ಫೇಸ್ಬುಕ್ ಬದುಕು ವಾಟ್ಸಪ್ಪ್ ಬದುಕು
ನ್ಯೂಸ್ ಬದುಕು ಪೇಪರ್ ಬದುಕು
ಗೊತ್ತು ಗುರಿಯಿಲ್ಲದ ಬದುಕೆಂದ —————–ಅವ್ಯಕ್ತ
ಫೇಸ್ಬುಕ್ ಜನಕನ ಅಂಬೋಣ
ವಾಟ್ಸಪ್ಪ್ ಜನಕನ ಅಂಬೋಣ
ಮಾನವ ಬದುಕಿಗೆ ಬೆಳಕೆಂದ ———————ಅವ್ಯಕ್ತ
ದೇಹಕ್ಕೆ ಅಲಂಕಾರ
ಬದುಕಿಗೆ ಅಲಂಕಾರ
ಮರ್ಮವ ತಿಳಿಯೆಂದ ——————————ಅವ್ಯಕ್ತ
ಬದುಕಿನ ಶಿಕ್ಷಣದ ಅಂದಿನ ಪದ್ಧತಿ
ಶಾಲಾ ಶಿಕ್ಷಣದ ಇಂದಿನ ಪದ್ಧತಿ
ದೇವಾ ಮಗು ಕೊಚ್ಚೆಗೆ ತಳ್ಳುತಿಹ —————- ಅವ್ಯಕ್ತ
ಕೋರೋಣ ದೇಹದಿಂದ ದೇಹ ದೂರ ದೇವರ ಸೃಷ್ಟಿ
ಮಾನವ ದೇವರಿಂದ ದೇಹ ದೂರ ಮಾನವರ ಸೃಷ್ಟಿ
ದೇಹದ ಒಳಗಿಹ ದೇವ ಪೂಜೆ ನಿನಗೆ ಪರಿಹಾರವೆಂದ ———– ಅವ್ಯಕ್ತ