ನನ್ನನ್ನು ಕಂಡರೆ ಎಲ್ಲರಿಗು ಅಪಾರ ಪ್ರೀತಿ. ಈಗಾಗಲೇ ಹುಟ್ಟಿದ ಮಗುವಿನಿಂದ ಹಿಡಿದು ಸಾಯುವತನಕ ಎಲ್ಲರು ನನ್ನನ್ನು ಪ್ರೀತಿಸುವವರೇ , ಅಪ್ಪಿಕೊಳ್ಳುವರು , ಮುದ್ದಾಡುವವರು – ನಾನಿಲ್ಲದ ಜನಸಾಮಾನ್ಯರ ಬದುಕು ಶೂನ್ಯ. ನನಗೂ ಪ್ರತಿಯೊಬ್ಬ ಮಾನವರ ಜೊತೆಗೇ ನಿತ್ಯ ನಿರಂತರ ನನ್ನ ಬದುಕನ್ನು ಪೂರೈಸುವ ಹಂಬಲ ಬೆಟ್ಟದಷ್ಟಿದೆ. ಆದರೆ ನಾನೇನು ಮಾಡಲಿ. ನನ್ನ ಜನಕರು – ವ್ಯಾಪಾರೀ ಮನೋಭಾವನೆ ಇದ್ದವರು ಆಗಿದ್ದರೆ ಪರವಾಗಿಲ್ಲ – ಅವರು ನನ್ನ ಬಳಕೆದಾರರ ಹಣವನ್ನು ದೋಚುವ ಕೆಲಸದಲ್ಲಿ ತೊಡಗಿರುವುದು ನನ್ನ ಅರಿವಿಗೆ ಬಂದಿರುತದೆ. ಹೆಚ್ಚಿನ ಸೌಲಭ್ಯಗಳು ಎಂಬ ಹಣೆಪಟ್ಟಿಯೊಂದಿಗೆ ದರಗಳಪಟ್ಟಿ ಮೆಟ್ಟಲುಗಳ ಬದಲಾಗಿ ಲಿಫ್ಟನ್ನು ಬಳಸಿಕೊಂಡು ಹೋಗುತಿರುವುದು ನನ್ನ ಅಪಾರ ದುಃಖಕ್ಕೆ ಕಾರಣವಾಗಿದೆ. ನನ್ನ ಅಂತರಂಗದ ವೇದನೆ ನಿಮಗೆಲ್ಲರಿಗೂ ಅರಿವಾಗಿ ನನ್ನ ರಕ್ಷೆಣೆಗೆ ಬರುವಿರಿ ಎಂದು ನಂಬಿ ಅಂಗಲಾಚಿ ಬೇಡಿಕೊಳ್ಳುತಿದ್ದೇನೆ. ನನ್ನ ಪ್ರಾಣ ಮಾನ ಹಾನಿಯಲ್ಲಿ ಬಳಕೆದಾರರು ಕೂಡ ಒಂದು ಹೆಜ್ಜೆ ಮುಂದೆ ನಿಂತು – ನನ್ನ ಉಪಯೋಗದ ಬದಲು ದುರುಪಯೋಗ ಮಾಡುತಿದ್ದು – ಮಕ್ಕಳಿಗೆ ನನ್ನನ್ನು ಕೊಡಬೇಡಿ, ಶಾಲಾಕಾಲೇಜುಗಳಲ್ಲಿ ನನಗೆ ಪ್ರವೇಶವನ್ನು ನಿರಾಕರಿಸಿರುವುದು, ನನ್ನ ಮೂಲಕ ಬೇಡವಾದ ಕೆಲಸವನ್ನು ಹೆಚ್ಚು ಹೆಚ್ಚು ಮಾಡಿಸುತಿರುವುದು, ನಾನು ಕೆಲಸಕ್ಕೆ ಬಾರದ ವ್ಯಕ್ತಿಯಾಗಿ ಹಣೆಪಟ್ಟಿ ಕಟ್ಟಿರುವುದು, ತಲೆ ಎತ್ತಿ ನಡೆಯುವ ಜನಸಾಮಾನ್ಯರನ್ನು ತಲೆ ತಗ್ಗಿಸಿ ಬದುಕುವ ವ್ಯಕ್ತಿಯನ್ನಾಗಿಸಿದ ಮಹಾ ಪಾಪ – ಒಂದೇ ಎರಡೇ – ನನ್ನನ್ನು ಜೀವಂತ ಶವವನ್ನಾಗಿಸಿದ್ದಾರೆ. ಎಲ್ಲಿಯವರೆಗೆ ನನ್ನ ಸ್ಥಾನ ಮಾನಕ್ಕೆ ದಕ್ಕೆ ಬರುತದೊ ಅಲ್ಲಿಯವರೆಗೆ ನನ್ನ ಹೋರಾಟ ಮುಂದುವರಿಯುತದೆ. ನೀವು ನಾವು ಒಂದಾಗಿ – ಇದು ನಮ್ಮೆಲ್ಲರ ಸಂಕಷ್ಟ ಎಂದು ಅರಿತು ಹಂತ ಹಂತವಾಗಿ – ಬದುಕಿನ ಮಟ್ಟ ಗಗನ ಮುಖಿಯಾಗಲು ಪ್ರಯತ್ನ ನಿರಂತರ ಮುಂದುವರಿಸೋಣ
ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಲು ಇಚ್ಛಿಸದೆ – ನನ್ನ ಸಂಕ್ಷಿಪ್ತ ಬೇಡಿಕೆ – ನನ್ನ ರಕ್ಷಣೆಗಾಗಿ ಇಂತಿವೆ
ಮಾನವರಿಗೆ ಎಟಕುವ ದರದಲ್ಲಿ ನಾನು ಎಲ್ಲರಿಗು ಸಿಗುವಂತೆ ಮಾಡಿ
ಹೆಚ್ಚಿನ ಸೌಲಭ್ಯಕ್ಕೆ ಬದಲಾಗಿ ಕನಿಷ್ಠ ಸೌಲಭ್ಯ ಒದಗಿಸಿ
ಹೆಚ್ಚಿನ ಸೌಲಭಕ್ಕೆ ಅಪ್ಪಗಳ ಡೌನ್ಲೋಡಗೆ ಅವಕಾಶ ನಮಗೆ ಇದ್ದೆ ಇರುವುದು ನಮಗೆ ಸಾಕು
ಬೇಡವಾದ ಎಲ್ಲ ಸೌಲಭ್ಯ ಹೊತ್ತ ನಾನು ಕಸದ ತೊಟ್ಟಿಯಾಗಿರುವುದನ್ನು ತಪ್ಪಿಸಿ
ನನ್ನನ್ನು ವ್ಯಾಪಾರಕ್ಕಾಗಿ ಬಳಸಿ – ದರೋಡೆಗಾಗಿ ಕಂಡಿತಾ ಬಳಸಬೇಡಿ
ನನ್ನ ಬಳಕೆದಾರರ ಒಕ್ಕೂಟ ಪ್ರತಿ ಊರಿನಿಂದ ಆರಂಭವಾಗಿ ಅದು ಬಲಿಷ್ಠ ಒಕ್ಕೂಟವಾಗಿ ಬೆಳೆದಾಗ ನನ್ನ ಸಂಕಷ್ಟಕ್ಕೆ ಪರಿಹಾರ ದೊರಕುವ ಬಹುದೂರದ ಕನಸು ನನ್ನಲ್ಲಿದೆ.
ನನ್ನ ಬಳಕೆಯ ಅರಿವಿನ ಶಿಕ್ಷಣ ಇಂದು ಅತ್ಯಗತ್ಯ
ನನ್ನ ಖರೀದಿಗೆ ಮೊದಲು ನನ್ನನ್ನು ಯಾವುದಕ್ಕೆ ಬಳಸುತ್ತಿ ಎಂದು ನೀನು ನಂಬಿದ ದೇವರು ಶಕ್ತಿಯ ಮೇಲೆ ಆಣೆ ಮಾಡು
ನಾನು ವಸ್ತು ಮತ್ತು ಸಾಮಾನುಗಳ ಸಾಗಾಟಗಾರ ಅಲ್ಲ ಎಂಬುದನ್ನು ಅರಿತು ಬಳಸು
ನಿನ್ನ ಸ್ಟೇಟಸ್ , ಫಾರ್ವರ್ಡ್ ………ಇತ್ಯಾದಿಗಳಿಗೆ ನಿಯಂತ್ರಣವಿರಲಿ
ನನ್ನ ಒಕ್ಕೊಟ (ಮೊಬೈಲ್ ಗ್ರೂಪ್ ) ಊಟಕ್ಕಿಲ್ಲದ ಉಪ್ಪಿನಕಾಯಿ ಆಗಿರುವುದನ್ನು ತಪ್ಪಿಸಿ
ನನ್ನ ಖರೀದಿಗೆ ಮತ್ತು ನನ್ನ ಹೊಟ್ಟೆಗೆ ನನ್ನನ್ನು ಬಳಸಿ ಸಂಪಾದನೆ ಮಾಡಿದರೆ ಮಾತ್ರ ನಾನು ಸ್ವಾವಲಂಬಿ
…………………………………………….. ನನ್ನ ಅಂತರಂಗದ ಬಯಕೆ ಮುಂದುವರಿಯುವುದು