ಒಂದು ಊರಿನ ಒಂದು ಮನೆಗೆ ಸ್ಥಳ ಪ್ರಶ್ನೆ ನಿಮಿತ್ತ ಜ್ಯೋತಿಸ್ಯರೊಬ್ಬರು ಬಂದು ತಮ್ಮ ಜ್ಯೋತಿಸ್ಯ ಚಿಂತನೆಯಲ್ಲಿ ಇಲ್ಲಿಯ ದೇವಸ್ಥಾನದಲ್ಲಿ ಕೆಲವೊಂದು ಲೋಪದೋಶಗಳಿವೆ ಎಂದು ಹೇಳಿದ್ದು – ಇತ್ತೀಚಿಗೆ ಇನ್ನೊಂನು ಊರಿನಲ್ಲಿ ಒಂದು ಮನೆಯಲ್ಲಿ ಪ್ರಸ್ನ ಚಿಂತನೆಯಲ್ಲಿ ಊರಿನ ಗುತ್ತಿನ ಮನೆಗೆ ದೋಷವಿದೆ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದು ಅವಲೋಕಿಸಿದಾಗ ಇವೆರಡು ಜ್ಯೋತಿಸ್ಯರು ತಮ್ಮ ವ್ಯಾಪ್ತಿ ಮೀರಿ ವರ್ತಿಸಿದ್ದು – ಇಂತಹ ಸನ್ನಿವೇಶಗಳು ಬಾರದಿರಲು ಪ್ರಸ್ತುತ ಸಮಾಜ – ಜೋತಿಶ್ಯರನ್ನು ಕರೆಸಿದ ಮನೆಯವರಿಗೆ ಮತ್ತು ಜ್ಯೋತಿಸ್ಯ ವರ್ಗಕ್ಕೆ ಸ್ಪಷ್ಟ ಮಾತುಗಳಲ್ಲಿ ವ್ಯಾಪ್ತಿ ಮೀರಿ ವರ್ತಿಸಿದರೆ ತಕ್ಕ ಪರಿಣಾಮವನ್ನು ಎದುರಿಸುವ ಎಚ್ಚರಿಕೆ ಕೊಡಬೇಕಾಗಿದೆ.
ನಾವು ಊರಿನವರು ಯಾ ದೇವಸ್ಥಾನದವರು ಜ್ಯೋತಿಸ್ಯರಾದ ನಿಮ್ಮನ್ನು ಪ್ರಸ್ನ ಚಿಂತನೆಗೆ ಕರೆದರೆ ಮಾತ್ರ ನಮ್ಮ ಬಗ್ಗೆ ತಿಳಿಸಲು ನಮ್ಮ ನಮ್ರ ವಿನಂತಿ
ಒಂದು ಮನೆಗೆ ಮನೆಯ ಚಿಂತನೆಗೆ ಬಂದರೆ ಆ ಮನೆಯ ಬಗ್ಗೆ ಮಾತ್ರ ತಿಲಿಸುವುದು ಸೂಕ್ತ
ಜೋತಿಶ್ಯರನ್ನು ಕರೆದು ಪ್ರಸ್ನ ಚಿಂತನೆ ಮಾಡುವ ಮನೆಯವರು ಕೂಡ ತಮ್ಮ ಮನೆಯ ಬಗ್ಗೆ ಮಾತ್ರ ಕೇಳುವ ಹಕ್ಕು ಅವರಿಗಿರುತದೆ.
ಊರಿನಲ್ಲಿ ನಡೆಯುವ ದೈವಾರಾಧನೆ ಮತ್ತು ದೇವರಾದನೆ ಬಗ್ಗೆ ಸಂಬಂಧಪಟ್ಟ ಕ್ಷೇತ್ರದ ಹೊರಗೆ ಚಿಂತನೆ – ಅನಿಸಿಕೆ ಅಭಿಪ್ರಾಯ – ಶ್ರದ್ದೆ ಭಕ್ತಿ ನಂಬಿಕೆಗಳಿಗೆ ಕೊಡಲಿಯೇಟು – ಈ ಲೋಪ ಆಗದಿರಲಿ
ಜೋತಿಷ್ಯ ವಿಜ್ಞಾನ ಅದನ್ನು ವಿಜ್ಞಾನವನ್ನಾಗಿ ಉಳಿಸುವ ಪ್ರಯತ್ನ ಮಾಡೋಣ – ಅಜ್ಞಾನವನ್ನಾಗಿ ಬೆಳೆಸುವ ಪರಿಪಾಠಕ್ಕೆ ಇತಿಶ್ರೀ ಹಾಡೋಣ