
ಪ್ತತಿ ಪೇಟೆಯ ಪ್ರತಿ ಅಂಗಡಿಗಳ ಮಾಹಿತಿ ಒದಗಿಸುವ ಒಂದು ವ್ಯವಸ್ಥೆ ಹುಟ್ಟುಹಾಕಿ – ಬೆರಳ ತುದಿಯಲ್ಲಿ ಜನಸಾಮಾನ್ಯರಿಗೆ ಬೇಕಾದ ಬೇರೆ ಬೇರೆ ಅಂಗಡಿಗಳ ವಿವರ ಸಿಗುವಂತೆ ಮಾಡುವುದು ದೊಡ್ಡ ಉದ್ಯಮವಾಗಿ ಬೆಳೆಯುವ ಸಾಧ್ಯತೆ ಇದೆ. ಇದರಿಂದ ಆಗುವ ಪ್ರಯೋಜನಗಳು ಒಂದೆರಡಲ್ಲ ಹಲವಾರು. ನಾವು ದಿನ ನಿತ್ಯ ಹೋಗುವ ಪೇಟೆ ಆದರೂ ಕೂಡ ಅಲ್ಲಿಯ ಸಂಪೂರ್ಣ ಅರಿವು ಇಲ್ಲದೆ ಕೆಲವೊಂದು ಸಂದರ್ಭಗಳಲ್ಲಿ ಅನ್ಯರಲ್ಲಿ ಕೇಳಿ ತಿಳಿದುಕೊಳ್ಳಬೇಗುತದೆ. ಪರ ಊರಿನಿಂದ ಬಂದವರಿಗೆ ತನಗೆ ಬೇಕಾದ ಅಂಗಡಿಗಳನ್ನು ಪ್ರತಿ ಅಂಗಡಿಗಳಲ್ಲಿ ಹೋಗಿ ತಿಳಿಯುವ ಅನಿವಾರ್ಯತೆ ಎದುರಾಗುತದೆ. ಸ್ವತಃ ಅಂಗಡಿ ಮಾಲೀಕರ ಒಕ್ಕೂಟ ಯಾ ಇನ್ನಿತರ ಉದ್ಯಮಿ ಉದ್ಯೋಗ ಆಕಾಂಕ್ಷಿಗಳು ಈ ನಿಟ್ಟಿನಲ್ಲಿ ತೊಡಗಿಕೊಂಡು ಅಂಗಡಿಗಳ ಭಾವಚಿತ್ರ ಸಹಿತ ಯಾ ರಹಿತ ಡೈರೆಕ್ಟರಿ ಪ್ರಕಟಿಸುವ ಸಂಕಲ್ಪ ಮಾಡಿ – ತನ್ನದೇ ಬ್ಲಾಗ್ ಯಾ ಆನ್ಲೈನ್ ಶಾಪಿಂಗ್ ಕಾಂಪ್ಲೆಕ್ಸ್ ರೀತಿಯಲ್ಲಿ ಕಾರ್ಯನಿರ್ವಹಿಸುವ ವೆಬ್ ನಲ್ಲಿ ಪ್ರಕಟಿಸಿದರೆ ಅತಿ ಹೆಚ್ಚಿನ ಪ್ರಯೋಜನ ಜನಸಾಮಾನ್ಯರಿಗೆ ಆಗುತದೆ.
ಈ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸಂಪರ್ಕಿಸಿ – ೯೪೮೦೨೪೧೭೬೫