ಮನೆ, ಗುತ್ತಿನಮನೆ, ಅರಮನೆ ಎಂಬ ಮೂರು ರೀತಿಯ ಮನೆಗಳು ಸಾಮಾನ್ಯವಾಗಿ ಅರಸರ ಕಾಲದಿಂದ ನಾವು ಕಾಣುತಿದ್ದು ಸಾಮಾನ್ಯರು ಮನೆಗಳಲ್ಲಿ , ಗುತ್ತಿನವರು ಗುತ್ತಿನ ಮನೆಯಲ್ಲಿ, ಅರಸರು ಅರಮನೆಯಲ್ಲಿ ಇರುವುದು ವಾಸ್ತವ ಸ್ಥಿತಿ. ಅರಸರ ಅಸ್ತಿತ್ವ ಹೋಗಿ ಪ್ರಜಾಪದ್ಧತಿ ಆಡಳಿತ ಹಸ್ತಾಂತರಗೊಂಡ ಬಳಿಕ ದಿಕ್ಕು ತೋಚದೆ ಮೂಲೆಪಾಲಾದ -ಅರಸರ ಗುತ್ತಿನವರ ಜೀವನ ಮಟ್ಟ ಸಾಮಾನ್ಯ ಜನರ ಮಟ್ಟಕ್ಕೆ ಕುಸಿದು – ಅರಮನೆ ಮತ್ತು ಗುತ್ತಿನ ಮನೆಗಳು ಬಹು ಪಾಲು ಕುಸಿದು ಹೋಗಿ ಅವಶೇಷಗಳು ಮಾತ್ರ ಬಹುತೇಕ ಕಾಣಬರುತಿದೆ. ಆದರೂ ಕೆಲವರು ತಮ್ಮ ಛಲ ಬಿಡದೆ ಅಂದಿನ ಹಿರಿತನದ ಗುತಿನಮನೆ ,ಅರಮನೆಗಳು ಇಂದುಕೂಡಾ ಬೆರಳೆನಿಕೆಯಾಗಿ ಉಳಿಸಿರುವುದು ಅವರುಗಳು ತಮ್ಮ ಪೂರ್ವಜರಿಗೆ ಕೊಟ್ಟ ಪ್ಯೂಜ್ಜನಿಯ ಗೌರವದ ಸಂಕೇತ. ಅವರ ಆದರ್ಶ ಬದುಕಿಗೆ ತಲೆಬಾಗಿ ದೊಡ್ಡ ಪ್ರಣಾಮಗಳನ್ನು ಸಲ್ಲಿಸುತ್ತಾ – ನಿಮ್ಮ ಶ್ರಮಕ್ಕೆ ನಮ್ಮ ಕಿಂಚಿತ್ತೂ ಕೊಡುಗೆ ತೆತ್ತು – ಪ್ರಸ್ತುತ ಸಮಾಜದ ಜನಸಾಮಾನ್ಯರು ನೋಡುವ ಅವಕಾಶವನ್ನು ಈ ವೇದಿಕೆಯಲ್ಲಿ ಕಲ್ಪಿಸುತಿದ್ದೇವೆ .
ಈ ನಿಟ್ಟಿನಲ್ಲಿ ನಮ್ಮ ಕೊಡುಗೆಯು ಸಮಾಧಾನ ಪಡುವ ಮಟ್ಟಿಗೆ ಇದ್ದು – ಅದನ್ನು ಕೂಡ ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡುವ ಕೆಲಸ ಮುಂದುವರಿಯುತದೆ. ಕೆಲವು ಸಾವಿರ ರೂಪಾಯಿಗಳಿಂದ ಕಟ್ಟಲ್ಪಡುವ ಮನೆಗಳಿಂದ ಆರಂಭ ಮಾಡಿ ಕೆಲವು ಸಾವಿರ ಕೋಟಿ ರೂಪಾಯಿಗಳಿಂದ ರೂಪಗೊಳ್ಳುವ ಮನೆಗಳು ನಮ್ಮ ಕಣ್ಣಿಗೆ ಗೋಚರಿಸುತವೆ. ಇದರ ಹಿಂದೆ ನಮ್ಮ ಸಮಕಾಲೀನವರ ಜೀವನದುದ್ದಕ್ಕೆ ಪಟ್ಟ ಶ್ರಮದ ಬದುಕು ಅಡಗಿದೆ. ಇದಕ್ಕೂ ಕೂಡ ಸೂಕ್ತ ಬೆಲೆ ಸಮಾಜದಿಂದ ಪಡೆಯುವ ಹಕ್ಕು ಅವರಿಗಿದೆ. ಇದನ್ನು ಮನಗಂಡು – ಪ್ರತಿಯೊಬ್ಬರೂ ತಾವು ಇಚ್ಚಿಸಿದಲ್ಲಿ ತಮ್ಮ ತಮ್ಮ ಮನೆಗಳನ್ನು ಜಗತ್ತಿನಾದ್ಯಂತ ಪ್ರತಿಯೊಬ್ಬರೂ ನೋಡುವಂತೆ ಮಾಡುವ ವೇದಿಕೆಯನ್ನು ಪರಿಚಯಿಸುತಿದ್ದೇವೆ .
ಹೆತ್ತ ತಾಯಿಗೆ ಹೆಗ್ಗಣ ಮುದ್ದು – ತಾನು ಕಟ್ಟಿದ ಮನೆ ತನಗೆ ಅಂದ ಚೆಂದ – ಅದಕ್ಕೆ ಎಷ್ಟು ಹಣ ವೆಚ್ಚ ಆಗಿದೆ ಎಂಬುದು
ಇಲ್ಲಿ ಅಪ್ರಸ್ತುತ. ಆದುದರಿಂದ ತನ್ನ ವಾಸದ ಮನೆಯನ್ನು ಪರಿಚಯಿಸುವ ಇಚ್ಚಿಸುವವರಿಗೆ ಇಲ್ಲಿ ಅವಕಾಶ ಇರುವುದನ್ನು ತಿಳಿಸುತ್ತಿದ್ದೇವೆ.
ಪ್ರತಿಯೊಬ್ಬರೂ ತಾವು ವಾಸ ಮಾಡುವ ಮನೆಗಳ ಭಾವಚಿತ್ರ ಪ್ರಕಟಿಸಿದರೆ ನೂರಾರು ಜನರು ಮನೆ ನಿರ್ಮಾಣಮಾಡುವ ಇಚ್ಛೆ ಹೊಂದಿದವರಿಗೆ ದೊಡ್ಡ ಸಹಾಯಮಾಡಿದ ಪುಣ್ಯ ನಿಮ್ಮ ಪಾಲಿಗಿರುತದೆ.
ಈ ನಿಟ್ಟಿನಲ್ಲಿ ಕೆಲವೊಂದು ಮಾಹಿತಿ ಕೊಟ್ಟರೆ ಸೂಕ್ತವೆಂಬುದು ಜನ ಸಾಮಾನ್ಯರ ಅಂಬೋಣ
ಮನೆಯ ವಿಸ್ತಿರ್ಣ ಮತ್ತು ಮನೆ ನಿರ್ಮಾಣಕ್ಕೆ ತಗಲಿದ ವೆಚ್ಚ
ವೆಚ್ಚ ಕಡಿತಕ್ಕೆ ನೀವು ಕಂಡುಕೊಂಡ ಅನುಭವಗಳು
ಒಂದು ಕುಟುಂಬಕ್ಕೆ (ನಾಲ್ಕು ) ಜನರಿಗೆ ಎಷ್ಟು ವಿಸ್ತಿರ್ಣದ ಮನೆ ಸೂಕ್ತ
ನಾವು ಎಲ್ಲಿ ಎಲ್ಲ ಮೋಸಹೋಗಬಹುದು
ನಮಗೆ ಬೇಕಾದ ಸರಿಯಾದ ಮಾಹಿತಿ ಕಲೆಹಾಕುವುದು ಹೇಗೆ
ಅನುಭವ ಇರುವ ವ್ಯಕ್ತಿಗೂ ಅನುಭವವಿಲ್ಲದ ವ್ಯಕ್ತಿಗೂ ತಗಲುವ ವೆಚ್ಚವನ್ನು ಕನಿಷ್ಠ ಅಂತರಕ್ಕೆ ತರುವ ಗುಟ್ಟು ತಿಳಿಸಿ
ವಾಸ್ತು ಮತ್ತು ಎಂಜಿನೀಯರರ ವೆಚ್ಚವನ್ನು ಕಡಿತಗೊಳಿಸುವ ರೀತಿ
ಈ ನಿಟ್ಟಿನಲ್ಲಿ ನಮ್ಮ ಅನುಭವಗಳನ್ನು ಹಂಚಿ ನಮ್ಮ ಏಳಿಗೆಗೆ ನಾವು ಬದ್ಧರಾಗೋಣ