ದೇಹದ ರೋಗಕ್ಕೆ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಮದ್ದನ್ನು – ಅವರು ಹೇಳಿದ ರೀತಿಯಲ್ಲಿ ತೆಗೆದುಕೊಂಡು ನಾವು ನಮಗೆ ಬಂದ ರೋಗಕ್ಕೆ ಪರಿಹಾರ ಕಂಡುಕೊಳ್ಳುತೇವೆ. ಆದರೆ ಬದುಕಿಗೆ ರೋಗ ಬಂದಿದೆ ಅದಕ್ಕೆ ಸೂಕ್ತ ಮದ್ದು ಮಾಡಿ ರೋಗ ಮುಕ್ತ ಮಾಡಿಕೊಳ್ಳುವ ಪರಿಪಾಠ ನಮ್ಮಿಂದ ಕಾಲ ಉರುಳಿದಂತೆ ದೂರ ದೂರವಾಗಿ – ಮಾನವ ಕುಲಕೋಟಿಗೆ ಸಾಂಕ್ರಾಮಿಕ ರೋಗವಾಗಿ ಪ್ರತಿಯೊಬ್ಬರನ್ನು ನಿರಂತರ ಪೀಡಿಸುತ್ತಾ – ಸುಖ ಶಾಂತಿ ನೆಮ್ಮದಿ ಲಭಿಸುವ ಕಟ್ಟಕಡೆಯ ಆಶಾಗೋಪುರ ನುಚ್ಚುನೂರಾಗಿ ಅವಶೇಷಗಳ ಮೇಲೆ ನಡೆದಾಡುವ ಸ್ಥಿತಿ ಸೃಷ್ಟಿಯಾಗಿರುವುದು ಮಾನವರಾದ ನಮ್ಮೆಲ್ಲರ ಕೊಡುಗೆ.
ಜೈನ ಧರ್ಮದ – ಹಸಿವು ಬಾಯಾರಿಕೆ ಮುಪ್ಪು ರೋಗ ಜನನ ಮರಣ ಪ್ರೀತಿ ವೈರ ಮಮತೆ ಚಿಂತೆ ರತಿ ನಿದ್ರೆ ಖೇದ ಬೆವರು ಆಶ್ಚರ್ಯ ಮುಂತಾದ ಹದಿನೆಂಟು ರೀತಿಯ ರೋಗಗಳಿಂದ ಮುಕ್ತನಾದಾಗ ಬದುಕಿನ ಉದ್ದೇಶ ಗುರಿ ತಲುಪಬಹುದು ಎಂಬ ನೀತಿ ಪಾಠವನ್ನು ಅಳವಡಿಸಿ – ಯಾ ಪ್ರತಿ ಧರ್ಮದಲ್ಲಿ ಕೂಡ ತಿಳಿಯಪಡಿಸಿರುವ ನೀತಿ ಪಾಠಗಳನ್ನು ಆಯಾಯ ಧರ್ಮದವರು ಬದುಕಿನಲ್ಲಿ ಅನುಷ್ಠಾನಕ್ಕೆ ತಂದಾಗ – ನಮ್ಮ ನಮ್ಮ ಬೆನ್ನಿನಲ್ಲಿ ಇರುವ ಕೊಳಕು ನಮಗೆ ಅರಿವಾಗಿ – ನಾವು ಬದುಕಿನ ಸ್ವಚ್ಛತೆ ಬಗ್ಗೆ ಅರಿತು ಮುನ್ನಡೆಯ ದ್ರಢ ಸಂಕಲ್ಪ ಮಾಡಿದಾಗ ಮಾತ್ರ ಮಾನವ ಧರ್ಮ ಪಾಲನೆ ಮಾಡುವ ಮಾನವರಾಗುತ್ತೆವೆ ಇಲ್ಲವಾದಲ್ಲಿ ಬಕಾಸುರರಾಗತ್ತೆವೆ ಎನ್ನುವ ಕಹಿ ಸತ್ಯ ನಮಗೆ ತಿಳಿದಿರಲಿ. ನೆಮ್ಮದಿ ಬದುಕು ರೋಗಕ್ಕೆ ತುತ್ತಾಗಿದೆ ಎಂದು ಅರಿತು ದೇವರು ಕೊಡುವ ಮದ್ದು ಕ್ರಮಬದ್ಧವಾಗಿ ತೆಗದುಕೊಂಡು ರೋಗಮುಕ್ತ ಸಮಾಜ ನಮ್ಮ ಪಾಲಿಗೆ ಸಿಗಲು ದೇವರಲ್ಲಿ ಮೊರೆ ಹೋಗೋಣ