ದೈವ ಉಪಕಾರಿ . ಅಪಕಾರಿ ಖಂಡಿತಾ ಅಲ್ಲ . ಈ ಕುರಿತಾದ ಪ್ರಶ್ನೆ ಉತ್ತರ ಮುಂದಕ್ಕೆ
ಎಲ್ಲಿ ನೋಡಿದರು ಯಾರಲ್ಲಿ ಕೇಳಿದರು ದೈವದ ಉಪದ್ರ ಹೇಳುತಿರುತಾರೆ. ಅದು ಸುಳ್ಳೇ ?
ದೇವರು ನಮಗೆ ಹೇಳಿದ ಕೆಲಸವನ್ನು ಸರಿಯಾಗಿ ಮಾಡದಿದ್ದರೆ ದೈವದ ಬಾದೆ ಇರುವುದು ಸರಿ
ದೇವರು ಹೇಳಿದ ಮಾತುಗಳನ್ನು ನಾವು ಎಲ್ಲಿ ಯಾರಿಂದ ತಿಳಿದುಕೊಳ್ಳಬಹುದು ?
ನಾವು ಒಂದೇ ತಾಯಿಯ ಮಕ್ಕಳು ಎಂದು ತಿಳಿದು ಅರ್ಥಮಾಡಿಕೊಂಡು ಬದುಕಿದರೆ ಸಾಕು
ಬೇರೆ ಬೇರೆ ದೈವಗಳ ಹೆಸರು ಹೇಳಿ ಅದಕ್ಕೆ ದೈವಾಲಯ ಕಟ್ಟಿ ಸಂಬಿಲ ಸೇವೆ , ನರ್ತನ ಸೇವೆ ಇತ್ಯಾದಿ ಇತ್ಯಾದಿ
ಜ್ಯೋತಿಸ್ಯರು ಹೇಳುತಾರೆ ಇದು ಎಷ್ಟು ಸರಿ?
ಇದು ತಾತ್ಕಾಲಿಕ ಪರಿಹಾರ ಮಾತ್ರ. ದೈವಗಳು ನಿಮ್ಮ ಸೇವೆಯಿಂದ ಶಾಂತವಾಗಿ ಮುಂದಕ್ಕೆ ತೊಂದರೆ ಕೊಡದೆ ಇರಬಹುದು . ಆದರೆ ನಿಮಗೆ ಅವುಗಳಿಂದ ಉಪಕರವಾಗಲು ನಾವು ಕೊಟ್ಟ ಮೊದಲಿನ ಉತ್ತರ ಪಾಲಿಸಲೇ ಬೇಕು
ಸಂಬಿಲ ನರ್ತನ ಸೇವೆ – ನಿರಂತರ ಮಾಡಿಕೊಂಡು ಬಂದವರು ಅಭಿವೃದ್ಧಿ ಆಗುತಿರುವುದು ನಾವು ಕಂಡ ಕಟು ಸತ್ಯ. ಇದಕ್ಕೆ?
ದೈವ ದೇವರ – ಒಳ್ಳೆಯ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವ ಉನ್ನತಿ ಹೊಂದುವುದು ಸಹಜ
ನಮ್ಮ ಮನೆಯಲ್ಲಿ, ಕುಟುಂಬದಲ್ಲಿ , ದಂಪತಿಗಳಲ್ಲಿ ಉಂಟಾಗುವ ಸಮಸ್ಯೆಗಳಿಗೆ ದೈವಗಳಿಂದ ಮುಕ್ತಿ ಇದೆಯಾ ?
ನಮ್ಮ ಸರ್ವ ರೀತಿಯ ಸಮಸ್ಯೆಗಳಿಗೆ ಪರಿಹಾರ ಕೊಟ್ಟೆಕೊಡುತ್ತವೆ.
ಅದು ಹೇಗೆ ಸಾಧ್ಯ?
ದೈವ ದೇವರು ಒಂದೇ ನಾಣ್ಯದ ಎರಡು ಮುಖಗಳು. ದೇವರು ಏನು ಆಗಬೇಕೋ ಅದನ್ನು ತನ್ನ ಗಣಗಳಿಂದ ಮಾಡಿಸುತಾರೆ. ಆದುದರಿಂದ ಸಹಜವಾಗಿ ದೈವಗಳ ಹೆದರಿಕೆಯಿಂದ ಎಲ್ಲರು ಸರಿಯಾದ ದಾರಿಯಲ್ಲೇ ಸಾಗುತಾರೆ
ದೈವಗಳಿಗೆ ದೈವಾಲಯ ಕಟ್ಟಿ, ಪುರೋಹಿತ ವರ್ಗದಿಂದಲೇ ಬ್ರಹ್ಮಕಲಶ ಇತ್ಯಾದಿ ಮಾಡಬೇಕೆ ?
ನಿಮಗೆ ನಿರ್ದಿಷ್ಟ ದೈವದ ಬಗ್ಗೆ ತಿಳಿಯಲು ಒಂದು ಮೂರ್ತಿ, ಅನುಕೂಲಕ್ಕೆ ತಕ್ಕಂತೆ ವ್ಯವಸ್ಥೆ (ಗುಡಿ ), ಬಾಹ್ಯ ಆಡಂಬರ ಜನತೆಗೆ ಬಿಟ್ಟದ್ದು . ಇಲ್ಲಿಯ ಒಂದು ಆಚರಣೆ ಸನ್ಮಾರ್ಗಕ್ಕೆ ಒಂದು ಶಾಶ್ವತ ದಾರಿ ಮಾತ್ರ .
ದೈವಗಳಿಂದ ತಮ್ಮ ಕೆಲಸವನ್ನು ಮಾಡಿಸಿದ ಉದಾಹರಣೆ ಇದೆಯಾ?
ಇದು ಸದ್ಯಕ್ಕೆ ಬಾಲಿಶ ಪ್ರವೃತಿ. ನಮ್ಮ ಸಾಧನೆಗೆ ಪ್ರತಿಫಲ ಇದ್ದೆ ಇದೆ. ದೈವ ಪರೀಕ್ಷೆಗೆ ಇಳಿಯದೆ ಸಂಗಾತಿಯಾಗೋಣ
ದೇಶದ ಕಾನೂನು ಇದ್ದಂತೆ ದೇವರ ಕಾನೂನು. ಕಾರ್ಯಂಗ ನ್ಯಾಯಾಂಗ ಇದ್ದಂತೆ ದೈವ ಇದು ಸರಿಯೇ ?
ಅರಸರು ಈ ಅದರದಿಂದಲೇ ತಮ್ಮ ಅಧಿಕಾರ ಸುಲಲಿತವಾಗಿ ನಡೆಸುತಿದ್ದರು.
ನಮ್ಮ ಕುಟುಂಬದ ಆದಿಯಲ್ಲಿ ಈ ಕುಟುಂಬ ಸಂಸಾರವನ್ನು ಹಲ್ಲು ನೀರಿನಂತೆ ಒಂದಾಗಿ ನಡೆಸುವ ಜವಾಬ್ದಾರಿ ದೈವಗಳಿಗೆ ಕೊಟ್ಟಿದ್ದರು ಎನ್ನುವ ಭಾವನೆ ಸರಿಯಾ ?
ಇದನ್ನು ಅರ್ಥವತ್ತಾಗಿ ಬದುಕಿನಲ್ಲಿ ಪಾಲಿಸಿದಾಗ ನಾವು ನಿಂತ ನೆಲ ಸ್ವರ್ಗವಾಗುತದೆ.