ಅರಣ್ಯ ಸುಮಾರು ಭೂಪ್ರದೇಶದ ೧/೩ ಅನಿವಾರ್ಯವೆಂದು ಅರಿತು ಬೇಕು ಬೇಕಾದ ಕಾನೂನು ರಚಿಸಿ ಅನುಷ್ಠಾನಕ್ಕಾಗಿ ಸೂಕ್ತ ವ್ಯವಸ್ಥೆ ಜಾರಿಯಲ್ಲಿದ್ದರೂ – ವಸ್ತು ಸ್ಥಿತಿ ಬಗ್ಗೆ ಅವಲೋಕಿಸಿದಾಗ ಸರಕಾರದಿಂದ ಮಾತ್ರ ಇದು ಕಷ್ಟ – ಮಾನವರಾದ ನಾವು ಕೂಡ ಕೈಜೋಡಿಸಿ – ಪ್ರಕೃತಿ ಮಾನವಸ್ನೇಹಿಯಾಗಿ ಇಂದಿನ ಮುಂದಿನ ಜನಾಂಗಕ್ಕೆ ಸದಾ ದೊರಕುವಂತೆ ಮಾಡಲು ಪ್ರತಿಯೊಬ್ಬರು ಅರಣ್ಯ ಸೇವಾ ಒಕ್ಕೂಟದೊಂದಿಗೆ ತಮ್ಮ ತಮ್ಮ ಕಿರು ಸೇವೆಯನ್ನು ಸಮರ್ಪಣೆ ಮಾಡುವುದೊಂದೇ ಉಳಿದಿರುವ ಕಟ್ಟಕಡೆಯ ದಾರಿಯಾಗಿದ್ದು ಅದರಲ್ಲಿ ಮುನ್ನಡೆಯೋಣ.
ದಟ್ಟವಾದ ಅರಣ್ಯ ಸಂಪತ್ತು ಯಾಕೆ ಬೇಕು ?
೧. ಪ್ರಕೃತಿಯ ಏರುತಿರುವ ಉಷ್ತ್ನತೆ ತಗ್ಗಿಸಲು
೨.ಭೂಮಿಯ ಅಂತರ್ಜಲ ಮಟ್ಟ ಕಾಪಾಡಲು
೩. ಮಣ್ಣಿನ ಸವಕಳಿ ತಗ್ಗಿಸಲು
೪. ಜೀವರಾಶಿಗಳು ಮತ್ತು ಪ್ರಾಣಿಗಳ ಆಹಾರಕ್ಕಾಗಿ
೫. ಕಾಡುಪ್ರಾಣಿಗಳಿಂದ ಕೃಷಿ ಹಾಗು ಪ್ರಾಣ ರಕ್ಸಣೆಗಾಗಿ
೭. ನಿತ್ಯ ಬದುಕಿನ – ಮನೆ ಉಅಪಕರಣಗಳು ಇತ್ಯಾದಿ ಪೂರೈಸಲು
೮.. ಪ್ರಾಮುಖ್ಯವಾಗಿ ಶುದ್ದವಾದ ಗಾಳಿಗಾಗಿ – ಈ ದೊಡ್ಡ ಪಟ್ಟಿ ನಮ್ಮ ಮುಂದಿದೆ
ಅರಣ್ಯ ಸೇವಾ ಒಕ್ಕೂಟ ಈ ಸಮಸ್ಯೆಗೆ ಪರಿಹಾರ ಒದಗಿಸಬಹುದೆ
ಇದರ ಮಹತ್ವದ ಬಗ್ಗೆ ಅರಿವು ಮೂಡಿಸಲು ಸಾಧ್ಯವಿದೆ
ಕೃಷಿ ಭೂಮಿಯಲ್ಲಿ ಕೃಷಿ ಮಾಡಿ ಸಂಪಾದನೆ ಮಡಿದ ರೀತಿಯಲ್ಲಿ ಒಕ್ಕೂಟದಿಂದ ಸಂಪಾದನೆ ದಾರಿ ಕಲ್ಪಿಸುವುದು
ಪ್ರಾಣಿಗಳಿಗೆ ಆಹಾರ ಕೃಷಿಕರಿಗೆ ಆದಾಯ ಕೊಡಬಲ್ಲ ಮರಗಳನ್ನು ಹೆಚ್ಚು ಹೆಚ್ಚು ಬೆಳೆಸುವುದು
ನನ್ನ ಭೂಮಿ ಅರಿವು ವಿಸ್ತಾರವಾಗಿ ನಮ್ಮ ಭೂಮಿ ಉಳಿಸಿ ಬೆಳೆಸುವ ಮಾನವ ಬದುಕು ಕಟ್ಟುವ ಸನ್ಮಾರ್ಗಕ್ಕೆ ನಾಂದಿ
ಇದು ಯಾರು ಮಾಡಬೇಕು
ನಾವು ನಮ್ಮ ಒಳಿತಿಗಾಗಿ ಪ್ರತಿಯೊಬ್ಬರು ಕೈಜೋಡಿಸಬೇಕು
ಪ್ರತಿ ಊರಿನಲ್ಲಿ ಈ ತೆರನಾದ ಒಕ್ಕೂಟಗಳ ಅನಿವಾರ್ಯತೆ ಇದೆ
ಈ ಒಕ್ಕೂಟಗಳು ಮುಂದಕ್ಕೆ ಸ್ಥಾನ ಮಾನ ಘನತೆ ಗೌರವ ದೊರಕಿಸುವ ಜೊತೆಗೆ ಸಂಪಾದನೆಗೂ ಗುರುತರ ಬಾಗಿಲು ತೆರೆಯಲಿದೆ
ದಿನದ ೨೪ ಗಂಟೆಯಲ್ಲಿ ಕೇವಲ ಒಂದು ಗಂಟೆಯಾದರೂ ಪ್ರಕೃತಿಯನ್ನು ಸ್ವರ್ಗವನ್ನಾಗಿಸಲು ಇಂದೇ ಪಣತೊಡೋಣ
ಬೇರೆ ಬೇರೆ ಮಾಧ್ಯಮಗಳು ಇತ್ತ ಬೆಳಕು ಹರಿಸುವ ಸುದಿನ ಶೀಘ್ರ ಬರಲಿ ಎಂಬುದು ನಮ್ಮ ಅಂಬೋಣ