ಚಾಲಕರೊಂದಿಗೆ ಸಂವಾದ – Chat with the driver

ಶೇರ್ ಮಾಡಿ

ನಮಗೆ ಚಾಲಕರಿಗೆ – ಖಾಸಗಿ ಮತ್ತು ಸಾರ್ವಜನಿಕ – ಗುಂಡಿ(ಹೊಂಡ) ಕೆಸರು ಮುಕ್ತ ಸ್ವಚ್ಛ ಮಾರ್ಗ ಬೇಕಾಗಿದೆ – ಇದಕ್ಕೆ ನಾವು ಏನು ಮಾಡಬೇಕು ?
ಹೊಂಡ ಆದ ಕೂಡಲೇ ಅದನ್ನು ಮುಚ್ಚಿ ಸರಿ ಮಾಡುವ ಪದ್ಧತಿ ಒಂದು ಕಾಲದಲ್ಲಿ ಇತ್ತು ಅದು ಸೂಕ್ತವಾದುದು , ಅದನ್ನು ಮರುಜಾರಿಮಾಡುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಜವಾಬ್ದಾರಿಯನ್ನು ಹೊರಲು ಸ್ಥಳೀಯ ಆಡಳಿತ , ಸಂಘ ಸಮುಸ್ಥೆಗಳು, ವಿಭಿನ್ನ ರೀತಿಯ ಒಕ್ಕೂಟಗಳು, ಸ್ಥಳೀಯ ದೈವಸ್ಥಾನ ದೇವಸ್ಥಾಗಳು ವಾಹನ ಚಾಲಕರ ಮಾಲಕರ ಸಂಘಟನೆಗಳು ಒಟ್ಟಾರೆಯಾಗಿ ಮಾರ್ಗಗಳನ್ನು ವಾಹನದ ಮೂಲಕ ಬಳಸುವ ನಾವೆಲ್ಲರೂ ಮನಸ್ಸು ಮಾಡಿದರೆ ವರುಷ ಒಂದಕ್ಕೆ ಒಬ್ಬನಿಗೆ ಒಂದು ಗುಂಡಿ ಕೂಡ ಸಿಗಲಿಕ್ಕಿಲ್ಲ. ಸಾಮೂಹಿಕವಾಗಿ ನಾವೆಲ್ಲ ಪ್ರಜೆಗಳು ಜವಾಬ್ದಾರರು ಎನ್ನುವ ಅರಿವು ನಮ್ಮಲ್ಲಿ ಮೂಡಿ ಸ್ಪಂದಿಸಿದಾಗ ನಮ್ಮ ವಾಹನ ದೋಸಮುಕ್ತವಾಗಿ ನಮ್ಮ ಮಾರ್ಗ ನಮ್ಮ ಪಯಣದ ವೇಗಕ್ಕೆ ಪೂರಕವಾಗಿ ನಮ್ಮ ಬದುಕು ಅವಘಡರಹಿತ ಬಾಳಿಗೆ ಪೂರಕವಾಗಲಿದೆ. ನಾನು ನೀನು ಪದಗಳ ಬದಲಿಗೆ ನಾವು ಪದ ಬಳಸಿ ಬದುಕುವ ಕಲೆಯನ್ನು ಅಳವಡಿಸೋಣ.
ಬಾಡಿಗೆ ವಾಹನ ಚಲಾಯಿಸುವವರು ಅಜ್ಜ ನೆಟ್ಟ ಆಲದ ಮರದ ಕೆಳಗೆ ಬದುಕುವಂತೆ – ತಮ್ಮ ವಾಹನವನ್ನು ಬೆಳಿಗ್ಗೆ ಎಂಟರಿಂದ ಸಾಯಂಕಾಲ ಆರು ಗಂಟೆಯವರೆಗೆ ಪೇಟೆ ಪಟ್ಟಣಗಳಲ್ಲಿ ನಿಲ್ಲಿಸಿ ಕಾಯುವ ಪದ್ದತಿಗೆ ಸೂಕ್ತ ಪರಿಹಾರ ಇದೆಯಾ ?
ನಾವು ಆವಿಸ್ಕಾರಗಳತ್ತ ಮುನ್ನಡೆದಾಗ ಬದುಕಿನ ಸಂಕಷ್ಟಗಳು ಒಂದೊಂದೇ ಪರಿಹಾರವಾಗಿ ಸಮಯ ಶ್ರಮ ಹಣದ ಉಳಿತಾಯವಾಗುತದೆ. ಇತ್ತ ಚಿಂತನ ಮಂಥನ ಅನುಷ್ಠಾನದತ್ತ – ದೃಷ್ಟಿ ಹಾಯಿಸಿ – ಜನ ಮನದ ಅಭಿಪ್ರಾಯಗಳ ರೂಪದಲ್ಲಿ ಬಂದೆ ಸಲಹೆ ಕೆಳಗಿನಂತಿವೆ – ಅನುಕರಣೆ ವಯಕ್ತಿಕ ಅಭಿಪ್ರಾಯಕ್ಕೆ ಬಿಟ್ಟದ್ದು.
ಗ್ರಾಮೀಣ ಮಟ್ಟದಲ್ಲಿ ಎಲ್ಲಾ ರೀತಿಯ ವಾಹನಗಳ ಡೈರೆಕ್ಟರಿ ಭಾವಚಿತ್ರ ಸಹಿತ ಯಾ ರಹಿತ ಆನ್ಲೈನ್ ಪ್ರಕಟಣೆ ಮಾಡಿದರೆ – ಗ್ರಾಹಕರಿಗೆ ಮತ್ತು ಚಾಲಕರಿಗೆ ಪ್ರಯೋಜನ
ಪೇಟೆ ಪಟ್ಟಣಗಳಲ್ಲಿ ಬೇರೆ ಬೇರೆ ವಾಹನಗಳು ಬೇರೆ ಬೇರೆ ಡೈರೆಕ್ಟರಿ ಪ್ರಕಟಿಸಿದರೆ – ಪೇಟೆಯಲ್ಲಿ ಕಾಯುವ ಬದಲು ಮನೆಯಲ್ಲಿ ತಮ್ಮ ಕೆಲಸದೊಂದಿಗೆ ತನ್ನ ವೃತಿ ಕೆಲಸ ಮಾಡಲು ವಿಪುಲ ಅವಕಾಶವಿದೆ
ಬೆರಳ ತುದಿಯಲ್ಲಿ ಜನ ಸಾಮಾನ್ಯರಿಗೆ ಬೇಕಾದ ಯಾವುದೇ ವಾಹನ ಸಿಗುವ ಆನ್ಲೈನ್ ವ್ಯವಸ್ಥೆಗೆ ಚಾಲಕರಾದ ನಾವು ಅನುವುಮಾಡಿಕೊಟ್ಟರೆ – work from home ಕೆಲಸಕ್ಕೆ ದೊಡ್ಡ ದೊಡ್ಡ ಕಂಪನಿಗಳು ಅವಕಾಶ ಕಲ್ಪಿಸಿದ ಪಾಠವನ್ನು ಮಾನವರು ಬದುಕಿನ ಎಲ್ಲಾ ವಲಯಗಳಲ್ಲಿ ಅಳವಡಿಸಿ ಅಭಿವೃದ್ಧಿ ಪಥದಲ್ಲಿ ಮುಂದೆ ಸಾಗೋಣ

See also  Sheemathi Appi -Pattegudde

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?