ದೇವಾಲಯಕ್ಕೆ ದಿನಾಲೂ ಹೋಗುವವರು, ವಾರಕ್ಕೊಮ್ಮೆ , ಗಂಡಸರು ಮಾತ್ರ ವಾರಕ್ಕೊಮ್ಮೆ , ಖುಷಿ ಬಂದಾಗ , ಕಷ್ಟ ಬಂದಾಗ, ಶುಭಕಾರ್ಯ ನಿಮಿತ್ತ, ವಿಭಿನ್ನ ಉದ್ದೇಶಕ್ಕಾಗಿ, ಶಾಲಾ ಪರೀಕ್ಷೆ, ಚುನಾವಣೆ ಸಲುವಾಗಿ -ಬೇರೆ ಬೇರೆ ಕಾರಣಕ್ಕಾಗಿ ಅನೇಕ ಸಲ, ಐಎಎಸ್ ಐಪಿಎಸ್ ಮುಂತಾದ ಹುದ್ದೆಗೋಸ್ಕರ – ಇತ್ಯಾದಿ ದೊಡ್ಡ ಪಟ್ಟಿ ನಮ್ಮ ಮುಂದೆ ಇದ್ದು – ದೇವಾಲಯಗಳನ್ನು ಭೇಟಿ ಮಾಡಿ ಅವರವರ ಶಕ್ತಿಗೆ ಅನುಗುಣವಾಗಿ ಸೇವೆ ಸಲ್ಲಿಸುವ ಪರಿಪಾಠ ನಮ್ಮಲ್ಲಿ ಬೆಳೆದು ಹೆಮ್ಮರವಾಗಿದೆ.
ದಿನಾಲೂ ದೇವಾಲಯಕ್ಕೆ ಹೋಗುವ ಪರಿಪಾಠ ಮಾಡಿಕೊಂಡವರು ಅತಿ ಶ್ರೀಮಂತರಾಗಿರುವುದು ನಮಗೆ ವಿಭಿನ್ನ ಜಾತಿ ಮತಗಳ ಜನರ ಬದುಕಿನ ಮೇಲೆ ದೃಷ್ಟಿ ಹಾಯಿಸಿದಾಗ ಗೋಚರವಾಗುವ ಖಟು ಸತ್ಯ. ಆದರೆ ಈ ಪಟ್ಟಿಯಲ್ಲಿ ದಿನಾಲೂ ದೇವಾಲಯದಲ್ಲಿ ಸಂಭಾವನೆಗೆ ಪೂಜೆ ಮಾಡುವವರು, ಕೆಲಸ ಮಾಡುವವರು ಹೊರತಾಗಿರುವುದು – ದೇವಾಲಯದಲ್ಲಿರುವುದು ಕಲ್ಲಿನ ಮೂರ್ತಿ , ದೇಹದಲ್ಲಿರುವುದು ಜೀವಂತ ಮೂರ್ತಿ ಅರಿತು ಬಾಳೆಂಬ ಸ್ಪಷ್ಟ ಸಂದೇಶ ಸಾರಿ ಸಾರಿ ಹೇಳುತಿದೆ.
ದಿನಾಲೂ ದೇವಾಲಯಕ್ಕೆ ಹೋಗಲು ಸಾಧ್ಯವಿಲ್ಲ ಎಂದು ಸಮರ್ಥಿಸಲು ನಮಗೆ ನೂರು ಕಾರಣಗಳು ಸಿಗಬಹುದು – ಇಚ್ಚಾಶಕ್ತಿ ಮನದಲ್ಲಿ ಮನೆಮಾಡಿದರೆ ದಿನಕ್ಕೆ ಒಂದು, ಎರಡು, ಮೂರೂ ಸಲ ಹೆಂಡ ಸಾರಾಯಿ ಬಾರ್ ಭೇಟಿ ನೀಡುವವರ ದಿನಚರಿ – ನಮಗೆ ಎಚ್ಚರಿಕೆ ಗಂಟೆ .
ಕನಿಷ್ಠ ವಾರಕ್ಕೊಮ್ಮೆ ದೇವಾಲಯಕ್ಕೆ ಹೋಗುವವರ ಆದರ್ಶ ಅನ್ಯರು ಪಾಲಿಸಿದರೆ – ದೇವಾಲಯ ಭಕ್ತರೆಲ್ಲರ ಮನೆಯಾಗಿ ಇರುತಿತ್ತು.
ನಾವು ಮನೆಯಲ್ಲಿದ್ದುಕೊಂಡು , ಕೆಲಸ ಮಾಡುತ್ತ, ಅನ್ಯ ಪದೇಶದಲ್ಲಿದ್ದರು , ಸಂಪರ್ಕ ಅಸಾಧ್ಯ ಸ್ಥಿತಿ ಇದ್ದರು – ದೇವಾಲಯದಲ್ಲಿ ಅತಿ ಪ್ರಾಚೀನವಾದ, ಅತಿ ಶ್ರೇಷ್ಠವಾದ, ನಿತ್ಯ ನಿರಂತರ ಮಾಡಬಹುದಾದ, ಪ್ರತಿಯೊಬ್ಬನ ಕೈಗೆ ಎಟಕುವ – ನಂದಾದೀಪ ಸೇವೆ – ದಿನಕ್ಕೊಂದು, ವಾರಕ್ಕೊಂದು, ತಿಂಗಳಿಗೊಂದು – ಪ್ರತಿಯೊಬ್ಬ ಮಾನವರು ಮಾಡುವ ದ್ರಡ ಸಂಕಲ್ಪ ನಾವು ಮಾಡೋಣ . ದೇವರ ನಿತ್ಯ ದರ್ಶನ ಬೆಳಕು ನಮಗೆ ಸಿಕ್ಕಿ ನಮ್ಮ ಬದುಕು ಪಾವನವಾಗುತ್ತೆದೆ