ಸಾರ್ವಜನಿಕ ಗಣೇಶೋತ್ಸವ ಬಹುಪಾಲು ಒಂದೇ ದಿನ ಆಚರಿಸುತಿದ್ದು – ಜನಸಾಮಾನ್ಯರು ಕೇವಲ ಬೆರಳೆಣಿಕೆ ಗಣೇಶೋತ್ಸವಗಳಲ್ಲಿ ಪಾಲ್ಗೊಳ್ಳಲು ಸಾಧ್ಯವೆಂಬ ಖಟುಸತ್ಯ ಅರಿತ ಮುಂಚೂಣಿಯಲ್ಲಿರುವ ನಾವು ಆದುನಿಕ ಮಾಧ್ಯಮಗಳಾದ ಫೇಸ್ಬುಕ್ ವಾಟ್ಸಪ್ಪ್ ಯೂಟ್ಯೂಬ್ ವಿಡಿಯೋ ಇತ್ಯಾದಿಗಳನ್ನು ಸದುಪಯೋಗ ಮಾಡಿ ಪ್ರತ್ಯಕ್ಷ ಪರೋಕ್ಷ ಸಕಲ ಹಬ್ಬಗಳ ಸವಿಯನ್ನು ಮಾನವಜನಾಂಗಕ್ಕೆ ಉಣಬಡಿಸುವ ವ್ಯವಸ್ಥೆ ನಮ್ಮಿಂದ ಆಗಬೇಕಾಗಿದೆ. ಕೊಲೆ ಸುಲಿಗೆ ಕಳ್ಳತನ ವ್ಯಭಿಚಾರ ಅಪಘಾತ ಇತ್ಯಾದಿ ಸಮಾಜಘಾತಕ ವಿಷಯಗಳು ಮಾತ್ರ ತುಂಬಿ ತುಳುಕುವ ಮಾಧ್ಯಮ ಕ್ಷೇತ್ರ ಹಂತ ಹಂತವಾಗಿ ಧನಾತ್ಮಕ ವಿಷಯಗಳು ಮುನ್ನುಗ್ಗಿ ತಮ್ಮ ಸಾಮ್ರಾಜ್ಯ ಸ್ಥಾಪನೆ ಮಾಡಬೇಕಾಗಿದೆ.
ಹೊಸ ಹೊಸ ಆವಿಸ್ಕಾರಗಳತ್ತ ಮುಂದೆ ಸಾಗುವ ಯುವ ಜನಾಂಗ – ಸಣ್ಣ ಪುಟ್ಟ ವಿಡಿಯೋಗಳನ್ನು ಬೇರೆ ಬೇರೆ ವಿಷಯಗಳಲ್ಲಿ ಮಾಡಿ ಯೂಟ್ಯೂಬ್ ಅಪ್ಲೋಡ್ ಮುಖಾಂತರ ಸಂಪಾದನೆ ಹಾದಿ ತುಳಿಯುತಿರುವವರಿಗೆ ಹಬ್ಬಗಳಲ್ಲಿ ಅವಕಾಶವನ್ನು ಕೊಟ್ಟರೆ ವಿಭಿನ್ನ ಉದ್ಯಮಗಳ ಉಗಮ ಸಮಾಜದ ಉನ್ನತಿಗೆ ನಮ್ಮ ಪಾಲಿನ ಕೊಡುಗೆ ಕೂಡ ಆಗಬಹುದು .
ಯಾವ ಯಾವ ವಿಷಯಗಳನ್ನು ಪ್ರಚಾರ ಮಾಡಬಹುದು
ಪೂಜೆಯ ಕೆಲವು ತುಣುಕುಗಳ ವಿಡಿಯೋ
ವ್ಯವಸ್ಥೆಯ ಕಿರು ವಿಡಿಯೋ
ಬೇರೆ ಬೇರೆ ಸಾಂಸ್ಕೃತಿಕ ಕಾರ್ಯಕ್ರಮಗಳ
ಸಭಾ ಕಾರ್ಯಕ್ರಮದ ಬಗ್ಗೆ
ಶೋಭಾಯಾತ್ರೆಯ ಬಗ್ಗೆ
ಅತಿ ಅಮೂಲ್ಯ ಸಂಪದ್ಭರಿತ ಭಾಷಣದ ತುಣುಕುಗಳು
ಉಪಯೋಗವಿಲ್ಲದ ಜಮಉಗ್ರಾಣ ಸೇರಿ ಮುಂದಕ್ಕೆ ಕಸದ ಬುಟ್ಟಿ ಸೇರುವ ಸ್ಮರಣಿಕೆಗಳನ್ನು ಮಿತಿಗೊಳಿಸಿ ಯಾ ಬದಲಿಸಿ ನಿತ್ಯ ಬಳಕೆ ಬಟ್ಟೆ ಪಾತ್ರ ಅಥವಾ ಆನಲೈನ್ ಸ್ಮರಣಿಕೆಗೆ ಒತ್ತು ಕೊಡುವತ್ತ ಗಮನವಿರಲಿ
ಪ್ರಚಾರ ಸಮಿತಿ ಪ್ರಸಾರ ಸಮಿತಿಯ ಜವಾಬ್ದಾರಿಯೊಂದಿಗೆ ಚಿಂತನ ಮಂಥನ ನಡೆಸಿ ಅನುಷ್ಠಾನಕ್ಕೆ ದುಮುಕಿದಾಗ ಊರಿನ ಹಬ್ಬ ಜಾಗತಿಕ ಮಟ್ಟಕ್ಕೆ ದಾಪುಗಾಲು ಹಾಕುವ ಸುಯೋಗ ನಮ್ಮದಾಗುವ ಕನಸನ್ನು ನನಸಾಗಿಸೋಣ