ದೈವಕ್ಕೆ ಅರಮನೆ ಅಂದು
ದೈವಕ್ಕೆ ಸೆರೆಮನೆ ಇಂದು
ದೈವಕ್ಕೆ ಮನಮಂದಿರ ಮುಂದು ……………………..ಅವ್ಯಕ್ತ
ದೈವದ ಮರ್ಮವ ಅರಿಯದೆ
ದೈವಕ್ಕೆ ನೇಮವ ಮಲ್ಪರೆ
ದೈವದ ಕೋಪಕ್ಕೆ ತುತ್ತಾಗುತಿಹರು ………………….ಅವ್ಯಕ್ತ
ಧನ ಪಿಶಾಚಿ ದೈವಕ್ಕೆ ನೇಮ ಮಲ್ಪರೆ
ಧನ ಪಿಶಾಚಿ ದೇವರಿಗೆ ಪೂಜೆ ಮಲ್ಪರೆ
ದೈವ ದೇವರು ಕ್ಷೇತ್ರದಿಂದ ಓಡಿ ಹೋಗುತಿಹರು ……….. ಅವ್ಯಕ್ತ
ಮಾನವತೆ ಮರೆತು
ದೈವಕ್ಕೆ ಮೊರೆಯಿಡೆ
ದೈವ ರಕ್ಷಿಸುವುದೆಂತು …………………………ಅವ್ಯಕ್ತ
ದೇವರು ಬರೆದ ಬರಹ
ದೈವ ಓಧಿ ಹೇಳಿಹ
ಪಾಲಿಪುದು ಮನುಜ ಧರ್ಮವೆಂದ …………………ಅವ್ಯಕ್ತ
ದೈವದ ನುಡಿಕಟ್ಟು
ಕಟ್ಟುವುವದು ಮಾನವರ
ಒಂದಾಗಿ ಬಾಳೆಂದ ……………..ಅವ್ಯಕ್ತ
ದಾರಿಯಲ್ಲಿ ಹೋಗುವವರಿಗೆ ದೇವರು ಅಂದು
ದಾರಿಯಲ್ಲಿ ಹೋಗದವರಿಗೆ ದೈವ ಅಂದು
ದೈವ ದೇವರು ದಾರಿ ಕಾಣದಾಗಿಹರು ಇಂದು …………………..ಅವ್ಯಕ್ತ
ದೈವದ ನುಡಿಕಟ್ಟು ಅಂದು
ಪಾತ್ರದಾರಿ ನುಡಿಕಟ್ಟು ಇಂದು
ದೈವದ ನುಡಿಕಟ್ಟು ಬೇಕೆಂದ …………………..ಅವ್ಯಕ್ತ
ದೈವ ನ್ಯಾಯ ದೇವತೆ ಅಂದು
ದೈವ ನಾಟಕ ದೇವತೆ ಇಂದು
ದೈವ ನ್ಯಾಯ ದೇವತೆ ಮುಂದು ……………………ಅವ್ಯಕ್ತ
ದೈವದ ಶ್ರೇಷ್ಠ ಆಡಳಿತ ಅಂದು
ಮಾನವರ ಕನಿಷ್ಠ ಆಡಳಿತ ಇಂದು
ದೈವದ ಶ್ರೇಷ್ಠ ಆಡಳಿತ ಲೇಸೆಂದ …………………………….ಅವ್ಯಕ್ತ
ದೈವಾರಾಧನೆ ಬಹಿರಂಗ ನ್ಯಾಯಾಲಯ ಅಂದು
ದೈವಾರಾಧನೆ ಸನ್ಮಾನ ವೇದಿಕೆ ಇಂದು
ದೈವಾರಾಧನೆ ಮೂಲ ವೇದಿಕೆ ಬೇಕೆಂದ ……………………….ಅವ್ಯಕ್ತ
ದೈವ ಉಪಕಾರಿ ಅಂದು
ದೈವ ಅಪಕಾರಿ ಇಂದು
ಇದು ಮಾನವರ ಕೊಡುಗೆಂದ …………………..ಅವ್ಯಕ್ತ