ವ್ಯಾಪಾರ ಗಿಡಗಳ ಜೊತೆಗೆ ದರೋಡೆ ಗಿಡಗಳು ಹುಟ್ಟಿ ಬೆಳೆದು ದಟ್ಟವಾದ ಕಾಡು ಮಾನವ ಕುಲಕೋಟಿಯನ್ನು ಸಂಪೂರ್ಣ ಆವರಿಸಿದೆ. ದರೋಡೆ ಗಿಡಗಳನ್ನು ಪೂರ್ತಿ ನಾಶ ಮಾಡಿ ಸೇವೆ ಮತ್ತು ವ್ಯಾಪಾರ ಗಿಡಗಳನ್ನು ಮಾತ್ರ ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ನಮ್ಮ ಮುಂದೆ ಇರುವುದನ್ನು ಮನಗಂಡು ಸೇವಾ ಒಕ್ಕೂಟ ಗಿಡಗಳನ್ನು ಪ್ರತಿ ಮಾನವನಿಗೂ ಹಂಚಿ – ಸೇವಾ ಗಿಡದಿಂದ – ಸರಿಯಾದ ರೀತಿಯಲ್ಲಿ ನಾಟಿಮಾಡಿ ಬೆಳೆಸಿ ಪೋಷಿಸಿದರೆ ಹಣದ ಮಳೆ ನಮ್ಮೆಲ್ಲರ ಪಾಲಿಗೆ ಸಿಗಲಿರುವ ವಿಷಯವನ್ನು ಜಾಗತಿಕ ಮಟ್ಟಕ್ಕೆ ಸಾರಬೇಕಾಗಿದೆ.
ಈ ನಿಟ್ಟಿನಲ್ಲಿ ನಾವು ಒಂದು ಹೆಜ್ಜೆ ಮುಂದೆ ಹೋಗಿ ದೇವಾಲಯ, ದೈವಾಲಯ ಬಸದಿ, ಚರ್ಚು, ಮಸೀದಿ ————– ಇತ್ಯಾದಿಗಳಲ್ಲಿ ಸೇವಾ ಒಕ್ಕೂಟವನ್ನು ಸ್ಥಾಪಿಸಿ ಸೇವಾ ಮನೋಭಾವನೆ ಗಿಡಗಳನ್ನು ಹಂಚಿ ನಮ್ಮ ಬದುಕಿನ ಪಾಲಿನ ಸ್ವರ್ಗ ನಮ್ಮ ಚಿಂತನ ಮಂಥನ ಅನುಷ್ಠಾನದಲ್ಲಿ ಅಡಗಿರುವುದನ್ನು ಸ್ಪಷ್ಟಪಡಿಸೋಣ.
ಹೆಚ್ಚಿನ ಮಾಹಿತಿಗಾಗಿ – ದೇವಾಲಯ ಸೇವಾ ಒಕ್ಕೂಟ – Temple Service Federation