ಹುಟ್ಟಿನಿಂದ ಜಾತಿ ನಾಮಾಂಕಿತ ಪಡೆದ ವ್ಯಕ್ತಿ – ಆಚರಣೆಯಲ್ಲಿ ಹುಟ್ಟಿದ ಜಾತಿ ಧರ್ಮದಲ್ಲಿ ಹೇಳಿರುವುದನ್ನು ತನ್ನ ದಿನನಿತ್ಯ ಬಾಳಿನಲ್ಲಿ ಅನುಷ್ಠಾನ ಮಾಡಿದಾಗ ಮಾತ್ರ ಹುಟ್ಟಿನಿಂದ ಪಡೆದ ಜಾತಿ ಪಟ್ಟ ಅವನಿಗೆ ದಕ್ಕುತ್ತದೆ ಇಲ್ಲದಿದ್ದರೆ ಅವನ ಯಾ ಅವಳ ಮಾತಾಪಿತೃಗಳು ಈ ಜಾತಿಯವರು ಎಂದು ಹೇಳಲು ಸಾಧ್ಯ. ಆದರೆ ವಾಸ್ತವ ಹುಟ್ಟಿನಿಂದಲೇ ಜಾತಿ ಪಟ್ಟ ಅಲಂಕರಿಸಿ – ಜಾತಿ ಧರ್ಮದಲ್ಲಿ ತಿಳಿಯಪಡಿಸಿದ್ದಕ್ಕೆ ತಿಲಾಂಜಲಿಯಿತ್ತು – ಜಾತಿಗೆ ಮತ್ತು ಸಮಾಜಕ್ಕೆ ಕಂಟಕರಾಗಿ ಬದುಕುವ ಜನರನ್ನು ಮಾತ್ರ ನೋಡುವ ಶೋಚನೀಯ ಸ್ಥಿತಿ ನಮ್ಮದಾಗಿದೆ.
ಜಾತಿ ಜಾತಿ ಕಲಹ , ಜಾತಿಯವರೊಳಗೆ ಕಲಹ , ಜಾತಿ ಸಾಮ್ರಾಜ್ಜ ಕಟ್ಟಲು ಹೋರಾಟ ಮಾಡುತಿರುವ ಜಾತಿಗಳು ಇತ್ಯಾದಿ ಜಾತಿ ಹೆಸರಿನ ಭಯೋತ್ಪಾದಕರು. ಹುಟ್ಟು ಸಾವು ಮದ್ಯೆ ಸುಖ ಶಾಂತಿ ನೆಮ್ಮದಿ ಬಾಳಿಗೆ ರಹದಾರಿ ಜಾತಿಧರ್ಮ ಎಂಬುದನ್ನು ಮರೆತು ಬದುಕಿನ ದಾರಿ ಮದ್ಯೆ ಸಮರ ಮಾಡುತಿರುವ ನಾವು ದಾರಿ ತಪ್ಪಿ ಹೋಗುತಿರುವ ಸಂಕೇತ.
ಈ ನಿಟ್ಟಿನಲ್ಲಿ ಸರಿಯಾದ ದಾರಿಯನ್ನು ತೋರಿಸಬೇಕಾದ ವಿದ್ಯೆ – ಬದುಕಿಗೆ ಪೂರಕವಾದ ಜ್ಞಾನ ಸಂಪತ್ತನ್ನು ಕೊಡುವ ಬದಲು – ಬದುಕಿಗೆ
ಮಾರಕವಾದ ವಿಷಯಗಳತ್ತ ಕೇಂದ್ರೀಕೃತವಾದಂತೆ ಭಾಸವಾಗುತಿದೆ.
ನಾವು ನಮ್ಮ ನಮ್ಮ ಜಾತಿ ಧರ್ಮಾದ ವೇಷ ಭೂಷಣಗಳನ್ನು ಮಾಡಿಕೊಂಡು ಬದುಕುವ ಪರಿಪಾಠ ಬೆಳೆದು ಹೆಮ್ಮರವಾಗಿ ನಿಂತು – ನಿರ್ದಿಷ್ಟ ಜಾತಿಯ ನಾಟಕದ ಪಾತ್ರದಾರಿಗಳು ಪ್ರಸ್ತುತ ಸಮಾಜದಲ್ಲಿ ಗೋಚರಿಸುತಿದೆ.
ಪರಿಹಾರದತ್ತ ಚಿಂತಿಸಿದಾಗ – ಯಾರನ್ನು ಕೂಡ ತಪ್ಪಿತಸ್ಥ ದೃಷ್ಟಿಯಿಂದ ನೋಡದೆ – ಮಾನವಕುಲಕೋಟಿಯಾದ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಅರಿತು ನಾವೆಲ್ಲರೂ ಚಿಂತನ ಮಂಥನ ಅನುಷ್ಠಾನದತ್ತ ದಾಪುಗಾಲು ಹಾಕೋಣ.
ನಮಗೆ ಈ ವಿಷಯದ ಬಗ್ಗೆ ಸ್ಪಷ್ಟ ಅರಿವಿಗಾಗಿ ಕೆಲವು ಉದಾರಣೆಗಳು
ಹುಟ್ಟಿನಿಂದ ಯಾರು ಕೂಡ
ಪ್ರಧಾನಿಯ ಮಗ ಪ್ರಧಾನಿ ಆಗುವುದಿಲ್ಲ
ಡಾಕ್ಟರರ ಮಗ ಡಾಕ್ಟರ್ ಆಗುವುದಿಲ್ಲ
ವಕೀಲರ ಮಗ ವಕೀಲ ಆಗುವುದಿಲ್ಲ
ಶಿಕ್ಷಕರ ಮಗ ಶಿಕ್ಸಕ ಆಗುವುದಿಲ್ಲ
ಕೃಷಿಕನ ಮಗ ಕೃಷಿಕ ಆಗುವುದಿಲ್ಲ ……………ಹನುಮಂತನ ಬಾಲ ಮುಂದುವರಿಯುತಿದೆ
ಅಜ್ಞಾನವೆಂಬ ಕಣ್ಣಿನ ಪೊರೆ ಬದಿಗೆ ಸರಿಸಿ, ಜ್ಞಾನದ ಬೆಳಕಿನಿಂದ ನಮ್ಮ ನಮ್ಮ ಕರ್ತವ್ಯದತ್ತ ಗಮನ ಹರಿಸಿ, ನಮ್ಮ ನೆಮ್ಮದಿ , ನಮ್ಮ ಮನೆಯ ನೆಮ್ಮದಿ , ನಮ್ಮ ಜಾತಿಯವರ ನೆಮ್ಮದಿ , ನಮ್ಮ ಊರಿನ ನೆಮ್ಮದಿ , ನಮ್ಮ ರಾಜ್ಜ ದೇಶ ಪ್ರಪಂಚದ ನೆಮ್ಮದಿ ಕಾಣುವ ಸೌಭಾಗ್ಯ ನಮ್ಮದಾಗಲಿ