ಅರಸು ಪದ್ದತಿಯ ಯಜಮಾನ ಅರಸು. ಅಳಿಯ ಪದ್ಧತಿ ಅಥವಾ ಮಕ್ಕಳ ಪದ್ದತಿಯ ಅನುಸಾರ ಅರಸರಾಗುವುದು ವಾಡಿಕೆ ಆಗಿದ್ದರು ಕೆಲವೊಮ್ಮೆ ಹಕ್ಕುದಾರರು ಇಲ್ಲದ ಸಂದರ್ಭದಲ್ಲಿ ದತ್ತು ಸ್ವೀಕಾರ ಮಾಡಿ ಅರಸು ಪಟ್ಟ ಆಗುವುದು ಚಾಲತಿಯಲ್ಲಿದೆ.
ದೇಶಕ್ಕೆ ಸ್ವತಂತ್ರ ಸಿಕ್ಕಿದಾಗ ನಮ್ಮಲ್ಲಿದ್ದ ಸುಮಾರು ೧೫೦೦ ಅರಸರನ್ನು ಮನವೊಲಿಸಿ – ಪ್ರಜಾಪದ್ದತಿಯನ್ನು ದೇಶದಲ್ಲಿ ಅಳವಡಿಸಲಾಯಿತು. ಆದರೂ ಕೆಲವೊಂದು ದೇವರಿಗೆ ವಿಶೇಷ ಪೂಜಾ ಸಂದರ್ಭದಲ್ಲಿ ಮತ್ತು ದೈವ(ಶಕ್ತಿ) ಆರಾದಿಸುವಾಗ ಅಂದಿನ ಅರಸರ ಸಂತತಿಯವರು ಅರಸು ಪಟ್ಟ ಅಲಂಕರಿಸಿ ನಡೆಯಬೇಕಾದ ಕಾರ್ಯಕ್ರಮದಲ್ಲಿ ಅರಸರಾಗಿ ನಿಂತು ಮುನ್ನಡಿಸಿದರೆ ಮಾತ್ರ ಊರಿಗೆ , ಪ್ರದೇಶಕ್ಕೆ ಒಳಿತು ಎಂದು ಬದುಕು ಕಳಿಸಿದ ಪಾಠದಿಂದ ಈ ಒಂದು ಪದ್ಧತಿ ಅನುಕರಣೆಯಲ್ಲಿದೆ.
ಈ ಪಟ್ಟ ಅಲಂಕರಿಸಿದ ಅರಸು – ಒಂದು ರೀತಿಯಲ್ಲಿ ನೋಡಿದಾಗ – ಜೀವಂತ ಶವ. ಕಪ್ಪಾ ಕಾಣಿಕೆ ಇಲ್ಲ , ಯಾವುದೇ ಅಧಿಕಾರ ಇಲ್ಲ, ಅಸ್ತಿ ಇಲ್ಲ – ಅರಸನ ಪೂರ್ತಿ ಹೊಣೆಗಾರಿಕೆ ಇದೆ. ಈತ ದೈವ ದೇವರ ದೋಷ ಅವನ ರಾಜ್ಜದ ಜನರಿಗೆ ಬಾರದಂತೆ ನಿಲ್ಲುವ ತಡೆಗೋಡೆ ಮಾತ್ರ.
ನೂರಕ್ಕೆ ಸುಮಾರು ೯೦ % ಮಿಗಿಲಾದ ಅರಸು ಪಟ್ಟ ಇಂದು ಖಾಲಿಯಾಗಿದ್ದು – ಅಲ್ಲಿ ನಡೆಯಬೇಕಾದ ಕೆಲಸ ಕಾರ್ಯಗಳು ಬದಲಿ ವ್ಯವಸ್ಥೆ – ದೇವಸ್ಥಾನದಲ್ಲಿ ಪೂಜೆ ಮಾಡುವ ಭ್ರಾಹ್ಮಣರಿಂದ ತಕ್ಕ ಮಟ್ಟಿಗೆ ಮುಂದುವರಿಯುತ್ತದೆ .
ಈ ಬದಲಿ ವ್ಯವಸ್ಥೆ ಎಷ್ಟು ಸರಿ – ಅದಿಕೃತ – ಪಟ್ಟ , ಗಡಿ , ಭಾಮಾ ಆಗದೆ – ಮುಖ್ಯವಾಗಿ ಕರಾವಳಿ ಪ್ರದೇಶದಲ್ಲಿ ದೇವರ ಆರಾಧನೆ – ದೈವಾರಾಧನೆ – ನಾಟಕವಾದೀತೆ ಅಥವಾ ಅಸಹಾಯಕರಾಗಿ ತಮ್ಮಿಂದ ಸಾದ್ಯವಾದ ಈ ಕಿಂಚಿತ್ತು ಸೇವೆ ಸ್ವೀಕರಿಸಿ ಹರಸು ಎನ್ನುವ ಯಜಮಾನರ ಅರಣ್ಯ ರೋದನಕ್ಕೆ ದೈವ ದೇವರು ಸಂತುಷ್ಟರಾಗುವರೆ.
ಖಂಡಿತಾ ಸಾಧ್ಯವಿಲ್ಲದ ಮಾತು – ಆರಾಧಿಸಿಕೊಂಡು ಬರುವ ದೈವ ದೇವರಿಂದ ವ್ಯಕ್ತವಾಗುತ್ತಿದೆ . ಹಾಗಾದರೆ ಅದಕ್ಕೆ ನಾವು ಏನು ಮಾಡಬೇಕು
ದೈವ ಆರಾಧಕರ ಒಕ್ಕೂಟ ಮತ್ತು ದೇವರ ಆರಾಧಕರ ಒಕ್ಕೂಟ ಪ್ರತಿ ಊರಿನಲ್ಲಿ ಅಸ್ತಿತ್ವಕ್ಕೆ ಬಂದು ಚಿಂತನ , ಮಂಥನ – ಅನುಷ್ಠಾನದತ್ತ ನಾವೆಲ್ಲರೂ ದಾಪುಗಾಲು ಹಾಕಿದರೆ ಹಂತ ಹಂತವಾಗಿ ಪ್ರಗತಿ ಕಾಣಬಹುದು.
ಅರಸು ಪಟ್ಟವನ್ನು ಸ್ವೀಕಾರ ಮಾಡಿದ ಅರಸ – ದೇಶದ – ಅತ್ಯುನ್ನತ ಹುದ್ದಯಲ್ಲಿರುವ – ಪ್ರಧಾನಿ , ರಾಷ್ಟ್ರಪತಿ , ಅತ್ಯುನ್ನತ ನ್ಯಾಯಾಲಯದ ನ್ಯಾಯಾಧೀಶರಿಂದಲು ಒಂದು ಹೆಜ್ಜೆ ಮುಂದೆ. ಯಾಕೆಂದರೆ ಅವರ ಆಜ್ಞೆ ಮತ್ತೆ ವಿಮರ್ಶೆಗೆ ಅವಕಾಶ ಇದೆ. ಆದರೆ ಅರಸರ ಅಪ್ಪಣೆಯನ್ನು ಜಾರಿಗೊಳಿಸುವವರು ದೈವ ಮತ್ತು ದೇವರುಗಳು. ಬೆರಳೆಣಿಕೆ ದಿನಗಳಲ್ಲಿ ಸ್ಪಷ್ಟ ಫಲಿತಂಶ ಬಂದಾಗಿರುತ್ತದೆ.
ಅರಸು ಪಟ್ಟ ಆದವನ ಸ್ಥಾನ ಮಾನ ಏನು? ಆತ ಹೇಗಿರಬೇಕು? ಇಂದು ಸಾಧ್ಯವೇ , ಹೊಂದಾಣಿಕೆಗೆ ಅವಕಾಶ ?
ಒಬ್ಬ ವ್ಯಕ್ತಿ ಎಲ್ಲೇ ಇರಲಿ , ಹೇಗೆ ಇರಲಿ – ಸ್ಥಾನ , ಮಾನ ,ಘನತೆ , ಗೌರವ – ಆತನ ಆಂತರಿಕ ಅಸ್ತಿತ್ವವೇ ಹೊರತು ಆತನಲ್ಲಿರುವ ಬಾಹ್ಯ ಯಾವುದೇ ಸಂಪತ್ತು ಖಂಡಿತಾ ಅಲ್ಲ. ೬೪ ವಿದ್ಯಯನ್ನು ಪೂರೈಸಿ ಬಂದವನಿಗೆ ಪಟ್ಟ ಕಟ್ಟುವುದು ಅರಸು ಪದ್ದತಿಯಲ್ಲಿ ವಾಡಿಕೆಯಾಗಿತ್ತು. ಆದರೆ ಇಂದು ಅಕ್ಷರ ಜ್ಞಾನವೆಂಬ ವಿದ್ಯಯನ್ನು ಕಲಿತ ವ್ಯಕ್ತಿ ಏನು ಮಾಡಲು ಸಾಧ್ಯ. ಯಾರು ಪಂಚ ಇಂದ್ರಿಯಗಳನ್ನು ಪ್ರಜೆಗಳನ್ನಾಗಿ ಮಾಡಿ , ಮನಸ್ಸು – ಬುದ್ದಿ – ಸಂಸ್ಕಾರಗಳನ್ನು ಮಂತ್ರಿಗಳನ್ನಗಿ ಮಾಡಿ – ಆತ್ಮ ಅರಸನಾಗಿ ಕಾರ್ಯ ನಿರ್ವಹಿಸುವವನೆ ಅರ್ಹ ಎನ್ನಬೇಕು. ಆಡು ಭಾಷೆಯಲ್ಲಿ ಮನಮುಟ್ಟವಂತೆ ಹೇಳಬೇಕಾದರೆ – ಪ್ರಜೆಗಳನ್ನು ಮಕ್ಕಳಂತೆ ನೋಡುವುದು ಮಾತ್ರವಲ್ಲ ದೇವರಂತೆ ಕಾಣುವಾತ ಮಾತ್ರ ಅರ್ಹನಾಗುತ್ತಾನೆ. ಆತನಲ್ಲಿ ದೈವ ದೇವರ ಶಕ್ತಿ ಇರುತ್ತದೆ. ಎಲ್ಲವನ್ನು ಆತ ಮಾಡಿಸುತ್ತಾನೆ , ಮಾಡುವುದಿಲ್ಲ , ಹೊಂದಾಣಿಕೆಗೆ ಸ್ಥಾನವೇ ಇಲ್ಲ.ಅವನ ಅರಸು ವ್ಯಾಪ್ತಿಗೆ ಅವನೇ ಅರಸು. ಅವನ ಮಾತು ಪ್ರಕೃತಿ ಕೇಳಿ ಅವುಗಳು ತೀರ್ಮಾನ ಕೈಗೊಳ್ಳುತ್ತವೆ.
ಅರಸನ ಸ್ಥಾನದಲ್ಲಿ ಕುಳಿತ ವ್ಯಕ್ತಿ – ತನ್ನ ವ್ಯಾಪ್ತಿಯ ಪ್ರಜೆಗಳಿಗಳಲ್ಲಿ ದೇವರನ್ನು ಕಾಣುವಾತ ಪ್ರಜೆಗಳಿಗೆ ಕಿವಿ ಮಾತು
ಅರಸನ ವ್ಯಾಪ್ತಿಯಲ್ಲಿ ದೈವ ದೇವರ ಕೆಲಸ ಮಾಡುವಾಗ ಅರಸನಿಗೆ ಸೂಕ್ತ ಹೇಳಿಕೆ ಅನಿವಾರ್ಯ -ತಪ್ಪಿದರೆ ಫಲ ಶೂನ್ಯ
ಗುತ್ತಿನವನಿಗೆ – ಭಾಮಾ ಅಥವಾ ಗಡಿ ,ಹಿರಿಯ ವ್ಯಕ್ತಿಗೆ ಸ್ಥಾನ ಮಾನ -ದೈವ ದೇವರ ಕಾನೂನು
ಎಲ್ಲಿ ಯಾರು ಯಜಮಾನ – ಇದು ಪರಂಪರೆ ತಿಳಿಸಿದ ಪಾಠ – ತಪ್ಪಿದ್ದಲ್ಲಿ ಸರಿ ಪಡಿಸಿ
ನಿಜವಾದ ಅರಸ ದೈವ ದೇವರ ಹಿಂದೆ ಕುಳಿತಿರುತ್ತಾನೆ. ನಿಮ್ಮ ಮಾತಿನ ಪೆಟ್ಟು ಮೊದಲಿಗೆ ದೈವ ದೇವರಿಗೆ ನಂತರ ಅರಸನಿಗೆಂದು ಅರಿತು ಬಾಳೋಣ
ದಾನವ ಬದುಕು ಬೇಡವೇ ಬೇಡ – ಮಾನವ ಬದುಕು ಬೇಡ – ದೇವಾ ಮಾನವ ಬದುಕು ನಮ್ಮದಾಗಲಿ