ಮಾತಾ ಪಿತೃಗಳು ಕಣ್ಣಿಗೆ ಕಾಣುವ ದೇವರು ಎಂಬುದು ನಾಣ್ಣುಡಿ – ಜನಸಾಮಾನ್ಯರಾದ ನಾವೆಲ್ಲರು ಒಪ್ಪಿಕೊಂಡಿದ್ದೇವೆ – ಇದು ಪುಸ್ತಕದ ಬದನೇಕಾಯಿ ಆಗುವ ಬದಲು ಮಸ್ತಕದ ಬದನೇಕಾಯಿ ಆಗಬೇಕೆಂಬ ಸದುದ್ದೇಶದ ಫಲಶ್ರುತಿ – ಈ ವೇದಿಕೆ, ಅಗಲಿದ ನಮ್ಮವರ ಸ್ಮರಣಾರ್ಥ – ಶಾಸ್ತ್ರದಾನ , ಸಮಾಧಿ , ದೇವಾಲಯ ಬಸದಿಗಳ ನಿರ್ಮಾಣ , ಸಮಾಜ ಸೇವೆಗಳ ಹೆಸರಿನಲ್ಲಿ ವಿಭಿನ್ನ ಕಾರ್ಯಕ್ರಾಮಗಳು , ಯೋಜನೆಗಳು , ಉದ್ದಿಮೆಗಳು ಇತ್ಯಾದಿ ಇತ್ಯಾದಿ – ಅವರವರ ಆರ್ಥಿಕ ಬಲಕ್ಕೆ ಅನುಗುಣವಾಗಿ ತಮ್ಮ ತಮ್ಮ ಕರ್ತವ್ಯ ಪೂರೈಸುತಾರೆ.
ನಮ್ಮ ಸಂಪಾದನೆ ಮೂರೂ ಪಾಲು ಮಾಡಿ – ಹಿರಿಯರಿಗೆ , ಸಮಾಜ ಸೇವೆಗೆ , ತನ್ನ ಅಭಿವೃದ್ಧಿಗೆ – ಮೀಸಲಾಗಿಟ್ಟು ಬದುಕಿದಾಗ ಮಾತ್ರ – ನಮ್ಮ ಬದುಕು ನಮ್ಮ ಮುಂದಿನ ಜನಾಂಗಕ್ಕೆ ಆದರ್ಶವಾಗಿ – ಸುಖ ಶಾಂತಿ ನೆಮ್ಮದಿಯ ಸಾಧ್ಯ ಎಂಬುದು ಪೂರ್ವಜರ ಅಂಬೋಣ.
ನಮ್ಮ ಸಂಪಾದನೆಯನ್ನೆಲ್ಲ ನನಗೆ ಮತ್ತು ನನ್ನ ಪತ್ನಿ ಮಕ್ಕಳಿಗೆ ಮಾತ್ರ ಮೀಸಲಿಟ್ಟು ಬದುಕುವ ಆದುನಿಕ ಪದ್ದತಿಯ ಅನುಕರಣೆ – ನಮ್ಮ ಮಕ್ಕಳಿಗೆ ನಾವು ಬದುಕಿ ತೋರಿಸಿ ಕಲಿಸಿದ ಪಾಠ . ಹಿರಿಯರು – ಅನಾಥಾಶ್ರದಲ್ಲಿಯೋ, ಭಿಕ್ಷೆ ಬೇಡಿಯೋ , ಆತ್ಮಹತ್ಯೆ, ಮಾನಹಾನಿ ಬದುಕು – ಇತ್ಯಾದಿ – ಬದುಕು ಸ್ವಾರ್ಥ ಬದುಕಿನ ಪರಿಣಾಮ.
ನಮ್ಮ ಮಾತಾಪಿತೃಗಳು ನಮಗಾಗಿ ಯಾವುದನ್ನೆಲ್ಲ ತ್ಯಾಗ ಮಾಡಿದ್ದಾರೆ – ಏನೆಲ್ಲಾ ಕಷ್ಟ ಪಟ್ಟಿದ್ದಾರೆ – ಅನ್ನ ಆಹಾರಕ್ಕೆ – ಬಟ್ಟೆಬರೆಗೆ – ಇತ್ಯಾದಿಗಳ ಬಗ್ಗೆ ಅಂದಿನ ಕಲ್ಪನಾ ಪ್ರಪಂಚಕ್ಕೆ ಹೋಗಿ ಮನಗಂಡು – ನಾವು ಪಡುತಿರುವ ಎಲ್ಲ ರೀತಿಯ ಸುಖ ಸಂತೋಷದಲ್ಲಿ ಕೇವಲ ೧% ಅವರಿಗಾಗಿ ಮೀಸಲಿಟ್ಟರೆ ಮಾತ್ರ ನಮ್ಮ ನೆಮ್ಮದಿ ಬದುಕಿನ ಆಶಾಕಿರಣದ ಜ್ಯೋತಿ ಕಾಣಬಹುದು.
ನಮ್ಮನ್ನು ಹೆತ್ತು ಹೊತ್ತು ಸಾಕಿ ಸಲಹಿದ ಪುಣ್ಯಾತ್ಮರನ್ನು ಶ್ರದಾಂಜಲಿ ಬುಲೆಟಿನಿನಲ್ಲಿ ಪ್ರದರ್ಶಿಸಿ ಜಗದಿ ಮಾನವರು ನೋಡುವ ಅವಕಾಶ ಕಲ್ಪಿಸೋಣ. ಇದು ಅವರಿಗೆ ಒಂದು ಬಾರಿ ಹೇಳುವ ಥ್ಯಾಂಕ್ಸ್ ಮಾತ್ರ ಎಂಬ ಅರಿವು ನಮಗಿರಲಿ. ಇದು ಸಂಪೂರ್ಣ ಉಚಿತವಾಗಿದ್ದು – ಭಾವಚಿತ್ರ , ಊರಿನ ಹೆಸರು , ಜನನ ಮರಣ ತಾರೀಕು ಸಹಿತ ೧೦ ಪದಗಳ ಮಿತಿಯೊಂದಿಗೆ ಶಾಶ್ವತ ಪ್ರಕಟಣೆ ಮಾಡಲಾಗುವುದು.
ಶ್ರದಾಂಜಲಿ ಬುಲೆಟಿನ್ ಅಭಿಯಾನದಲ್ಲಿ ಮಾನವರಾದ ನಾವೆಲ್ಲರು ಒಂದಾಗಿ ಮುಂದೆ ಸಾಗೋಣ
ಮೊಬೈಲ್ ಕಂಪ್ಯೂಟರ್ಗಳಲ್ಲಿ ನಮ್ಮ ಹಿರಿಯರೆಲ್ಲರ ಮಾಹಿತಿ ಮುಂದಿನ ಸಮಾಜಕ್ಕೆ ಸಿಗುವುಅಂತಾಗಲು ಶ್ರಮಿಸೋಣ
ಮನೆಯ ಗೋಡೆಯ ಮೇಲೆ ನೇತಾಡುವ ಭಾವಚಿತ್ರಗಳಿಗೆ ಆನ್ಲೈನ್ ಪರದೆಯ ಮೇಲೆ ಅವಕಾಶ ಕಲ್ಪಿಸಿ – ಉದ್ಯೋಗ ಉದ್ಯಮ ಬೆಳೆಸೋಣ
ಪ್ರತಿಯೊಬ್ಬನು ಕೂಡ ಕನಿಷ್ಠ ಒಬ್ಬರ ಶ್ರದಾಂಜಲಿ ಭಾವಚಿತ್ರ ಪ್ರಕಟಣೆಗೆ ಸಹಕರಿಸಿ.
ಮಾತಾಪಿತೃಗಳು ಕಾಣುವ ದೇವರು ಎನ್ನುವುದು ಸತ್ಯವಾದರೆ – ನಾವು ದೇವರ ಭಾವಚಿತ್ರ ಪ್ರಕಟಿಸಿದ ಪುಣ್ಯ ಬರುತದೆ.
ಪ್ರತಿ ಮಾನವರ ಕೈಗೆ ಎಟಕುವ ಈ ಕಾರ್ಯದಲ್ಲಿ ನಿಸಂಕೋಚವಾಗಿ ಮುಂದೆ ಮುಂದೆ ಸಾಗೋಣ
ಹೆಚ್ಚಿನ ಮಾಹಿತಿ – ಭಾವಚಿತ್ರ ಪ್ರಕಟಿಸಲು ಅವಕಾಶವಿದ್ದು ಕನಿಷ್ಠ ಶುಲ್ಕ ಪಾವತಿಸಬೇಕು
ಮಾಹಿತಿಗಾಗಿ ಸಂಪರ್ಕಿಸಿ