ದೇವಾ ನೀ ಪರಾಕಾಯದೊಳಿದ್ದು ಮಾತಾಡುತಿರೆ
ಸುಜ್ಞಾನಿ ತಲೆತೂಗುತಿಹನು ಜ್ಞಾನಿ ಮುಖನಾಗಿಹನು
ಅಜ್ಞಾನಿ ನಿಬ್ಬೆರಗಾಗಿ ಅಪಹಾಸ್ಯ ಮಾಡುತಿಹನು ———————————————- ಅವ್ಯಕ್ತ
ಅಳಿದವರ ಗೋರಿ ಮಾಲ್ಪುದು
ಉಳಿದವರ ದಾರಿ ಮಾಲ್ಪುದು
ಸೇವಾ ಒಕ್ಕೂಟಗಳ ಗುರಿಯೆಂದ ——————————————————————- ಅವ್ಯಕ್ತ
ದೇವರ ಸೃಷ್ಟಿ ಮಾನವ .
ಮಾನವ ಸೃಷ್ಟಿ ಜಾತಿ
ದೇವರಿಗೆ ತಲೆ ಬಾಗೆಂದ ——————————————- ಅವ್ಯಕ್ತ
ವ್ಯಾಪಾರ ದರೋಡೆ ಬದುಕು ಇಂದು
ತ್ಯಾಗ ಸೇವಾ ಬದುಕು ಅಂದು
ಸೇವಾ ಬದುಕು ದಾರಿ ತೋರಿಸೆಂದ ——————————– ಅವ್ಯಕ್ತ
ಪ್ರಕೃತಿ ಮಾನವನಿಗೆ ಮುನಿದಿದೆ
ಜೀವರಾಶಿಗಳು ಮಾನವನಿಗೆ ಮುನಿದಿದೆ
ಮುನಿದವರಿಗೆ ಶರಣಾದರೆ ಬದುಕೆಂದ ———————————— ಅವ್ಯಕ್ತ
ದೇವಾ ಮಾನವರಲ್ಲಿ ಅವತರಿಸಿಹನು
ಸ್ವಾರ್ಥ ಮಾನವರಿಗೆ ಕಾಣದಿಹನು
ಅಂತರಂಗದ ಕಣ್ಣು ತೆರೆಯೆಂದ ——————————————— ಅವ್ಯಕ್ತ