ಅಯೋಧ್ಯೆ ತೀರ್ಥ ಕ್ಷೇತ್ರದಿಂದ ಆಗಮಿಸಿರುವ ಪವಿತ್ರ ಮಂತ್ರಾಕ್ಷತೆಯ ವಿತರಣೆ ಕಾರ್ಯಕ್ರಮಕ್ಕೆ ಇಂದು ಬೆಳಗ್ಗೆ ಇಚ್ಲಂಪಾಡಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಚಾಲನೆ ನೀಡಿದ್ದಾರೆ.
ಅತ್ಯಂತ ಶ್ರದ್ಧಾ ಭಕ್ತಿಯಿಂದ ಎಲ್ಲರೂ ಜೈ ಶ್ರೀರಾಮ್ ಘೋಷಣೆ ಕೂಗುವ ಮೂಲಕ ಸಂತಸ ಹಂಚಿಕೊಂಡರು.ಕಾರ್ಯಕ್ರಮದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಈಶ್ವರಪ್ರಸಾದ್ ಪಿ ವಿ ಶಾಸ್ತ್ರಿ ,ದೇವಸ್ಥಾನ ಹಾಗೂ ದೈವಸ್ಥಾನಗಳ ಆಡಳಿತ ಸಮಿತಿಗಳ ಅಧ್ಯಕ್ಷರುಗಳು , ಸದಸ್ಯರುಗಳು ,ವಿವಿಧ ಭಜನಾ ಮಂಡಳಿಯ ಅಧ್ಯಕ್ಷರುಗಳು,ಸಂಘದ ಕಾರ್ಯಕರ್ತರು ಉಪಸ್ಥಿತರಿದ್ದರು.
ಸಿದ್ಧಿ ವಿನಾಯಕ ಭಜನಾ ಮಂದಿರ ನೇರ್ಲದಲ್ಲಿ ನಡೆದ ಸಭೆಯಲ್ಲಿ ಗ್ರಾಮದ ವಿವಿಧ ವಾರ್ಡುಗಳ ಮನೆ ಮನೆಗೆ ಹಂಚಲು ಕಾರ್ಯಕರ್ತರ ತಂಡ ರಚಿಸಿ ವ್ಯವಸ್ಥಿತವಾದ ರೀತಿಯಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಯಿತು.
ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದ ಲೋಕಾರ್ಪಣೆಯಾಗುತ್ತಿದ್ದು,ಈ ಪ್ರಯುಕ್ತ ಕಳೆದ ತಿಂಗಳು ಅಯೋಧ್ಯೆಯಿಂದ ದೇಶಾದ್ಯಂತ ಎಲ್ಲಾ ಗ್ರಾಮಗಳಿಗೂ ಆಗಮಿಸಿರುವ ಪವಿತ್ರ ಮಂತ್ರಾಕ್ಷತೆಗೆ ನಿರಂತರ ಪೂಜೆ, ರಾಮ ನಾಮ ಮಂತ್ರ ಪಠಣ ಸಲ್ಲಿಸಲಾಗಿದ್ದು, ಜ.1ರಿಂದ ಗ್ರಾಮದ ಪ್ರತೀ ಹಿಂದೂ ಬಾಂಧವರ ಮನೆಗೆ ವಿತರಿಸುವ ಕಾರ್ಯ ನಡೆಯಲಿದೆ .ಇಂದಿನಿಂದ ಜನವರಿ 15ರ ವರೆಗೆ ಮನೆ ಮನೆಗೆ ಮಂತ್ರಾಕ್ಷತೆ ವಿತರಣೆ ಅಬಿಯಾನ ಜರುಗಲಿದ್ದು, ಮಂತ್ರಾಕ್ಷತೆಯೊಂದಿಗೆ ಶ್ರೀರಾಮ ದೇವರ ಭಾವಚಿತ್ರ ಹಾಗೂ ಆಮಂತ್ರಣ ಪತ್ರಿಕೆಯನ್ನು ನೀಡಲಾಗುತ್ತಿದೆ.
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಹಿಂದುಗಳ ಬಹುದೊಡ್ಡ ಕನಸಾಗಿತ್ತು. ಆದರೆ ಅದು ಇಷ್ಟೊಂದು ಸುಸೂತ್ರವಾಗಿ ಸಾಕಾರವಾಗುತ್ತದೆ ಎಂಬುದಾಗಿ ಯಾರು ಕೂಡ ಊಹಿಸಿರಲಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಚಾಣಾಕ್ಷತನ, ಯೋಜನೆ ಮತ್ತು ಯೋಚನೆಗಳಿಂದ ವ್ಯವಸ್ಥಿತ ರಾಮಮಂದಿರ ನಿರ್ಮಾಣವಾಗುತ್ತಿದೆ. ಈ ಪರ್ವ ಸಂದರ್ಭದಲ್ಲಿ ನಾವೆಲ್ಲರೂ ರಾಮನ ನಡೆ ಮತ್ತು ಕೃಷ್ಣನ ಬೋಧನೆಯಂತೆ ಬದುಕುವ ಸಂಕಲ್ಪ ಮಾಡಬೇಕು.