ಪಾವತಿ ಮಾಧ್ಯಮದ ಪ್ರಾಮುಖ್ಯತೆ – Importance of payment media

ಶೇರ್ ಮಾಡಿ

ಮಾಧ್ಯಮಗಳು ತನ್ನ ಸ್ಥಾನ ಮಾನ ಘನತೆ ಗೌರವವಗಳನ್ನು ನಿತ್ಯ ನಿರಂತರ ಉತ್ತುಂಗ ಶಿಖರಕ್ಕೇರಿಸಿ – ಸ್ವಾವಲಂಬಿಯಾಗಿ – ಮಾನವ ಕುಲಕೋಟಿಯ ಮನವೆಂಬ ಮೈದಾನದಲ್ಲಿ ಅಭಿವೃದ್ಧಿದಾಯಕ ಪೂರಕ ವಿಷಯಗಳನ್ನು ಮಾತ್ರ ಬಿತ್ತಿ – ಮಾರಕ ವಿಷಯಗಳಿಗೆ ಇತಿಶ್ರೀ ಹಾಡಿ – ಪ್ರಜಾಪ್ರಭುತ್ವ ದೇಶದ ನಾಲ್ಕನೇ ಅದಾರ ಸ್ಟಂಬಕ್ಕೆ ಪುಷ್ಟಿಕರಿಸಿ – ಬದುಕು ಮುನ್ನಡೆಸಬೇಕಾದ ಮಾದ್ಯಮಗಳಿಂದು – ಬಾಳಿ ಬದುಕಲು – ಅಜ್ಜ ನಟ್ಟ ಆಲದಮರದ ಕೆಳಗೆ ಬದುಕುವ ಸಂಪ್ರದಾಯಕ್ಕೆ ಮಂಗಳ ಹಾಡಿ – ವಿಭಿನ್ನ ಆಯಾಮಗಳಲ್ಲಿ ಚಿಂತನ ಮಂಥನ ಅನುಷ್ಠಾನದತ್ತ ಗಮನ ಹರಿಸಿ – ಜೀರ್ಣೋದ್ಧಾರಗೊಂಡ ಮಾಧ್ಯಮ ನಮ್ಮ ಪಾಲಿಗೆ ದೊರೆತು – ನೆಮ್ಮದಿ ಬಾಳಿಗೆ ನಾಂದಿಯಾಗಲಿ.
ಜಾಹಿರಾತು ಕೊಟ್ಟರೆ ಮಾತ್ರ ಮಾಧ್ಯಮಗಳಲ್ಲಿ ಯಾವುದೇ ವಿಷಯ ಪ್ರಕಟವಾಗುತದೆ ಎಂಬ ಅಲಿಖಿತ ನಿಯಮ ಜಾರಿಯಲ್ಲಿದ್ದು – ಇದು ಸನ್ಮಾರ್ಗದಲ್ಲಿ ಬಾಳುವೆ ನಡೆಸುವವರಿಗೆ ಮಾತ್ರ – ಕೊಲೆ ದರೋಡೆ ಅತ್ಯಾಚಾರ ಸತ್ಯಾಗ್ರಹ ಅವಘಡ ಯಾವುದೇ ಸಮಾಜಕ್ಕೆ ಕಂಟಕವಾಗುವ ಕೆಲಸ ಮಾಡಿದರೆ ಯಾ ಆದರೆ – ಅದಕ್ಕೆ ಯಾವುದೇ ಶುಲ್ಕವಿಲ್ಲದೆ ಎಲ್ಲ ಮಾಧ್ಯಮಗಳ ಮೊದಲ ಆದ್ಯತೆ ಸಿಕ್ಕಿ ಪ್ರಕಟಣೆಗೊಳ್ಳುತದೆ. ಇಂತಹ ಕೆಟ್ಟ ಕೃತ್ಯಗಳನ್ನು ಹೇಗೆ ಹತ್ತಿಕ್ಕಬಹುದು – ಬೇರೆ ಬೇರೆ ಪ್ರಜಾಪ್ರಭುತ್ವ ದೇಶಗಳಲ್ಲಿ ಯಾವ ರೀತಿ ನಡೆಯುತಿದೆ – ಶಾಶ್ವತ ಪರಿಹಾರ ಮಾರ್ಗಗಳ ಸಲಹೆ ಸೂಚನೆ ಇಲ್ಲದೆ – ಆರೋಪಿಗಳನ್ನು ದಸ್ತಗಿರಿ ಮಾಡಿದರೆ ಸುದ್ದ್ದಿ ಅವರನ್ನು ಬಿಡುಗಡೆ ಮಾಡಿದರೆ ಸುದ್ದಿ …………. ಇತ್ಯಾದಿ ಯಾವ ಸಂದೇಶವನ್ನು ಸಮಾಜಕ್ಕೆ ಬಿತ್ತರಿಸುತದೆ ಎಂಬ ಬಗ್ಗೆ ಚಿಂತಿಸೋಣ
ಸಮಾಜದ ಆಗುಹೋಗುಗಳನ್ನು ಬಿತ್ತರಿಸುವುದು ಪ್ರಸಾರ ಮಾಧ್ಯಮ – ಅದು ಮಾಧ್ಯಮ ಹೆಸರಿನೊಂದಿಗೆ ಪ್ರಚಲಿತದಲ್ಲಿದ್ದು – ಪ್ರಚಾರ ಮಾದ್ಯಮವೆಂಬ ಮುಖವಾಡ ಹಾಕಿಕೊಂಡು ಬದುಕುವ ಸಂದಿಗ್ದತೆ ಬಂದಿರುವುದಕ್ಕೆ ನಾವು ಕಾರಣ – ನಾವೆಲ್ಲ ಒಂದಾಗಿ ಪರಿಹಾರದತ್ತ ಗಮನ ಹರಿಸೋಣ
ಗ್ರಾಮ ಪಂಚಾಯತಿನಿಂದ ಹಿಡಿದು ಸಂಸತ್ತು ತನಕ – ಅಲ್ಲಿ ನಡೆಯುತಿರುವ ಎಲ್ಲ ರೀತಿಯ ಕೆಟ್ಟ ಮುಖಗಳನ್ನು ತೋರಿಸಲು ಪ್ರಕಟಿಸಲು ಯಾರು ಜಾಹಿರಾತು ಕೊಡಬೇಕಾಗಿಲ್ಲ. ಇದರ ಬದಲಾಗಿ ನಿಮ್ಮ ಒಳ್ಳೆಯ ಮುಖ ಮಾತ್ರ ತೋರಿಸುವ ಸಂಕಲ್ಪದೊಂದಿಗೆ ಮಾಧ್ಯಮಗಳ ಮುನ್ನಡೆದರೆ ನಾವು ನಿಂತ ನೆಲ ಸ್ವರ್ಗ ಆಗಬಹುದು.
ಸಾವಿರದಿಂದ ಹಿಡಿದು ಕೋಟಿಗಟ್ಟಲೆ ವೆಚ್ಚ ಮಾಡಿ – ಮದುವೆ ಮನೆ ದೈವಾರಾಧನೆ ದೇವರಾದನೆ ಬಯಕೆ ವಾರ್ಷಿಕೋತ್ಸವ ……………….ಇತ್ಯಾದಿ ನೂರಾರು ವಿಷಯಗಳಿಗೆ ಅವಕಾಶ ಕಲ್ಪಿಸುವ ವಿಭಿನ್ನ ಮಾರ್ಗಗಳನ್ನು ಕಂಡುಹಿಡಿದು – ಪಾವತಿ ಶುಲ್ಕದೊಂದಿಗೆ ಮಾಧ್ಯಮಗಳು ಪ್ರಕಟಿಸಿದರೆ ಮಾಧ್ಯಮಗಳ ಸಂಪಾದನೆ ಹೆಚ್ಚಿಸಿಕೊಳ್ಳಬಹುದು. ಮಾಧ್ಯಮಗಳು ಕೆಲವೇ ವ್ಯಕ್ತಿಗಳ ಪಕ್ಸಗಳ ಕೈಗೊಂಬೆಯಾಗುವ ಅನಿಷ್ಟ ಪದ್ಧತಿ ತಪ್ಪಿ – ಪ್ರಾಪಂಚಿಕವಾಗಿ ಬಂದಿರುವ ಕೆಟ್ಟ ಹೆಸರು ಕಾಲಕ್ರಮೇಣ ಮಾಯವಾಗಬಹುದು.
ನಾವು ಸಮಾಜದಲ್ಲಿ ಯಾವ ವಿಷಯವನ್ನು ಬಿತ್ತುತೇವೆ ಅದರ ಫಲವನ್ನು ನಾವು ತಿನ್ನುವ ಅನಿವಾರ್ಯತೆ ಇದ್ದು – ನಮ್ಮ ಬದುಕಿಗೆ ಬೇಡವಾದ ಕಹಿಯಾದ ವಿಷಯಗಳನ್ನು ಬಿತ್ತುವ ಪರಿಪಾಠಕ್ಕೆ ಇತಿಶ್ರೀ ಮಾಡುವ ದ್ರಡ ಸಂಕಲ್ಪ ನೀವು ನಾವು ಒಂದಾಗಿ ಮಾಡೋಣ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?