಜನರಿಗೆ ಸಹಕಾರಿಯಾಗಬಲ್ಲ ನಮ್ಮ ಕೆಲಸವನ್ನು ವಿಬ್ಬಿಣ್ಣ ದೃಷ್ಟಿಕೋನದಲ್ಲಿ ಅಳೆದು ಅಂತಿಮವಾಗಿ ಒಂದು ತೀರ್ಮಾನಕ್ಕೆ ನಾವು ಬರೋಣ.
ಯಾಕೆ ನಮಗೆ ಅಪ್ಲೋಡ್ ಮಾಡಲು ಬಿಡುವುದಿಲ್ಲ ?
ವ್ಯವಸ್ಥೆಯ ಮೂಲ ಸ್ವರೂಪ ಸಂಪೂರ್ಣ ನಾಶಮಾಡುವುದು ಮಾತ್ರವಲ್ಲ ಅಣುಬಾಂಬುಗಳನ್ನು ಈಗಾಗಲೇ ಜನರ ಕೈಗೆ ಕೊಟ್ಟುದರ ಫಲಿತಂಶ ಸಮಾಜದ ಮುಂದೆ ಇದೆ. ನಾವು ಅಸ್ತ್ರವನ್ನು ಜನಸಾಮಾನ್ಯರಿಗೆ ಕೊಡುವ ಕೆಟ್ಟ ಭಾವನೆಯಿಂದ ದೂರ ಇರುತೇವೆ.
ಮುಂದುವರಿಯುವುದು