Marriage Bulletin – ಮದುವೆ ಬುಲೆಟಿನ್

ಶೇರ್ ಮಾಡಿ

ಮದುವೆಯಲ್ಲಿ ಪ್ರೀತಿಸಿ ಆದ ಮದುವೆ, ಹಿರಿಯರ ಮುಂದಾಳತ್ವದಲ್ಲಿ ಮಾಡಿದ ಮದುವೆ , ಬಾಲ್ಯ ವಿವಾಹ ಎಂಬ ವಿಭಾಗಗಳಿದ್ದು – ಬಾಲ್ಯ ವಿವಾಹ ಕಾನೂನು ಬಾಹಿರವಾಗಿ ಅಸ್ತಿತ್ವ ಕಳೆದುಕೊಂಡಿದೆ. ಮಾನವ ಬದುಕಿನಲ್ಲಿ ಅತೀ ಪ್ರಾಮುಖ್ಯ ವಿಷಯಗಳ ಕುರಿತು ಶಿಕ್ಸಣವಾಗಲಿ ಸರಿಯಾದ ರೀತಿಯ ಮಾಹಿತಿಯಾಗಲಿ – ಇಲ್ಲದ ಕ್ಷೇತ್ರಗಳಾದ – ಪ್ರಧಾನಿ, ಮುಖ್ಯಮಂತ್ರಿ, ಸಂಸದ, ಶಾಸಕ, ಜನಪ್ರತಿನಿಧಿ ಜೊತೆಗೆ ಮದುವೆಯು ಕೂಡ ಸೇರಿದ್ದು – ಸುಖ ಶಾಂತಿ ನೆಮ್ಮದಿ ಬಾಳಿಗೆ – ವ್ಯಕ್ತಿಗಳೇ ಕಾರಣವೆಂಬ ಹಣೆಪಟ್ಟಿ ಕಟ್ಟುವ ಬದಲು ಸಮಾಜದ ಪ್ರಜೆಗಳಾದ ನಾವೆಲ್ಲರೂ ಬದ್ದರೆಂಬ ಅರಿವು ನಮಗೆ ಬೇಕಾಗಿದೆ.
ಪಕ್ಷಗಳಂತೆ ಜಾತಿಧರ್ಮಗಳು ಹುಟ್ಟಿಕೊಂಡಿದ್ದರು – ತಮ್ಮ ಮೂಲದ ಅರಿವಿಲ್ಲದೆ ಅವುಗಳು , ತಮ್ಮ ಕರ್ತವ್ಯ ಮರೆತು – ರಾಜಕೀಯ , ಶಿಕ್ಸಣ,ಆಸ್ಪತ್ರೆ ಮುಂತಾದ ತಮ್ಮದಲ್ಲದ ಕೆಲಸದಲ್ಲಿ ಮಗ್ನರಾಗಿ – ಧಾರ್ಮಿಕ ಬದುಕಿನ ಅರಿವಿನ ಶಿಕ್ಸಣ ಕೊರತೆ ನಮ್ಮನ್ನು ಕಾಡುತಿದೆ.
ಆಡಳಿತಕ್ಕೆ ಬೇಡವಾದದ್ದು – ಧರ್ಮಗುರುಗಳಿಗೆ ಆಸಕ್ತಿ ಇಲ್ಲದ್ದು – ಮಾನವ ಬದುಕಿಗೆ ಅನಿವಾರ್ಯವಾದದ್ದು – ಮಾಡುವವರು ಯಾರು ಎಂಬ ಪ್ರಶ್ನೆ ಪ್ರಶ್ನೆಯಾಗಿ ಉಳಿಯುವುದಕ್ಕೆ ಈ ವೇದಿಕೆ ಕೈಲಾದ ಸೇವೆಗೆ ಮುಂದಾಗಿದೆ
ಜೋಡೆತ್ತಿನ ಗಾಡಿಯಂತೆ ಮುನ್ನಡೆಯಬೇಕಾದ ಬದುಕು ಒಂಟಿ ಎತ್ತಿನ ಗಾಡಿಯಾಗಿ – ಮುಂದೆ ಅಸ್ತಿತ್ವವನ್ನೇ ಕಳೆದುಕೊಂಡ ಜೀವನ – ದುರಂತ ಮಾನವ ಬದುಕಿನ ಕತೆ – ಬಹುಪಾಲು ಗೋಚರಿಸುತಿರುವುದಕ್ಕೆ ಅಂತ್ಯ ಹಾಡಬೇಕಾಗಿದೆ.
ಮದುವೆ ಆದವರು ಒಟ್ಟಿಗೆ ಇದ್ದಾರೆ ಮಾತ್ರ ಸಾಲದು ಅವರು ಒಂದಾಗಿ ಬಾಳಿದಾಗ ಮಾತ್ರ ದಾಂಪತ್ಯ ಜೀವನಕ್ಕೆ ಅರ್ಥಬರುತದೆ. ಅದಕ್ಕೆ ಇಬ್ಬರ ತ್ಯಾಗ – ಮುನ್ನುಡಿ ಬರೆಯುತದೆ.
ಪ್ರಕೃತಿಯ ಮತ್ತು ದೇವರ ಕೊಡುಗೆ ಎರಡು ವ್ಯಕ್ತಿಗಳು ಒಂದೇ ರೀತಿಯಲ್ಲಿರಲು ಸಾಧ್ಯವಿಲ್ಲ . ಆದುದರಿಂದ ಹೊಂದಾಣಿಕೆ ಪದ ಜೀವನದುದ್ದಕ್ಕೂ ಅನಿವಾರ್ಯ. ಕೈಲಾಗದವನಿಗೆ ಕೋಪದ ಅಸ್ತ್ರ – ಎಂಬ ನಾಣ್ಣುಡಿಗೆ ಬಲಿಪಶುವಾಗಿ ಬದುಕಿಗೆ ಕೊಲ್ಲಿ ಇಡುವ ಕಾರ್ಯಕ್ಕೆ ಯಾವತ್ತು ಕೈಹಾಕಬಾರದು .

ಪತಿ ನಂಬದ ಸತಿ ಬಾಳು
ಸತಿ ನಂಬದ ಪತಿ ಬಾಳು
ಸುಖ ಶಾಂತಿ ನೆಮ್ಮದಿ ಬಲಿಗಿಟ್ಟ ಕಿಚ್ಚೆಂದ …………………………ಅವ್ಯಕ್ತ
ಸತಿ ಕೈಗೊಂಬೆಯಾದ ಪತಿ
ಪತಿ ಕೈಗೊಂಬೆಯಾದ ಸತಿ
ಜೀವಂತ ಶವಗಳೆಂದ …………………………………………………ಅವ್ಯಕ್ತ
ಮುಂದುವರಿಯುವುದು

See also  Sudarshan A. H , Nooji hosamane -Kadaba

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?