ದೈವಾರಾಧನೆ ನಾಟಕ – ಸರ್ವ ನಾಶಕ್ಕೆ ಮೂಲ

ಶೇರ್ ಮಾಡಿ

ಅರಸು ಪದ್ಧತಿ ಆಡಳಿತದಲ್ಲಿದ್ದ ಸರ್ವ ಶ್ರೇಷ್ಠ ನ್ಯಾಯಾಂಗ ವ್ಯವಸ್ಥೆಯಾದ ದೈವಾರಾಧನೆ ಪ್ರಜಾಪದ್ಧತಿ ಆಳ್ವಿಕೆಯಲ್ಲಿ ಮುಂದುವರಿಯುತಿರುವುದು ಸ್ವಾಗತಾರ್ಹ. ಆದರೆ ಮೂಲವನ್ನು ಮರೆತು – ಕಾಟಾಚಾರಕ್ಕೆ ಒತ್ತು ಕೊಟ್ಟು – ಪ್ರಜಾಪದ್ದತಿಯನ್ನು ಆಡಳಿತದಲ್ಲಿ ತುರುಕಿ – ದೈವದ ಯಜಮಾನನ್ನು ಮೂಲೆಗುಂಪು ಮಾಡಿ – ಪ್ರಸ್ತುತ ಬಹುಪಾಲು ಮನರಂಜನೆಗೆ ಮಾತ್ರ ಮೀಸಲಾಗಿರುವ ನಾಟಕವಾಗಿರುವುದು – ನಮ್ಮ ತಲೆಗೆ ನಾವೇ ಕಲ್ಲು ಹೊತ್ತು ಹಾಕಿಕೊಂಡು – ಬಾಳುವೆ ನಡೆಸುವ ಸ್ಥಿತಿ ನಿರ್ಮಾಣವಾಗಿದೆ.
ನಾವೆಲ್ಲರೂ ದೈವ ಆರಾಧಕರು – ಚಿಂತನ ಮಂಥನ ನಡೆಸಿ ಅನುಷ್ಠಾನಕ್ಕಾಗಿ ಕೆಲವು ಅನಿಸಿಕೆಗಳು
ಮಾನವ ಕುಲಕೋಟಿಯ ಒಗ್ಗಟ್ಟಿನ ಸಂಕೇತ ದೈವಾರಾಧನೆ ಅರಿಯೋಣ
ಪ್ರಕೃತಿ ಜೊತೆಗೆ ಬದುಕುವ ಪರಿಪಾಠವನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆ
ಮನೆಯವರ ಒಗ್ಗಟ್ಟಿಗೆ ಮನೆ ದೈವ , ಊರಿನ ಒಗ್ಗಟ್ಟಿಗೆ ಊರಿನ ದೈವ , ಅರಸು ವ್ಯಾಪ್ತಿ ಒಗ್ಗಟ್ಟಿಗೆ ಅರಸು ದೈವ ತಿಳಿಯೋಣ
ಸೂಕ್ತ ರೀತಿಯಲ್ಲಿ ಯಜಮಾನನ ಆಯ್ಕೆ ಮಾಡಿ ಮಾತ್ರ – ಊರಿನ ಗುತ್ತಿನ ಅರಸು ಮನೆತನಗಳಲ್ಲಿ – ದೈವಾರಾಧನೆ ನಡೆಸುವ ಸಂಕಲ್ಪ ನಮ್ಮದಾಗಲಿ
ಮನೆಯ ಯಜಮಾನಿಕೆ ಗುತ್ತಿನವನಿಗೆ , ಗುತ್ತಿನವನ ಯಜಮಾನಿಕೆ ಅರಸುಗೆ ಸಲ್ಲ
ವೇಶ ಭೂಷಣ ಕುಣಿತ ಕಟ್ಟು ಕಟ್ಟಳೆಗೆ ಕೊಟ್ಟಷ್ಟೇ ಮಹತ್ವ ನುಡಿಕಟ್ಟುಗಳಿಗೆ ಕೊಡೋಣ
ಸ್ವಾರ್ಥ – ಯಜಮಾನ ಮತ್ತು ಪರಿಚಾರಕ ಮತ್ತು ಇತರರಲ್ಲಿ ಮನೆ ಮಾಡಿರುವುದಕ್ಕೆ ಇತಿಶ್ರೀ ಮಾಡದಿದ್ದಲ್ಲಿ ನಮ್ಮ ಇತಿಶ್ರೀ ಮುಂದಕ್ಕೆ
ದೈವಕ್ಕೆ ನರ್ತನ ಸೇವೆ ಆ ವ್ಯಾಪ್ತಿಯ ನ್ಯಾಯದಾನದ ವೇದಿಕೆ
ಸರಿಯಾದ ನರ್ತನ ಸೇವೆ – ಅಷ್ಟಮಂಗಲ ಪ್ರಶ್ನೆ ಮಹತ್ವ ಇದೆ ಎಂಬುದು ಬಲ್ಲವರ ಮಾತು
ಆಂತರಿಕ ಆಡಂಬರದ ಅಂದಿನ ನರ್ತನ ಸೇವೆ – ನಾವು ಅಳವಡಿಸಬೇಕಾಗಿದೆ
ನರ್ತನ ಸೇವೆ ಅರಮನೆ ಬೀಡು ಗುತ್ತು ಬಾರಿಕೆ ಮುಂತಾದವರಿಗೆ ಸನ್ಮಾನ ವೇದಿಕೆ ಖಂಡಿತಾ ಅಲ್ಲ – ಸಮಾಜಘಾತಕ ವ್ಯಕ್ತಿಗಳನ್ನು ಮಾಯಜ್ಞಾನದ ಮೂಲಕ ಅರಿತು ಹೆಸರು ಹೇಳಿ ಕರೆದು ತಕ್ಕ ಶಿಕ್ಷೆ ವೇದಿಕೆಯಲ್ಲಿರುವ ಘಣ್ಯ ವ್ಯಕ್ತಿಗಳಿಂದ ಒಪ್ಪಿಗೆ ಪಡೆದು – ಶಿಕ್ಸಿಸುವ ಅಂದಿನ ನ್ಯಾಯದೇಗುಲ
ದೈವಾರಾಧನೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ – ಯಜಮಾನ ಪರಿಚಾರಕ ಜ್ಯೋತಿಸ್ಯರು ತಂತ್ರಿಗಳು ಅರ್ಚಕರು ನರ್ತಕರು ………. ತಮ್ಮ ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಮುಂದಕ್ಕೆ ಹೋಗೋಣ – ಅದುವೇ ನಿಜವಾದ ದೇವರಾದನೆ ದೈವಾರಾಧನೆ

See also  ದೈವ ಆರಾಧಕರ ಒಕ್ಕೂಟ ಇಚ್ಲಂಪಾಡಿ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?