ವಾಹನ ಚಲಾಯಿಸುವ ಪ್ರತಿಯೊಬ್ಬರು – ಅದು ಎರಡು ಚಕ್ರ ,ನಾಲ್ಕು ಚಕ್ರ ಯಾ ಇನ್ನಿತರ ಯಾವುದೇ ವಾಹನ ಬೇಕಾದರು ಆಗಿರಲಿ – ನಮ್ಮನ್ನು ನಿತ್ಯ ನಿರಂತರ ಹೊತ್ತುಕೊಂಡು ಹೋಗಿ ಸರಿಯಾದ ಸಮಯದಲ್ಲಿ ಗುರಿ ಮುಟ್ಟಿಸಲು ಅವಕಾಶ ಕಲ್ಪಿಸುವ ಮಾರ್ಗ (ರಸ್ತೆ ) ತನ್ನ ಶರೀರದಲ್ಲಿರುವ ಹೊಂಡ ಕೆಸರು ಮಲೀನತೆ ಕಸದ ರಾಶಿ ಇತ್ಯಾದಿ ನೂರಾರು ನೋವುಗಳನ್ನು ಲೆಕ್ಕಿಸದೆ – ನಾವು ಇಂದು ಸಮಗ್ರ ಅಭಿವೃದ್ಧಿಗೆ ಬೆನ್ನೆಲುಬಾಗಿರುವ ಈ ಜೀವ ಇಲ್ಲದ ಜಡ ಜೀವಿಗೆ ವಾಹನದಲ್ಲಿ ಹೋಗುವವರು ಮತ್ತು ಚಾಲಕರು ಸೇರಿಕೊಂಡು ಮಾರ್ಗ ಸೇವಾ ಒಕ್ಕೂಟ ಬಗ್ಗೆ ಚಿಂತನ ಮಂಥನ ಅನುಷ್ಠಾನದತ್ತ ದಾಪುಗಾಲು ಹಾಕಲು ನೊಂದ ಹೃದಯದ ಮನಗಳ ಮಿಡಿತ ಬರಹ ಮೂಲಕ ವ್ಯಕ್ತವಾಗಿದೆ.
ರಸ್ತೆ ಕೆಲಸ ನಮ್ಮದಲ್ಲ ನಾವು ತೆರಿಗೆ ಕಟ್ಟುತ್ತೆವೆ – ಬೇಕಾದರೆ ಅವರು ಮಾಡಲಿ – ಮಾಧ್ಯಮದ ಮೂಲಕ ಟೀಕೆಗಳ ಮಹಾಪುರಾ – ಎಲ್ಲವನ್ನು ಗಣನೆಗೆ ತೆಗೆದುಕೊಂಡು – ನಮ್ಮಿಂದ ಯಾವುದು ಸಾಧ್ಯ ಅಷ್ಟನ್ನು ಮಾಡುವ – ನನ್ನ ನಮ್ಮ ನಮ್ಮ ದೇಶದ ಸಮಗ್ರ ಅಭಿವೃದ್ಧಿಗೆ – ಸ್ವಾರ್ಥ ಮನೋಭಾವನೆಯಿಂದ ಸೇವಾ ಕ್ಷೇತ್ರದತ್ತ ಪಯಣ ಬೆಳೆಸೋಣ.
ನಾವು ಮನಸು ಮಾಡಿದರೆ ನಮ್ಮ ವಾಹನ ಚಲಾಯಿಸುವ ಮಾರ್ಗ ಕೆಸರುಮಯಾಗಿದ್ದರೆ ಅದಕ್ಕೆ ಮುಕ್ತಿ ಹೊಂಡಮಯವಾಗಿದ್ದರೆ ಅದಕ್ಕೆ ಮುಕ್ತಿ ಒಂದೇ ದಿನದಲ್ಲಿ ಮಾಡಿ ಮುಗಿಸಬಹುದು – ಇತ್ತ ನಮ್ಮ ಗಮನ ಹರಿಸೋಣ
ಲಕ್ಷದಿಂದ ಕೋಟಿಯವರೆಗೆ ಬೆಲೆ ತೆತ್ತು ಖರೀದಿಸಿದ ನಮ್ಮ ವಾಹನಕ್ಕೆ ಹಾಕುವ ಒಂದು ದಿನದ ಇಂಧನ ಮೌಲ್ಯ ಇತ್ತ ಸೇವೆಗೆಂದು ಬಳಸೋಣ
ಇದರಿಂದ ನಮ್ಮ ವಾಹನದ ದುರಸ್ತಿ ವೆಚ್ಚ ಕನಿಷ್ಠ ಮಟ್ಟಕ್ಕೆ ತಲುಪಲಿದೆ
ಡಾಮರು ರಸ್ತೆಯನ್ನು ಹೊಂಡ ಆದ ಮರುದಿನವೆ ಮುಚ್ಚುವ ಗತ ಕಾಲದ ಕೆಲಸ ಮುಂದಕ್ಕೆ ಜಾರಿಗೆ ಬರಲಿ – ಇಲ್ಲದಿದ್ದರೆ ಸೇವಾ ಒಕ್ಕೂಟದಿಂದ ಆ ಕೆಲಸ ಆಗಲಿ
ನನ್ನ ನಮ್ಮ ನಾಡಿನ ದೇಶದ ಸಮಗ್ರ ಅತಿ ವೇಗದ ಅಭಿವೃದ್ಧಿ – ಕೆಸರು ಮುಕ್ತ ಗುಂಡಿ ಮುಕ್ತ ಸ್ವಚ್ಛ ರಸ್ತೆಯನ್ನು ಅವಲಂಬಿಸಿದೆ. ಎಂದು ರಣಕಹಳೆ ಮೊಳಗಿಸೋಣ