ಓಟಿಗಾಗಿ ಮನೆ ಮನೆಗೆ ಪ್ರದಕ್ಷಿಣೆ ಮಾಳ್ಪರು
ಆರಿಸಿದೊಡನೆ ಅಧಿಕಾರಕ್ಕಾಗಿ ಅಪ್ರದಕ್ಷಿಣೆ ಮಾಳ್ಪರು
ವರುಷಕೊಮ್ಮೆ ಪ್ರದಕ್ಷಿಣೆ malpara  ಹುಟ್ಟಿಸಲಾರೆಯ ……………………….ಅವ್ಯಕ್ತ
ಪಕ್ಷದ ಪ್ರತಿನಿಧಿ ಗೆದ್ದ ಮೇಲೆ ಕ್ಷೇತ್ರದ ಶಾಸಕ 
ಕ್ಷೇತ್ರದ ಪ್ರಜೆಗಳ ಭಾವನೆ ಅಳಿಸಿ ಸ್ಪಂದಿಸೆ 
ನೀ ತಿಂದ ಅನ್ನ ವಿಷವಾಗದಿರಲೆಂದು ಪ್ರಾರ್ಥಿಸುವೆ …………………………..ಅವ್ಯಕ್ತ
ಪ್ರಜೆಗಳಿಗೆ ಸಿಹಿ ಹಂಚೆ ಪಕ್ಷದೊಳಗೆ ಹಗ್ಗಾಟ ಜಗ್ಗಾಟ 
ಪಕ್ಷದೊಳಗೆ ಮೃಷ್ಠಾನ್ನವೇರ್ಪಡಿಸೆ ಅಳಿಸಲಾರದ ಬಾಂಧವ್ಯದ ನಂಟು 
ಪ್ರತಿನಿದಿಗಳ ನಾಟಕಕ್ಕೆ ಇತಿಶ್ರೀ ಪ್ರಜೆಗಳ ನಾಟಕಕ್ಕೆ ನಾಂದಿಯಾದೀತೇ …………..ಅವ್ಯಕ್ತ
ಅರ್ಹತೆ ಮಾನದಂಡಗಳ ಜನ್ಮದಾತರು ಶಾಸಕರು  ಸಂಸದರು 
ಅರ್ಹತೆ ಮಾನದಂಡಗಳ  ಅಡ್ಡ ಗೋಡೆಯ ಮೇಲೆ ನಿಂತಿಹರು 
ಅರ್ಹತೆ ಮಾನದಂಡಗಳ ಅರಿವಿಲ್ಲದವರ ಆಳ್ವಿಕೆಯಲ್ಲಿ ದೇಶ ಕೊಚೆಯಲ್ಲಿಹುದು……………ಅವ್ಯಕ್ತ
ಕಾನೂನು ವ್ಯವಸ್ಥೆಯ ಹಾದಿ
ಬದುಕು ಅವ್ಯವಸ್ಥೆಯ ಹಾದಿ 
ಆಡಳಿತ ಕಗ್ಗತಲೆಯ ಹಾದಿ ………………………………………………………….ಅವ್ಯಕ್ತ
ಉದ್ಘಾಟನೆ ಶಂಕುಸ್ಥಾಪನೆಗೆ ಮೀಸಲಿಟ್ಟ ಪ್ರಜಾಪ್ರತಿನಿದಿಗಳೇ 
ನಿಮ್ಮ ಅಮೃತ ಹಸ್ತ ಆರ್ಥಿಕಹೊರೆ ಸಮಯದ ಪೋಲು 
ಮೇಸ್ತ್ರಿ ಕೆಲಸ ಹೆಣ ಕಾಯುವ ಕೆಲಸ ನಿಮಗೆ ಬೇಕೇ …………………………ಅವ್ಯಕ್ತ