ಜಲಮರುಪೂರಣ ಸೇವಾ ಒಕ್ಕೂಟ

ಶೇರ್ ಮಾಡಿ

ಭೂಮಿಯ ಒಡಲಿನಲ್ಲಿ ನೂರಾರು ವರುಷಗಳಿಂದ ಸಂಗ್ರಹಿಸಲ್ಪಟ್ಟ ನೀರನ್ನು ಸಮರೋಪಾದಿಯಲ್ಲಿ ಕೊಳವೆಬಾವಿ ಮಾಡಿ ನಮ್ಮ ನೀರಿನ ದಾಹ ಈಡೇರಿಸಿದ ಫಲವಾಗಿ ಅಂತರ್ಜಲ ದಿನೇ ದಿನೇ ಪಾತಾಳಕ್ಕೆ ಹೋಗುತಿದೆ. ನಮ್ಮ ಮುಂದಿನ ಜನಾಂಗಕ್ಕೆ ನೀರಿನ ಅಭಾವ ಶಾಶ್ವತ ಪರಿಹಾರಕ್ಕಾಗಿ ಹಾಗು ನಮ್ಮ ನೆಮ್ಮದಿ ಬದುಕಿಗಾಗಿ ಸಮರೋಪಾದಿಯಲ್ಲಿ ಜಲಮರುಪೂರಣ ಕ್ರಾಂತಿಗೆ ವಿವಿಧ ನೆಲೆಯಲ್ಲಿ ಪ್ರತಿಯೊಬ್ಬರೂ ಧುಮುಕುವ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ಕಲೆಹಾಕಿದ ಜನಾಭಿಪ್ರಾಯವನ್ನು ಮುಂದಿಟ್ಟು – ನಾವೆಲ್ಲರೂ ಚಿಂತನ ಮಂಥನ ನಡೆಸಿ ಅನುಷ್ಠಾನದತ್ತ ದಾಪುಗಾಲು ಹಾಕೋಣ.
ಕೊಳವೆ ಬಾವಿಯಿಂದ ಒಬ್ಬ ಒಂದು ವರುಷಕ್ಕೆ ತೆಗೆಯುವ ನೀರು – ೫ h p ಪಂಪು ಗಂಟೆಗೆ ೧೦,೦೦೦ ಲಿಟರಿನಂತೆ ಆರುಗಂಟೆಗೆ ೬೦,೦೦೦ ಲೀಟರು ದಿನಕ್ಕೆ – ತಿಂಗಳಿಗೆ ೧೮,೦೦,೦೦೦ ಲೀಟರು – ೫ ತಿಂಗಳು ನೀರು ತೋಟಕ್ಕೆ ಹಾಯಿಸಿದರೆ ಒಟ್ಟು ನೀರು ೯೦,೦೦,೦೦೦ ಲೀಟರು – ಕನಿಷ್ಠ ಕೊಳವೆ ಬಾವಿಯಿಂದ ತೆಗೆದಷ್ಟು ನೀರನ್ನು ಆ ಬಾವಿಗೆ ತುಂಬಿಸುವ ಕೆಲಸ ಮಾಡದೇ ಹೋದರೆ ವರುಷಕ್ಕೆ ಒಂದು ಯಾ ಎರಡು ವರುಷಕ್ಕೆ ಒಂದು ಕೆಳವರಿಗೆ ೫, ೧೦, ೧೫ ವರುಷಕ್ಕೆ ಒಂದರಂತೆ ಕೊಳವೆ ಬಾವಿ ಮಾಡುವ ಸನ್ನಿವೇಶ ನಮ್ಮ ಮುಂದೆ ಇದೆ.
ಇನ್ನು ಮುಂದಕ್ಕೆ ನಾವು ಒಂದು ಹೆಜ್ಜೆ ಮುಂದೆ ಹೋಗಿ ನೇರವಾಗಿ ಕೊಳವೆ ಬಾವಿಗೆ ಮಳೆಗಾಲ ಪೂರ್ತಿ ಕೆರೆ ಬಾವಿ ತೋಡು ಇತ್ಯಾದಿಗಳಿಂದ ಶುದ್ಧ ನೀರನ್ನು ಒಂದು ಯಾ ಎರಡು H p ಪಂಪು ಮೂಲಕ ತುಂಬಿಸುವ ಕಾರ್ಯ ಮಾಡಬೇಕಾಗಿದೆ.
ಪ್ರತಿ ಹಳ್ಳಿಯಲ್ಲಿ ಜಲಮರುಪೂರಣ ಸೇವಾ ಒಕ್ಕೂಟ ಮಾಡೋಣ
ಪ್ರತಿ ಕೊಳವೆಬಾವಿ ಹೊಂದಿದವರನ್ನು ಸದಸ್ಯರನ್ನಾಗಿಸಲು ಪ್ರೇರೆಪಿಸೋಣ
ನೇರವಾಗಿ ಪಂಪಿನ ಮೂಲಕ ತುಂಬಿಸಲು ಎದುರಾಗುವ ಸಮಸ್ಯೆ ಬಗ್ಗೆ ಚಿಂತಿಸಿ ಪರಿಹರಿಸೋಣ
ಕೊಳವೆ ಬಾವಿ ತೆಗೆದು ಪಂಪು ಅಳವಡಿಸಲು ತಗಲುವ ವೆಚ್ಚದ ೧೦% ವೆಚ್ಚ ಮಾಡಿದರೆ ನಮಗೆ ಶಾಶ್ವತ ಪರಿಹಾರ ಬಗ್ಗೆ ಮನದಟ್ಟು ಮಾಡೋಣ
ಜಲಮರುಪೂರಣ ಕಾರ್ಯದಲ್ಲಿ ತೊಡಗಿರುವವರ ವ್ಯಾಪಕ ಪ್ರಚಾರಕ್ಕೆ ಈ ವೇದಿಕೆ ಬಳಸೋಣ
ಬೆರಳೆಣಿಕೆ ವರುಷಗಳಲ್ಲಿ ಅಂತರ್ಜಲ ಮಟ್ಟ ಗಣನೀಯ ಏರಿಕೆಗೆ ಪ್ರಯತ್ನಿಸೋಣ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?