ಜಾಗತಿಕ ಮಟ್ಟದಲ್ಲಿ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ನಮ್ಮ ಭಾರತ ದೇಶದಲ್ಲಿ ಶಾಸಕನಾಗಲು ಇರಬೇಕಾದ ಅರ್ಹತೆ, ಮಾನದಂಡ, ವಿದ್ಯಾರ್ಹತೆ, ತರಬೇತಿ, ಐಎಎಸ್ ಐಪಿಎಸ್ ರೀತಿಯ ಪರೀಕ್ಷೆ ಯಾವುದು ಕೂಡ ಇಲ್ಲದೆ, ಜನಾಬಿಪ್ರಾಯವೆಂಬ ಒಂದೇ ಮಾನದಂಡದಲ್ಲಿ ತೂಗಿನೋಡಿ – ಆಯ್ಕೆ ಪ್ರಕ್ರಿಯೆ ನಡೆದು ಶಾಸಕರಾದವರಿಂದ ನಾವು ಏನನನ್ನು ಗಿಟ್ಟಿಸಲು ಅಸಾಧ್ಯ . ಈ ವ್ಯವಸ್ಥೆಯ ಪ್ರಭಾವಿ ಯಂತ್ರ ಶಾಸಕಾಂಗ – ಇದು ನುರಿತ ಅನುಭವ ಹೊಂದಿದ ಚಾಲಕರಿಲ್ಲದ ವಾಹನದಂತೆ ಇದ್ದು ಇಲ್ಲದಂತಾಗಿದೆ. ಪ್ರತಿಯೊಬ್ಬ ಶಾಸಕರನ್ನು ಆಯ್ಕೆಮಾಡಿದ ನಾವು ಕುರಿಗಳಂತೆ ಅವರ ಹಿಂದೆ ಹೋಗುವ ಬದಲಾಗಿ ಅವರು ನಡೆಯಬೇಕಾದ ಸರಿಯಾದ ದಾರಿಯನ್ನು ತೋರಿಸುವುದು ನಮ್ಮೆಲ್ಲರ ಕರ್ತವ್ಯ.
ಒಬ್ಬ ಜೈನ ಮುನಿಯ ಕೊಲೆ ಅತಿ ನಿಕೃಷ್ಟ, ಮನಕಲುಕುವ ರೀತಿಯಲ್ಲಿ ಆಗಿರುವುವದು ಜನಸಾಮಾನ್ಯರಾದ ನಮಗೆ ಯಾರಿಗೂ ಕೂಡ ರಕ್ಷಣೆ ಇಲ್ಲ – ಕೊಡಲು ಸರಕಾರದ ಅಸಹಾಯಕತೆ ದ್ಯೋತಕ ಕಣ್ಣಿಗೆ ಕಟ್ಟುವಂತೆ ಹೇಳುತಿದೆ. ಈಗ ರಕ್ಷಣೆ ಪ್ರತಿಯೊಬ್ಬ ಪ್ರಜೆಗೆ ಕೊಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದು ಯಾರಿಂದಲೂ ಯಾವ ಸರಕಾರದಿಂದಲೂ ಅಸಾಧ್ಯವಾದ ಮಾತು
ಈ ತೆರನಾದ ವಾತಾವರಣ ಮಾಡಿದ್ದು ಆಡಳಿತ ವ್ಯವಸ್ಥೆ – ನೂರಕ್ಕೆ ನೂರು ತಪ್ಪಿತಸ್ಥರ ಮೇಲೆ ಆರೋಪಪಟ್ಟಿ ಸಲ್ಲಿಸಿ ನೂರಕ್ಕೆ ನೂರು ತಪಿತಸ್ಥರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳುವ ಜವಾಬ್ದಾರಿಯಿಂದ ನುಣುಚಿಕೊಂಡಿದ್ದುದರ ದ್ಯೋತಕ ಅಪರಾಧಿಗಳ ಗಣನೀಯ ಏರಿಕೆಗೆ ಮೂಲಕಾರಣ.
ಪಕ್ಷಗಳು ಪ್ರತಿನಿಧಿಗಳು ಪಕ್ಷದ ಮತ್ತು ತನ್ನ ಎಲಿಗಾಗಿ ದುಡಿಯುವ ಬದಲು ದೇಶದ ಮತ್ತು ಜನತೆಯ ಏಳಿಗೆಗೆ ದುಡಿಯುವ ವಾತಾವರಣ ನಮ್ಮದಾಗಬೇಕಿತ್ತು
ನಮ್ಮ ದೇಶದ ಒಂದು ರಾಜ್ಜ ಉತ್ತರಪ್ರದೇಶ – ಪ್ರಜಾಪ್ರಭುತ್ವ ದೇಶವಾದ ಇಂಗ್ಲೆಂಡ್ ಮತ್ತು ಅಮೇರಿಕಾದಲ್ಲಿ ಸಾಧ್ಯವಾದುದು ನಮ್ಮಲ್ಲಿ ಆಗದಿರುವುದು ಇಚ್ಚಾಶಕ್ತಿಯ ಕೊರತೆ ಎನ್ನುವುದರಲ್ಲಿ ಎರಡು ಮಾತಿಲ್ಲ
ತನಗಾಗಿ ಯಾವುದು ಬೇಡವೆಂದು ಬಟ್ಟೆಬರೆಯನ್ನು ತ್ಯಜಿಸಿ – ಜೀವನ ಮೌಲ್ಯಗಳ ಅಭಿವೃದ್ಧಿ ಏಕಮಾತ್ರ ಉದ್ದೇಶದಿಂದ ಬದುಕು ಸಾಗಿಸುವ ಮುನಿಗೆ ಇಂದು ನಮಗೆ ನಾಳೆ ಅರಿತು ಬಾಳೋಣ,
ಶಾಸಕರ ಸೇವಾ ಒಕ್ಕೂಟದ ನೇತೃತ್ವದಲ್ಲಿ ಪ್ರತಿ ಹಂತದಲ್ಲೂ ಸೇವಾ ಒಕ್ಕೂಟಗಳು ಸ್ಥಾಪನೆಗೊಂಡು – ಸೇವಾ ಮನೋಭಾವನೆ ನಮ್ಮೆಲ್ಲರದ್ದು ಆದಾಗ – ನಾವು ನಿಂತ ನೆಲ ಸ್ವರ್ಗವಾಗುವ ಹೆಬ್ಬಯಕೆ ನಮ್ಮದು ಮತ್ತು ನಿಮ್ಮದು.
ಪ್ರತಿ ಊರಿನಲ್ಲಿ ಪ್ರತಿಯೊಬ್ಬರೂ ಸೇವಾ ಒಕ್ಕೂಟದ ಸದಸ್ಯರಾಗುವುದು – ಸೇವಾ ಬದುಕಿನ ಉಗಮ ನಮ್ಮದಾಗಲಿ