ದೇವರ ಬಗ್ಗೆ ಜಾತಿಗೊಂದು ಅಭಿಪ್ರಾಯ, ವ್ಯಕ್ತಿಗೊಂದು ಅಭಿಪ್ರಾಯ, ದಿನಕಳೆದಂತೆ ಅಭಿಪ್ರಾಯಗಳಲ್ಲಿ ಗೊಂದಲಗಳ ಮಹಾಪೂರ – ಕಟ್ಟ ಕಡೆಗೆ ಜನಸಾಮಾನ್ಯರು ಹತ್ತಿರ ಅಥವಾ ದೂರ ಆಗುವ ಮಾನವ ನಿರ್ಮಿತ ಜೀವಂತ ಶವದ ಬದುಕು ನಮ್ಮ ಪಾಲಿಗಿದೆ.ಸ್ವದೇಶಿ ವಿದ್ಯಯನ್ನು ಮೂಲೆಗುಂಪು ಮಾಡಿ ವಿದೇಶಿ ಶಿಕ್ಷಣ ಪದ್ಧತಿ ಅಳವಡಿಸಿದರ ಪರಿಣಾಮ ಬದುಕಿನ ವಿದ್ಯೆ ಸಿಗದೆ – ನಮ್ಮ ಮುಂದಿನ ಬದುಕು ಶಾಶ್ವತ ನರಕ.
ಇದು ನಮಗೆ ಮಾತ್ರವಲ್ಲ ನಮ್ಮ ವೈರಿಗೆ ಕೂಡ ಬೇಡ. ಅದಕ್ಕೆ ನಾವು ಏನು ಮಾಡಬೇಕು – ಪ್ರಜಾಪ್ರಭುತ್ವದ ನೆಲೆಯಲ್ಲಿ ನಿಂತು – ಚಿಂತನ , ಮಂಥನ ಮತ್ತು ಅನುಷ್ಠಾನದತ್ತ ದೃಷ್ಟಿ ಹಾಯಿಸೋಣ .
ದೇವರು ಇದ್ದಾರೊ?
ದೇವರು ಇದ್ದಾನೊ ಇಲ್ಲವೊ – ಪಂಚ ಬೂತಗಳಾದ – ಭೂಮಿ , ನೀರು, ಅಗ್ನಿ , ವಾಯು , ಆಕಾಶ – ಇವುಗಳು ಸದಾ ಯಾವುದೇ ತಡೆ ಇಲ್ಲದೆ ತನ್ನ ಕೆಲಷ ಮಾಡಬೇಕಾಗಿರುವುದು ಅನಿವಾರ್ಯ, ಇದಕ್ಕಾಗಿ ದೇವರೊ ಅಥವಾ ಪ್ರಕೃತಿಗೆ ಸದಾ ಕೃತಜ್ಞತೆ ಹೇಳುದೇ – ನಾವು ಮಾಡುವ ನಿಜವಾದ ಪೂಜೆ ಯಾ ಸಲ್ಲಿಸುವ ಅತ್ಯುನ್ನತ ಗೌರವ. ನಮ್ಮ ದೇಹವು ಪಂಚ ಬೂತಗಳಿಂದಲೇ ಆಗಿರುವುದರಿಂದ ನಮ್ಮ ಬದ್ಧತೆಯನ್ನು ಇಮ್ಮಡಿಗೊಳಿಸುತ್ತದೆ.
ದೇವರ ಮನೆ ದೇವಾಲಯ – ಬೇಕೇ ?
ಖಂಡಿತಾ ಬೇಡ – ಆದರೆ ಈ ವ್ಯವಸ್ಥೆ ಸೌಕರ್ಯಗಳು ನಮಗೋಸ್ಕರ. ಉನ್ನತ ಆದರ್ಶ ಸಮುಸ್ಕಾರಗಳು ನಮ್ಮಲ್ಲಿ ಬೆಳೆದು ನಾವು ಸುಖ ಶಾಂತಿ ನೆಮ್ಮದಿಯ ಬಾಳು ನಡೆಸಲು ಅನಿವಾರ್ಯ. ಒಳ್ಳೆಯ ವಾತಾವರಣ ವ್ಯಕ್ತ ಜೀವನಕ್ಕೆ ಅವಶ್ಯವಿದ್ದಂತೆ ಅವ್ಯಕ್ತ ಜೀವನಕ್ಕೆ ಬೇಕೇ ಬೇಕು.
ಇಂತಹ ದೊಡ್ಡ ದೊಡ್ಡ ವಿಷಯಗಳ ಬಗ್ಗೆ ನಿನಗೆ ಅರ್ಹತೆ ಅಧಿಕಾರ ಇದೆಯೋ ಇದ್ದಾರೆ ಕೊಟ್ಟವರು ಯಾರು ?
ಖಂಡಿತಾ ಅರ್ಹತೆ ಅಧಿಕಾರ ಇಲ್ಲ , ಯಾರು ಕೂಡ ಕೊಟ್ಟಿಲ್ಲ. ನನ್ನ ಮನದಾಳದಲ್ಲಿ ಕೊಳೆತು ನಾರುತಿರುವ ವಸ್ತುಗಳನ್ನು
ಹೊರಗೆ ಹಾಕಿದ್ದೇನೆ. ಶಾಶ್ವತ ಸ್ವಚೆತೆಗಾಗಿ ಅಂಗಲಾಚುತಿದ್ದೇನೆ.
ದೇವರಿಗೆ ಊಟ ಉಪಚಾರ , ಪೂಜೆ ………….ಬೇಕೇ?
ಖಂಡಿತಾ ಬೇಡ. ಇದು ನಾವು ಮಾಡಿಕೊಂಡ ವ್ಯವಸ್ಥೆ . ಬದುಕಿನ ಬಹು ಸಮಯ ಒಳ್ಳೆಯ ವಾತಾವರಣದಲ್ಲಿರಲು ನಮ್ಮ ಕೊಡುಗೆ. ಕಾಲ ಕಾಲಕ್ಕೆ ಹೊಸ ಹೊಸ ಆವಿಸ್ಕಾರಗಳು , ವಿಮರ್ಶೆಗಳು, ಈ ನಿಟ್ಟಿನಲ್ಲಿ ಕೆಲಷ ಮಾಡದ ಪ್ರತಿಫಲ.
ದೇವರಿಗೆ ನಾವು ಪೂಜೆ ಮಾಡಲು ಅನರ್ಹರೇ?
ಖಂಡಿತಾ ಅಲ್ಲ . ಪ್ರತಿಯೊಬ್ಬರೂ ಅರ್ಹರು. ಆದರೆ ದೇವಾಲಯದಲ್ಲಿ ಪೂಜೆ ಮಾಡಲು ಕೆಲವೊಂದು ನಿಯಮ, ಅನುಭ ಇತ್ಯಾದಿಗಳ ಅವಶ್ಯಕತೆ ಇದೆ. ಪ್ರತಿಯೋಬ್ಬರು ಮನದಲ್ಲಿ ಚೈತನ್ಯ ದೇವರನ್ನು ಪೂಜಿಸಲು ಅರ್ಹರು
ಪೂಜೆ ಮಾಡುವವರಲ್ಲಿ ಮೂರು ವಿಧ – ದುಡ್ಡಿಗಾಗಿ ಪೂಜೆ ಮಾಡುವವರು, ಪುಕ್ಕಟೆ ಪೂಜೆ ಮಾಡುವವರು, ನಿತ್ಯ ನಿರಂತರ ಪೂಜೆ ಮಾಡುವವರು – ಇದರಲ್ಲಿ ಯಾರು ಶ್ರೇಷ್ಠ ?
ನಿತ್ಯ ನಿರಂತರ ಪೂಜೆ ಮಾಡುವವರೇ ಶ್ರೇಷ್ಠ – ಅದು ಕಷ್ಟ ಸಾದ್ಯ – ಅದುವೇ ನಿಜವಾದ ತಪಸ್ಸು
ದೇವರಿಗೆ ಪ್ರತಿಯೊಬ್ಬರೂ ಪೂಜೆ ಮಾಡಿದರೆ ಅಥವಾ ಸಾಮೂಹಿಕ ಒಂದೇ ಪೂಜೆ – ಯಾವುದು ಸೂಕ್ತ ? ಏಕೆ ?
ಜನ ಸಾಮಾನ್ಯರೆಲ್ಲ ಸೇರಿ ಒಂದೇ ಪೂಜೆ ಮಾಡುವುದು ಸೂಕ್ತ ಮತ್ತು ಶ್ರೇಷ್ಠ.ನಾವು ಎಲ್ಲ ಸೇರಿ ಒಂದೇ ಬಯಕೆ ಅಂದರೇ ನಮ್ಗೆಲ್ಲಾ ಒಳಿತಾಗಲಿ ಎಂದು ಪ್ರಾರ್ಥಿಸಿದಾಗ ದೇವರ ಕೆಲಸ ಸುಲಭ. ವ್ಯಕ್ತಿಕ ಬಯಕೆಗಳೊಂದಿಗೆ ಪೂಜೆ ಮಾಡಿದಾಗ ಸರಕಾರದ ಮಂತ್ರಿ ಪದವಿ ಗಿಟ್ಟಿಸಿದಂತಾಗುತದೆ.
ಮುಂದುವರಿಯುವುದು