ಪ್ರಜಾಪದ್ಧತಿ ಅಂದು ಇಂದು ಮುಂದು
ವ್ಯಕ್ತಿ ಆಧಾರಿತ ಅರಸು ಪದ್ದತಿಗೆ ಬದಲಾಗಿ ಮಾನವರಾದ ನಾವು ಆವಿಷ್ಕರಿಸಿದ ಅತ್ಯಂತ ಸೂಕ್ತ ಆಡಳಿತ ವ್ಯವಸ್ಥೆ ಪ್ರಜಾಪದ್ಧತಿ. ಆಮದು ಮಾಡಿಕೊಂಡ ಈ ಯಂತ್ರಕ್ಕೆ ಬೆಳಕು ಹಾಯಿಸಿಧಾಗ –
ಹತ್ತು ಜನರು ಇರುವ ಪುಟ್ಟ ದೇಶದಲ್ಲಿ ಕಾನೂನು ಮಾಡುವವ ಒಬ್ಬ, ಅನುಷ್ಠಾನ ಮಾಡುವವ ಒಬ್ಬ, ತಪ್ಪು ಮಾಡಿದವನಿಗೆ ಶಿಕ್ಷಿಸುವವ ಒಬ್ಬ ಇದ್ದು ಎಲ್ಲರು ತಮ್ಮ ಕೆಲಸ ಸರಿಯಾಗಿ ಮಾಡಿದರೆ ಅದು ಪ್ರಜಾಪದ್ಧತಿ ಅಂದು
ದೇಶದಲ್ಲಿ ಇರುವ ೧೩೦ ಕೋಟಿ ಜನರ ಅರಿವು ಇಲ್ಲದೆ ಮಡಿದ ಕಾನೂನು, ಅನುಷ್ಠಾನದಲ್ಲಿ ಬಹುಪಾಲು ಕೊರತೆ, ತಪ್ಪು ಮಾಡಿದವರಿಗೆ ಕನಿಷ್ಠ ಮಂದಿಗೆ ಅತಿ ವಿಳಂಬ ಶಿಕ್ಷೆ – ಪ್ರಜಾಪದ್ಧತಿ ಇಂದು – ಬದುಕಿಗೆ ಪೂರಕ ಅಲ್ಲ – ಮಾರಕ
ದೇಶದ ಜನರ ಅಭಿವೃದ್ಧಿಗೆ ಮಾತ್ರ ಕಾನೂನು ರಚನೆ , ನೂರಕ್ಕೆ ನೂರು ಅನುಷ್ಠಾನ – ತಪ್ಪು ಮಾಡಿದವರಿಗೆ ನೂರಕ್ಕೆ ನೂರು ತ್ವರಿತ ಶಿಕ್ಷೆ – ಇದು ಅನ್ಯ ದೇಶಗಳಲ್ಲಿ ಆಗುತ್ತದೆ. ನಮ್ಮಲ್ಲಿ ಯಾಕೆ ಆಗುತ್ತಿಲ್ಲ. ಇಚ್ಚಾಶಕ್ತಿ ಕೊರತೆ ಕಾರಣ.
ಕಾನೂನು ಮಾಡುವುದನ್ನು ಬಿಟ್ಟು ಜವಾಬ್ದಾರಿ ಅರಿತು ಬದುಕೋಣ.
ಈ ದೇಶಕ್ಕೆ ಬಹು ಪಕ್ಷ ಪದ್ಧತಿ ಸೂಕ್ತವಲ್ಲ. ಎರಡೆ ಪಕ್ಷ ಸಾಕು.ಬಹು ಪಕ್ಷ ಬಹು ದರೋಡೆಕೋರರು
ಪಕ್ಷಗಳು ಲಾಟರಿ ಆಧಾರಿತ ಅಭ್ಯರ್ಥಿ ಆಯ್ಕೆ, ಅದೇ ಮಾದರಿಯಲ್ಲಿ ಮಂತ್ರಿ ಪದವಿ
ಒಂದು ತಪ್ಪಿಗೆ ಒಂದೇ ಶಿಕ್ಷೆ
ಶಿಕ್ಷೆ ಸಾಮಾಜಿಕ ರೋಗಕ್ಕೆ ಮದ್ದು
ನಾವು ಮಾಡಿದ ಕಾನೂನು ನಾವು ಪಾಲಿಸಲೇ ಬೇಕು – ಅನುಷ್ಠಾನ ಯೋಗ್ಯವಲ್ಲದ ಕಾನೂನು ರದ್ದತಿ
ದೇಶದಲ್ಲಿರುವವರು ಆ ದೇಶದ ಕಾನೂನು ಗೌರವಿಸಿ , ಪಾಲಿಸಿ ಬದುಕುವುದು ಅನಿವಾರ್ಯ
ಸ್ವಾರ್ಥ ಪ್ರಜಾಪ್ರತಿನಿದಿಗಳ ಆರಿಶದಿರಿ – ಮಾನವರಿಗಾಗಿ, ದೇಶಕ್ಕಾಗಿ – ಸೇವೆ ಮಾಡುವ ತ್ಯಾಗಿಗಳಿಗೆ ಅವಕಾಶ ಕೊಡಿ
ಸಮರ್ಥ ಆಡಳಿತ ಕಟ್ಟುನಿಟ್ಟಿನ ನಿಯಮದಿಂದ ಮಾತ್ರ ಸಾಧ್ಯ ಎಂದು ಅರಿತು ಮುನ್ನಗೋಣ.
ಏಳಿ ಏದ್ದೇಳಿ – ಯಾರು ಕೆಟ್ಟವರಲ್ಲ – ಕೆಟ್ಟತನ ಬಿಡೋಣ -ರೋಗಮುಕ್ತ ಸ್ವರ್ಗ ನಮ್ಮ ಬದುಕಾಗಲಿ