ದೀಪ ಬೆಳಗಿಸಿ ಕತ್ತಲೆಯಿಂದ ಬೆಳಕಿಗೆ ಬಂದಿದ್ದೇವೆ. ನನ್ನಲ್ಲಿರುವ ಕೊಳೆ ಅರಿವು ಆಗುತಿದ್ದು ಸ್ವಚ್ಛ ಮಾಡುವ ಕಾರ್ಯಕ್ಕೆ ಚಾಲನೆ ಕೊಡುಲು ಕಂಕಣಬದ್ಧರಾಗೋಣ. ಶಾಲಾಕಾಲೇಜುಗಳಿಗೆ ಹೋದ ಮಕ್ಕಳು ವಿದ್ಯಾವಂತರಾಗಿ ಬುದ್ದಿವಂತರಾಗಿ ಮನಕ್ಕೆ ಮನೆಗೆ ಊರಿಗೆ ದೇಶಕ್ಕೆ ಮಾನವಕುಲಕೋಟಿಗೆ ಜೀವರಾಶಿಗಳಿಗೆ ಪ್ರಕೃತಿಗೆ – ಪೂರಕವಾಗಿ ಬಾಳಿ ನೆಮ್ಮದಿ ಬದುಕು ನಿರೀಕ್ಷೆ ಮರುಜನ್ಮ ಪಡೆಯಲು ಪಣತೊಡೋಣ.
ಶಿಕ್ಸಣ ನಮಗೆ ಸಿಗುವಂತಾಗಲು – ನಮ್ಮ ಪೂರ್ವಜರು ಪಟ್ಟ ಶ್ರಮ, ಸವೆಸಿದ ಬಾಳು – ನಮ್ಮ ಊಹೆಗೂ ಕೂಡ ನಿಲುಕದ ದುರಂತ ಸನ್ನಿವೇಶ . ಪೆನ್ನು ಪೆನ್ಸಿಲ್ ಇಲ್ಲ, ಸ್ಲೇಟು ಕಡ್ಡಿ ಇಲ್ಲ – ಮರಳಿನಲ್ಲಿ ಮರದ ಕೋಲನ್ನು ಕಡ್ಡಿಯಾಗಿ ಬಳಸಿದ ಅಂದಿನ ಕಾಲ – ಹಂತ ಹಂತವಾಗಿ ಮುಂದುವರಿದು ನಾವು ಸೂಟ್ ಬೂಟು ಸಂಸ್ಕೃತಿಯ ಶಿಕ್ಸಣ ಪಡೆಯುವ ಮಟ್ಟಕ್ಕೆ ತಲುಪಿದ್ದೇವೆ. ಬಾಹ್ಯ ಗುಣಮಟ್ಟ ಏರುಗತಿಯಲ್ಲಿದೆ ಆಂತರಿಕ ಗುಣಮಟ್ಟ ಪಾತಾಳಕ್ಕಿಳಿದಿದೆ.
ಕನಿಷ್ಠ ಎರಡು ಪದಗಳು ಅರ್ಥವನ್ನು ಬೋಧಿಸಿ ಮನದಟ್ಟು ಮಾಡಿ – ನಿಜ ಬದುಕಿನಲ್ಲಿ ಪ್ರತಿಯೊಬ್ಬರೂ ಅಳವಡಿಸುವಂತೆ ಮಾಡುತಿದ್ದರೆ ಪ್ರಾಣಿ ಪ್ರಪಂಚದಿಂದಲೂ ಕೆಳಗಿನ ಮಟ್ಟದ ಬದುಕು ನಮ್ಮ ಪಾಲಿಗೆ ಬರುವ ಸಾಧ್ಯತೆ ಇರಲಿಲ್ಲ . ಯಾವುದೇ ಪ್ರಾಣಿ ಹೊಟ್ಟೆತುಂಬ ಆಹಾರ ಸೇವಿಸಿ ಆದಮೇಲೆ ಅದನ್ನು ಅಲ್ಲಿಯೇ ಬಿಟ್ಟು ಅನ್ಯರಿಗೆ ದೊರಕುವಂತೆ ಮಾಡುವ ಕನಿಷ್ಠ ಬುದ್ದಿಯು ಮಾನವನಿಂದ ಅನತಿ ದೂರದಲ್ಲಿದೆ. ಹಣ ಅಧಿಕಾರ ಸ್ವಾರ್ಥ ಸ್ವಜನ ಪಕ್ಷಪಾತ ಕಿತ್ತು ತಿನ್ನುವ ರಾಕ್ಸಸರ ಬದುಕು ಮಾನವರ ಬದುಕಿಗೆ ಕೊಡಲಿಯೇಟಾಗಿದೆ. ಇವರು ಎಲ್ಲರು ಕೂಡ ನಮ್ಮ ಶಿಕ್ಸಣ ದೇವಾಲಯದಿಂದ ಹೊರಗೆ ಬಂದವರು. ಇಂತಹ ಶಿಕ್ಸಣ ನಮಗೆ ಈ ದೇವಾಲಯದಲ್ಲಿ ಸಿಗುತ್ತಾ ಇದೆಯಾ ಪ್ರಶ್ನೆ ನಮ್ಮೆಲ್ಲರನ್ನೂ ಕಾಡುತಿದೆ .
ದಯಮಾಡಿ ಈ ದೇವಾಲಯದಲ್ಲಿ ಇರುವ ದೇವರುಗಳು ಅಂದರೆ ಶಿಕ್ಸಕರು – ಅವರಲ್ಲಿ ಅವ್ಯಕ್ತ ಪ್ರಣಾಮಗಳೊಂದಿಗೆ ಬೇಡಿಕೆ ಮುಂದಿಡುತಿದ್ದೇನೆ
೧ . ಮಾನವರು , ಪ್ರಾಣಿಗಗಳು ಪಕ್ಷಿಗಳು – ಒಟ್ಟಿನಲ್ಲಿ ಜೀವರಾಶಿಗಳು ಮತ್ತು ಪ್ರಕೃತಿಯೊಂದಿಗೆ ಬದುಕುವುದೇ ನಿಜವಾದ ಮಾನವ ಬದುಕು – ಮನದಟ್ಟು ಮಾಡಿ
೨. ಎಲ್ಲಿಯಾದರೂ ತಪ್ಪಿದಲ್ಲಿ ,ಮಾಡಿದಲ್ಲಿ – ತಪ್ಪಿಗೆ ಶಿಕ್ಷೆಗೆ ಬದ್ಧನಾಗಿ – ಮೇಲಿನ ಸೂತ್ರಕ್ಕೆ ಬದ್ದನಾದರೆ ಮಾತ್ರ ಬದುಕು ಎಂಬ ಕಠಿಣ, ಮುರಿಯಲಾಗದ ಸ್ಪಷ್ಟ ಅರಿವು ಮೂಡಿಸುವ ಕಲೆ ಕರಗತ ಮಾಡುವ ಬದ್ಧತೆ ನಿಮಗಿರಲಿ
ನಾವು ಇಂದು ಅತ್ಯುನ್ನತ ಪದವಿ ಅಲಂಕರಿಸಿದ್ದರು ಅದರ ಹಿಂದೆ ಬಹು ಜನರ ಶ್ರಮ, ಸಂಸ್ಥೆಗಳ ಸೇವೆ ಇದೆ. ನಮ್ಮನ್ನು ಈ ಮಟ್ಟಕ್ಕೆ ಏರಿಸುವಲ್ಲಿ ಪ್ರಾಮುಖ್ಯ ಪಾತ್ರ ಶಿಕ್ಸಣ ಸಂಸ್ಥೆಗಳದ್ದು. ಆದುದರಿಂದ – ನಾವು , ನಾವು ಶಿಕ್ಸಣ ಪಡೆದ ಶಾಲಾಕಾಲೇಜುಗಳನ್ನು ಪ್ರಪಂಚದ ಮುಂದೆ ಎತ್ತ್ತಿ ಎತ್ತಿ ತೋರಿಸೋಣ.
ದಯಮಾಡಿ ಆಯಾಯ ಶಾಲಾಕಾಲೇಜುಗಳ ಮುಖ್ಯಸ್ಥರು, ತಮ್ಮ ಶಾಲಾಕಾಲೇಜುಗಳ ಭಾವಚಿತ್ರವನ್ನು ನಮಗೆ ಕಳುಹಿಸಿ. ಮುಂದಕ್ಕೆ ಸಂಕ್ಷಿಪ್ತ ಸಮಗ್ರ ವಿವರಣೆಗೆ ಅವಕಾಶ ಕಲ್ಪಿಸುವ ಸಂಕಲ್ಪ ಹೊಂದಿದ್ದೇವೆ.
ನಿಯಮಾವಳಿಗಳು
೧ ಒಂದು ಶಿಕ್ಸಣ ಸಂಸ್ಥೆಯಿಂದ ಗರಿಷ್ಠ ಮೂರೂ ಭಾವಚಿತ್ರ
೨. ಯಾವುದೇ ಶುಲ್ಕವಿರುದಿಲ್ಲ
೩. ಹೆಸರು ಊರು ಸ್ಪಷ್ಟವಾಗಿ ನಮೂದಿಸಿ
೪. ಭಾವಚಿತ್ರದೊಂದಿಗೆ ಸಮಗ್ರ ವಿವರಣೆಗೆ ಕನಿಷ್ಠ ಶುಲ್ಕವಿರುತದೆ
೫. ಒಂದು ಪುಟ ( ೩೦೦ ಪದಗಳು ) ಶುಲ್ಕ ೧೦೦೦/ ,