ಇಚ್ಲಂಪಾಡಿ: ನೇರ್ಲ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇದರ ಹಳೆ ವಿದ್ಯಾರ್ಥಿ ಸಂಘದ ಸಭೆಯು ದಿನಾಂಕ 29.10.2023 ಭಾನುವಾರದಂದು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಕುಮಾರ್.ಬಿ ಬದನೆ ಇವರ ಅಧ್ಯಕ್ಷತೆಯಲ್ಲಿ ನೇರ್ಲ ಶಾಲೆಯಲ್ಲಿ ನಡೆಯಿತು.
ಸಭೆಯಲ್ಲಿ ಸಂಘದ ನೂತನ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಶಶಿಧರ ಪಿ. ಪೊಯ್ಯೆತ್ತಡ್ಡ, ಅಧ್ಯಕ್ಷರಾಗಿ ತಿರುಮಲೇಶ್ವರ ಬಿಜೇರು, ಉಪಾಧ್ಯಕ್ಷರಾಗಿ ರೆಜಿ ಕಲರ್ಬಾ, ಕಾರ್ಯದರ್ಶಿಯಾಗಿ ದುರ್ಗಾ ಪ್ರಸಾದ್ ಕಂಚಿನಡ್ಕ, ಕೋಶಾಧಿಕಾರಿಯಾಗಿ ಸಚಿನ್ ನೇರ್ಲ ಇವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು.
ಸಭೆಯಲ್ಲಿ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಯಶ್ರೀ ಎಸ್, ಎಸ್‌ಡಿಎಂಸಿ ಅಧ್ಯಕ್ಷ ವಸಂತ ಬಿಜೇರು, ಶಿಕ್ಷಕ ಗಿರೀಶ್ ಹಾಗೂ ಊರಿನ ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.