ದೈವ ನರ್ತಕರ ಬುಲೆಟಿನ್

ಶೇರ್ ಮಾಡಿ

ದೈವಾರಾಧನೆ ಇತ್ತೀಚಿನ ದಿನಗಳಲ್ಲಿ ತನ್ನ ಮಹತ್ವವನ್ನು ವೃದ್ಧಿಸಿಕೊಂಡು ಬರುತಿದ್ದು – ಅದಕ್ಕೆ ಬೇಕು ಬೇಕಾದ ಜನರನ್ನು ಒಟ್ಟು ಸೇರಿಸುವಲ್ಲಿ ಕರ್ತೃ (ಯಜಮಾನ ) ಪಡಬಾರದ ಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಕೆಲವೊಂದು ಮಾಹಿತಿಗಳು ಸಿಗುವ ವ್ಯವಸ್ಥೆಗಳನ್ನು ಮಾಡಿಕೊಟ್ಟಾಗ ಕೆಲಸ ಕಾರ್ಯಗಳು ಬಹು ಸುಲಭವಾಗಿ ಸಾಗುತದೆ. ದೈವಾರಾಧನೆಯ ಪರಿಪೂರ್ಣ ಕೆಲಸಕ್ಕೆ ನರ್ತಕರ ಮಾಹಿತಿ ಜೊತೆಗೆ ಇತರ ಕೆಲವು ಜನಗಳ ಅವಶ್ಯಕತೆಯಿದ್ದು, ಇದೆ ವೇದಿಕೆಯಲ್ಲಿ ಅದನ್ನು ಸೇರಿಸುವ ಕೆಲಸವನ್ನು ಮಾಡುತಿದ್ದೇವೆ. ಅರಸು ಮನೆತನಗಳಲ್ಲಿ ಆಗುವ ದೈವಾರಾಧನೆಗೆ ಎಲ್ಲರು ಕೂಡ ಅಲ್ಲಿಯೇ ಇದ್ದು ಅನ್ಯ ಸ್ಥಳಗಳಲ್ಲಿ ಇದರ ಅಗತ್ಯವಿದೆ. ಇನ್ನು ಕೆಲವು ಸನ್ನಿವೇಶಗಳಲ್ಲಿ ದೈವದಲ್ಲಿ ನಿಷ್ಠಾವಂತರಿಂದ ದೈವಾರಾಧನೆ ನಡೆಸುವ ಸಂಕಲ್ಪಕ್ಕೆ ಬದ್ಧನಾಗಿದ್ದಾಗ ಅಂತಹ ಜನರ ಆರಿಸುವಿಕೆ ಕಷ್ಟ ಸಾಧ್ಯ ಎಂಬ ಅನುಮಾನಕ್ಕೆ ನಮ್ಮ ಈ ಕೆಲಷ ಹೆಚ್ಚು ಪ್ರಸ್ತುತ.
ಪಾರಿ ಹೇಳುವವರು, ದೈವ ಪಾತ್ರಿ , ದೈವ ಪೂಜಾರಿ, ದೀಟಿಗೆಯವರು, ದೊಂದಿಯವರು, ಸಿರಿ ತೆಗೆಯುವವರು …….. ಇತ್ಯಾದಿ ಪೂರಕ ವ್ಯಕ್ತಿಗಳ ಮಾಹಿತಿ ಒಟ್ಟುಗೂಡಿಸುವ ನಮ್ಮ ಕಾರ್ಯದಲ್ಲಿ ಸಂಬಂಧಪಟ್ಟ ಜನರು ಕೈಜೋಡಿಸಿದಾಗ
ದೇವರಾದನೆ ಮತ್ತು ದೈವಾರಾಧನೆಗೆ – ನಾವೆಲ್ಲರೂ ನಿಷ್ಠೆ ತೋರಿಸಿದ ಫಲ ಸಿಗುತದೆ.
ನರ್ತನ ಸೇವೆ ಮಾಡುವವರು – ನಲಿಕೆ ಮತ್ತು ಪರವರ ಬಗ್ಗೆ ಸ್ಪಷ್ಟತೆ ಇರಲಿ
ಭಾವಚಿತ್ರ, ಹೆಸರು ವಿಳಾಸ,ಅರ್ಹತೆ ಬಗ್ಗೆ ತಿಳಿಸಿ
ಪಾರಿ ಹೇಳುವವರು ತಮ್ಮ ಅನುಭವ ಬಗ್ಗೆ ತಿಳಿಸಿ
ಇತರ ಪರಿಚಾರಕರು ತಮ್ಮ ಇತಿ ಮಿತಿಗಳ ಬಗ್ಗೆ ಹೇಳಿ
ನಿಮ್ಮ ವ್ಯಾಪ್ತಿ ಸೀಮಿತವಾಗಿದ್ದರೆ ಅದನ್ನು ವ್ಯಕ್ತಪಡಿಸಿ
ಒಂದು ದೈವ ನರ್ತನ ಸೇವೆಗೆ ನಿಮಗೆ ಬೇಕಾದ ಸಮಯದ ಬಗ್ಗೆ ಸ್ಪಷ್ಟಪಡಿಸಿ
ನಿಮ್ಮ ಬಗ್ಗೆ ತಿಳಿದುಕೊಳ್ಳಲು ಇಚ್ಛಿಸುವವರಿಗೆ ಒಂದೆರಡು ಉಲ್ಲೇಖ ಕೊಡಿ
ಐದು ಪದಗಳೊಳಗೆ ದೈವದ ಬಗ್ಗೆ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ
ಮೊದಲ ೨೫ ಜನರ ಮಾಹಿತಿ ಉಚಿತ ಪ್ರಕಟಣೆ , ನಂತರದಕ್ಕೆ ರೂಪಾಯಿ ೨೦೦/ ಶಾಶ್ವತ ಶುಲ್ಕವಿರುತದೆ
ನಿಮ್ಮ ವಿವರ ೨೫ ಪದಗಳಿಗೆ ಮೀರದಿರಲಿ
ಹೆಚ್ಚು ಹೆಚ್ಚು ವಿವರಣೆ ಕೊಡಲು ಇಚ್ಚಿಸುವವರಿಗೆ ಅವಕಾಶವಿದ್ದು ೨೫,೫೦,೧೦೦ ಪದಗಳ ಪ್ಯಾಕಜು ರೂಪಾಯಿ ಪದ ಒಂದಕ್ಕೆ ಹತ್ತರಂತೆ ಲಭ್ಯ

See also  ಪಾವತಿ ಮಾಧ್ಯಮದ ಪ್ರಾಮುಖ್ಯತೆ - Importance of payment media

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?