ದೇವಾಲಯಕ್ಕೆ ಒಂದು ಕಾಲದಲ್ಲಿ ಬದುಕಿನ ಮೊದಲ ಆದ್ಯತೆ ಇದ್ದು – ಪ್ರಸ್ತುತ ನಮಗೆ ಸಿಕ್ಕಿರುವ ಶಿಕ್ಷಣದ ಫಲವಾಗಿ ಕೊನೆಯ ಸ್ಥಾನವನ್ನು ಕೊಟ್ಟಿದ್ದುದರ ಪರಿಣಾಮ ಬಾಳಿನ ಸುಖ ಶಾಂತಿ ನೆಮ್ಮದಿ ಕೂಡ ಮೊದಲ ಸ್ಥಾನವನ್ನು ಬಿಟ್ಟು ಗಟ್ಟಿಯಾಗಿ ಕೊನೆಯ ಸಾಲಿನಲ್ಲಿದೆ. ಮೊಬೈಲ್ ಬಟ್ಟೆ ಅಣ್ಣ ಆಹಾರ ಮನೆ ಮನೆಯ ಆದುನಿಕ ವ್ಯವಸ್ಥೆ ಚಿನ್ನ ವಾಹನ ಬ್ಯಾಂಕಿನಲ್ಲಿ ಬೇಕಾದಷ್ಟು ಠೇವಣಿ ಇತ್ಯಾದಿ ………………. ವೆಚ್ಚಗಳನ್ನು ಭರಿಸಿ ಎಲ್ಲಿಯಾದರ ಮಿಕ್ಕಿದರೆ ಅದರಲ್ಲಿ ಕಿಂಚಿತ್ತೂ ಪಾಲು ದೇವರಿಗೆ ದೇವಾಲಯಕ್ಕೆ ತನ್ನ ಕೊಡುಗೆ ಎಂದು ಕೊಡುವ ಪದ್ಧತಿ ಅನುಕರಣೆ – ದೇವರಿಗೆ ದೇವಾಲಯಕ್ಕೆ ಎಂಬ ಮನೋಭಾವನೆ – ಪರಿಣಾಮವಾಗಿ ದೇಣಿಗೆಗೆ ಮನೆ ಮನೆ ಸುತ್ತುವ ನಿತ್ಯ ಬದುಕು ದೇವಾಲಯದ ಯಜಮಾನನದ್ದು – ಯಾವುದೊ ಜನುಮದಲ್ಲಿ ಮಾಡಿದ ತಪ್ಪಿಗೆ ಪ್ರಾಯಚ್ಚಿತ್ತ.
ಅಂದಿನ ಅರಸರು ನಡೆಸುತಿದ್ದ ದೇವಾಲಯ ಇಂದಿನ ಅರಸರು – ಸರಕಾರ ನಡೆಸಬೇಕಾಗಿತ್ತು – ಅದು ತನ್ನ ಅಸಾಯಕತೆಯನ್ನು ಬಟ್ಟಬಯಲು ಮಾಡಿರುವ ಈ ಪರ್ವ ಕಾಲದಲ್ಲಿ – ದೇವಾಲಯಕ್ಕೊಂದು ಸೇವಾನಿದಿ – ಆನೆಬಲ – ಚಿಂತನ ಮಂಥನ ಅನುಷ್ಠಾನಕ್ಕೆ – ಒಂದು ವೇದಿಕೆ.
ದೇವಾಲಯಕ್ಕೆ ವಾರ್ಷಿಕವಾಗಿ ತಗಲುವ ವೆಚ್ಚವನ್ನು ಲೆಕ್ಕಹಾಕಿ – ಅಷ್ಟು ಮೊತ್ತದ ನಿಧಿ ಸಂಗ್ರಹ ಮಾಡಿ – ಈ ನಿಧಿ ಹಣವನ್ನು ಬಳಕೆ ಮಾಡುವ( ಗರಿಷ್ಠ ಅಂದರೆ ೧೦ – ೨೦ ಸಾವಿರ ) ಬಳಕೆದಾರರನ್ನ ಸೃಷ್ಟಿಸಿ – ಬಳಕೆದಾರ ತಾನು ಪಡೆದ ಮೊತ್ತದ ೧೦% ಪ್ರತಿ ತಿಂಗಳು ಸೇವಾ ನಿಧಿಗೆ ದಾನ ಮಾಡುವ ಪ್ರವೃತ್ತಿ ಬೆಳೆಸಿದರೆ – ದೇವಾಲಯದ ದೇವರ ಸಂಪೂರ್ಣ ಅನುಗ್ರಹ ಸೇವಾ ನಿಧಿ ದಾನಿಗಳಿಗೆ ಸಿಕ್ಕಿ – ಸ್ವಾವಲಂಬಿ ದೈವ ದೇವರು ಮತ್ತು ಬದುಕು ಎಂಬ ದೇವರ ಬಯಕೆ – ಈಡೇರಿಸಿದ ಸಂಪೂರ್ಣ ಫಲ ನಮಗೆ ನಿಮಗೆ ದೊರಕುವ ಸುದಿನದತ್ತ ದಾಪುಗಾಲು ಹಾಕೋಣ