ಶಾಲಾಕಾಲೇಜುಗಳು ಇರುವಲ್ಲಿ ಮತ್ತು ಪೇಟೆ ಪಟ್ಟಣಗಳಲ್ಲಿ ಇದರ ಅವ್ಯಶ್ಯಕತೆ ವಿಪುಲವಾಗಿದ್ದು ಕೆಲವೊಂದು ಸನ್ನಿವೇಶಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿಯೂ ತನ್ನ ವ್ಯಾಪ್ತಿಯನ್ನು ಮುಂದುವರಿಸಿರುವುದು ಕಂಡುಬರುತದೆ
ಮನೆ ಮಂದಿಯ ಜೊತೆಗೆ ಒಂದೆರಡು ಮಂದಿಗೆ ಯಾ ಹಲವರಿಗೆ ಇನ್ನು ಮುಂದಕ್ಕೆ ಹೋದಾಗ ಅದೇ ವೃತ್ತಿಯನ್ನು ನಡೆಸಿಕೊಂಡು ಹೋಗುವ ಪದ್ಧತಿ ಜಾರಿಯಲ್ಲಿದೆ. ಇದು ಮನೆಯವರಿಗೂ ಮತ್ತು ಅತಿಥಿಯಾಗಿರುವವರಿಗೂ ಬಹಳ ಅನುಕೂಲವಾಗಿ ಉದ್ಯಮದತ್ತ ದಾಪುಗಾಲು ಹಾಕಿ ಬಲುದೂರ ಸಾಗಿದೆ. ಇವುಗಳನ್ನು ತಮಗೆ ಬೇಕಾದಲ್ಲಿ ಹುಡುಕುವ ಕೆಲಷ ಬಹಳ ಶ್ರಮದಾಯಕವಾಗಿರುವುದನ್ನು ಕಡಿತ ಗೊಳಿಸಲು ಇಂತಹ ಬುಲೆಟಿನ್ ಬಹಳ ಸಹಕಾರಿ ಮಾತ್ರವಲ್ಲದೆ ಅವುಗಳ ಸ್ಥಾನ ಮಾನವನ್ನು ಅಭಿವೃದ್ಧಿಪಡಿಸುತದೆ.
ಒಂದು ತೀರದಲ್ಲಿ ಆತಿಥ್ಯ ವಹಿಸುವವರು ಇನ್ನೊಂದು ತೀರದಲ್ಲಿ ಅಪೇಕ್ಷಿತರು ಮಧ್ಯವರ್ತಿಗಳ ಹಾವಳಿಗೆ ಬಲಿಪಶುಗಳಾಗುವ ಸಂದರ್ಭಗಳು ಹಂತ ಹಂತವಾಗಿ ಅಸ್ತಿತ್ವ ಕಳೆದುಕೊಳ್ಳಬಹುದು
ಮಾನವರ ಅವಶ್ಯಕತೆಗಳನ್ನು ಮನಗಂಡು ಅದಕ್ಕೆ ಸ್ಪಂದಿಸುವ ಪರಿಕಲ್ಪನೆ ವಾಸ್ತವಕ್ಕೆ ಇಳಿದಾಗ ಆನ್ಲೈನ್ ಮಾಧ್ಯಮದ ಉದ್ದೇಶ ಗುರಿ ಈಡೇರಿದಂತಾಗುತದೆ.
ಉದ್ಯೋಗ ಮತ್ತು ಉದ್ಯಮ ಆಕಾಂಕ್ಷಿಗಳು ಇತ್ತ ಗಮನಹರಿಸುವ ಬಯಕೆ ನಮ್ಮೆಲ್ಲರದಾಗಿದೆ
.