ಇದು ಯಾಕೆ, ಯಾರಿಗಾಗಿ
ಬಹು ಪಾಲು ಕರಾವಳಿ ಸೀಮೆಯಲ್ಲಿರುವ ದೈವ ಆರಾಧಕರಿಗಾಗಿ
ದೈವ ದೈವಾರಾಧನೆ – ಮೂಢನಂಬಿಕೆ – ನಿಮ್ಮ ಉತ್ತರ
ಖಂಡಿತಾ ಅಲ್ಲ
ಹೇಗೆ ಹೇಳುತೀರಿ
ದೇವರು ದೈವ ಒಂದೇ ನಾಣ್ಯದ ಎರಡು ಮುಖಗಳು .ದಾರಿಯಲ್ಲಿ ನಡೆಯುವವನಿಗೆ ದೇವರು ತಪ್ಪಿದವನಿಗೆ ದೈವ – ತಪ್ಪಿದವನನ್ನು ಸರಿ ದಾರಿಗೆ ತರಲು.
ದೈವದ ಬಗ್ಗೆ ಸರಿಯಾದ ಮಾಹಿತಿ ನೀಡುವ ವ್ಯವಸ್ಥೆ ಎಲ್ಲಿಯಾದರೂ ಇದೆಯೋ
ಎಲ್ಲಿಯೂ ಕೂಡ ಇಲ್ಲ . ಅದಕ್ಕಾಗಿ ನಾವು ಇಲ್ಲಿ ಅವಕಾಶವನ್ನು ಕಲ್ಪಿಸುತಿದ್ದೇವೆ .
ದೈವ ಕೊಡುವ ತೊಂದರೆ ತಾಪತ್ರಯಗಳಿಂದ ಹೇಗ ಪಾರಾಗಬಹುದು.
ದೇವರ ನಡೆ, ನುಡಿ , ನಡವಳಿಕೆಗಳನ್ನು ಪಾಲಿಸಿದರೆ ಸಾಕು. ಯಾವುದೇ ದೈವ ಯಾರಿಗೂ ಕೂಡ ಏನು ಮಾಡುವುದಿಲ್ಲ
ನನಗೆ ಸರಿಯಾಗಿ ಅರ್ಥವಾಗುವ ಹಾಗೆ ಹೇಳಿ
ಪ್ರಪಂಚಲ್ಲಿರುವ ಎಲ್ಲವು ದೇವರ ಅಸ್ತಿ . ನಾವು, ಜೀವರಾಶಿಗಳು, ಪಂಚ ಭೂತಗಳು – ಎಲ್ಲವು ಕೂಡ . ನಾವು ಅವುಗಳ ಜೊತೆಗೆ ಬದುಕಬೇಕು ಹೊರತು, ಅದಕ್ಕೆ ವಿರುದ್ಧವಾಗಿ , ನಾಶಮಾಡಿ ಜೀವನ ನಡೆಸಿದಾಗ ನಾವು ತೊಂದರೆಗೆ ಸಿಲಿಕಿಕೊಳ್ಳುವುದು ನಮ್ಮಿಂದಾಗಿ , ಇದಕ್ಕೆ ಕಾರಣ ಕಂಡಿತಾ ದೈವಗಳಲ್ಲ
ಸುಮಾರು ೫೦ ರಿಂದ ೧೦೦ ವರುಷಗಳ ಹಿಂದೆ ಬಹಪಾಲು ದೈವಗಳು ಅರಮನೆಯಲ್ಲಿ , ಬೀಡುಗಳಲ್ಲಿ ,ಗುತಿನ ಮನೆಯಲ್ಲಿ , ಬಾರಿಕೆ ಮನೆಯ್ಲಲಿ ಇರುತಿತ್ತು. ಈಗ ದೈವಗಳಿಗೆ ಪ್ರತ್ಯೇಕ ಗುಡಿ ಮಾಡಿ ಪ್ರತಿಷ್ಠೆ ಮಾಡಿರುವುದು ಎಷ್ಟು ಸರಿ
ಮನೆಯಲ್ಲಿ ಮನದಲ್ಲಿ ಪ್ರತಿ ಮಾನವ ದೇವರನ್ನು ಮತ್ತು ದೈವವನ್ನು ತಾನೇ ಸ್ವತಃ ಪ್ರತಿಷ್ಠೆ ಮಾಡಬೇಕಾಗಿತು
ದೈವಗಳಿಗೆ ಸೆರೆಮನೆ ಮಾಡಿ ಕುಳ್ಳಿರಿಸಿ ತಾನು ಕೂಡ ಸೆರೆಮನೆ ವಾಸದ ಬದುಕು ಸಾಗಿಸುತಾನೆ..
………………………………………………ಮುಂದುವರಿಯುವುದು