“ನಿಮ್ಮಿಂದ ಆವಿಸ್ಕಾರಗೊಂಡು ಅತ್ಯಂತ ವೇಗದಲ್ಲಿ ಮುನ್ನಡೆಯುತಿರುವ ಸಂಸ್ಥೆಗಳಾದ ವಾಟ್ಸಪ್ಪ್ ಮತ್ತು ಫೇಸ್ಬುಕ್ – ಜನ ಮನ್ನಣೆ ಗಳಿಸಿ, ಜೀವನದ ವೇಗವನ್ನು ವೃದ್ಧಿಸಿ, ಅಂತರ್ಜಾಲದ ಅರಿವನ್ನು ಹುಟ್ಟಿಸಿ, ಮನೆ ಮಾತಾಗಿ , ಮನ ಮಾತಾಗಿ ಬದುಕಿನ ಅವಿಭಾಜ್ಜ ಅಂಗ ಹೆಮ್ಮರವಾಗಿ ಬೆಳೆದು ನಿಂತಿದೆ. ಇದಕ್ಕೆ ಸಮಸ್ತ ಮಾನವ ಬಂದುಗಳು ಚಿರಋಣಿ“
ಸಾಮಾಜಿಕ ಜಾಲತಾಣಗಳ ಪೈಕಿ ಮುಂದಿರುವ ಇವುಗಳನ್ನು ಅತಿ ಹೆಚ್ಚು ಜನರು ಬಳಸುತಿದ್ದಾರೆ. ಮಾಧ್ಯಮ ಸ್ಥಾನವನ್ನು ಪಡೆದುಕೊಂಡಿರುವುದರಿಂದ ಕೆಲವೇ ಕ್ಷಣಗಳಲ್ಲಿ ಸಂದೇಶಗಳು ಜಾಗತಿಕ ಗಮವನ್ನು ತನ್ನತ್ತ ಸೆಳೆಯಬಲ್ಲ ಸಾಮರ್ಥ್ಯವಿದ್ದು ಬೇಕು ಬೇಡದ ವಿಷಯಗಳು ಮಾನವ ಬದುಕಿನಲ್ಲಿ ಸೇರಿಕೊಂಡು – ಬೇಡದ ವಿಷಗಳ ಅಧಿಪತ್ಯ ಮೆರೆದು ಸಮಾಜದ ಸ್ವಾಸ್ತ್ಯ ಹದಗೆಡುವ ಅವಕಾಶಗಳು ಇವೆ .
ಮಾಧ್ಯಮ ಪ್ರಪಂಚದ ದಿಕ್ಕನ್ನೇ ಬದಲಿಸಬಲ್ಲ ಪ್ರಬಲ ಆಯುಧ – ಒಂದು ಕಾಲದಲ್ಲಿ ಬುದ್ದಿ ಜೀವಿಗಳ ಅಂಕಿತದಲ್ಲಿದ್ದು – ಜನ ಸಾಮಾನ್ಯ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತಿತ್ತು. ಆದರೆ ಅದು ಇಂದು ಜನ ಸಾಮಾನ್ಯರ ಕೈಗೆ ಸಿಗುತಿದ್ದು, ಮಾಧ್ಯಮ ಕಸದ ತೊಟ್ಟಿಯಂತೆ ಮಾಡುತಿರುವುದು ಗೋಚರಿಸುತಿದೆ. ಇದರ ಕೆಟ್ಟ ವಾಸನೆಯಿಂದ ದೇವಸ್ಥಾಗಳು, ಮಾನವ ಬದುಕು ನೋವಿನಿಂದ ನರಳುವಂತಾಗಿದೆ.
ಇದರ ಪರಿಣಾಮವಾಗಿ ಸಂಸ್ಥೆಗೆ ಕೆಟ್ಟ ಹೆಸರು ಬರುವುದು ಮಾತ್ರವಲ್ಲದೆ ಕೆಲವೊಂದು ದೇಶಗಳು ನಿರ್ಬಂಧ ಹೆರುವ ಸನ್ನಿವೇಶಗಳು ಎದುರಾಗುವುದು ಸ್ವಾಭಾವಿಕ. ಈ ನಿಟ್ಟಿನಲ್ಲಿ ಸಂಸ್ಥೆಯಿಂದಲೇ ಒಂದು ಸೂಚನಾ ಫಲಕ ತೆರೆದ ಕೂಡಲೇ ಬಂದು – ಅದರಲ್ಲಿ ಬಳಕೆದಾರರಿಗೆ ಅರಿವು , ಜಾಗ್ರತಿ , ಪರಿಣಾಮ , ಮುಂದೆ ಬಳಕೆದಾರ ಅನುಭವಿಸಬೇಕಾದ ಕಷ್ಟ ನಷ್ಟದ ವಸ್ತು ಸ್ಥಿತಿ ಪ್ರಕಟವಾಗುವಂತೆ ಮಾಡಿದಲ್ಲಿ ಸಂಸ್ಥೆಯ ಜವಾಬಾದಾರಿ ಹೊಣೆ ಬಳಕೆದಾರನ ಹೆಗಲಿಗೆ ಹೋಗಿ – ಬಳಕೆದಾರರು ಜವಾಬ್ದಾರಿಯುತಾಗಿ ವರ್ತಿಸಿ – ಸಮಾಜಕ್ಕೆ ಈಗ ಬರುತಿರುವ ಕೆಟ್ಟ ವಾಸನೆ ತಪ್ಪಿ ಸುವಾಸನೆ ಮಾತ್ರ ಬೀರಿ – ನಿಮ್ಮ ಕೊಡುಗೆ ಅರ್ತಪೂರ್ಣವಾಗುವ ದಿನ ಹತ್ತಿರವಾಗುತದೆ.
ವಾಟ್ಸಪ್ಪ್ ಮತ್ತು ಫೇಸ್ಬುಕ್ ತೆರೆದಾಗ ಕಾಣಬೇಕಾದ ಸೂಚನಾ ಫಲಕಗಳ ವಿವರ
ಪ್ರಗತಿಪರ ಚಿಂತನ – ಮಂಥನ – ಅನುಷ್ಠಾನಗಳಿಗೆ ಮಾತ್ರ ಅವಕಾಶ
ಅಭಿವೃದ್ಧಿ ಪ್ರಕಟಣೆಗಳಿಗೆ ಮಾತ್ರ ಬಳಸಿ
ಇದರ ವ್ಯಾಪ್ತಿ ಜಾಗತಿಕ ಮಟ್ಟದ್ದು ಎಂಬುದು ನೆನಪಿರಲಿ
ನಿಮ್ಮ ಚಟುವಟಿಕೆ ಮೇಲೆ ಸಂಸ್ಥೆ ಮತ್ತು ನಿಮ್ಮ ದೇಶ ಸದಾ ಜಾಗ್ರತವಾಗಿರುತದೆ
ಸಂಸ್ಥೆಗೆ ನಿಮ್ಮ ಚಟುವಟಿಕೆಯಿಂದ ಆಗುವ ನಷ್ಟಕ್ಕೆ ನಿಮ್ಮ್ಮ ಹೊಣೆಗಾರಿಕೆ ಇರುತ್ತದೆ
ಈ ಪ್ರಪಂಚದಲ್ಲಿ ಯಾರು ಕೆಟ್ಟವರಿಲ್ಲ, ಕೆಟ್ಟ ವರ್ತನೆ ಪರಿವರ್ತನೆಗೆ ನಮ್ಮ ಪೂರಕ ಪ್ರಯತ್ನ ಅಗತ್ಯ
ಸಮಸ್ಯೆಯ ಮೂಲ ಅರಿತು ಪರಿಹಾರ ಅಗತ್ಯ – ಕತ್ತಿ ದೊಣ್ಣೆ ಹಿಡಿದು ಯುದ್ಧ – ಮಾಧ್ಯಮ ಸಂಸ್ಕೃತಿ ಅಲ್ಲ
ನಾವು ಒಳ್ಳೆಯವರದಾಗ ಪ್ರಪಂಚವೇ ಒಳ್ಳೆಯದಾಗುತದೆ
ಇದು ವಾಟ್ಸಪ್ಪ್ ಸಂಸ್ಥೆಯಿಂದ ಸಂಕಷ್ಟಕ್ಕೆ ಸಿಲುಕಿ ನೊಂದವರ ಮನದಾಳದ ಅಂಬೋಣ – ಸೂಕ್ತ ತೀರ್ಮಾನ ನಿಮ್ಮದು