ಅಡಿಕೆ ಕೃಷಿ – ನಾಟಿ ಮಾಹಿತಿ – ಗರಿಷ್ಠ ಇಳುವರಿಗೆ Arecanut farming – planting information – for maximum yields

ಶೇರ್ ಮಾಡಿ
 

ಅಡಿಕೆ ಗಿಡ ಒಂದರಲ್ಲಿ ಗರಿಷ್ಠ ಇಳುವರಿ – ೫ ರಿಂದ ೧೦ ಗೊನೆ – ಗೊನೆ ಒಂದರಲ್ಲಿ ೨೦೦ ರಿಂದ ೩೦೦ ಅಡಿಕೆ – ಸುಮಾರು ೧೦೦೦ ಅಡಿಕೆ – ೭ರಿಂದ ೮ ಕಿಲೋ ಸುಲಿದ ಅಡಿಕೆ .
ವಾಸ್ತವ ಅಡಿಕೆ ತೋಟಗಾರರ ಸರಾಸರಿ ಇಳುವರಿ ೨ ರಿಂದ ೩ ಕಿಲೋ ಅಡಿಕೆ
ಸುಮಾರು ೩೦ ವರುಷಗಳ ಹಿಂದೆ ೬೦% ದಿಂದ ೭೦% ಕ್ಕೆ ಲಭಿಸುತಿದ್ದ ರೇಂಕು ಇಂದು ೧೦೦% ಗೆ , ಈ ಆವಿಸ್ಕಾರ ಕೃಷಿ ಕ್ಷೇತ್ರದಲ್ಲಿ ಬೇಕಾಗಿದೆ
ಅಡಿಕೆ ಬೆಳೆಗಾರರಿಗೆ ಕೆಲವೊಂದು ಸೂತ್ರಗಳು
೧. ಸಮತಟ್ಟಾದ ಪ್ರದೇಶದಲ್ಲಿ ಅಡಿಕೆ ಗಿಡ ನಾಟಿ ಸ್ಥಳದ ಸುತ್ತ ೨ ಅಡಿ ಆಳದ ಬಸಿಗಾಲುವೆ ಅಥವಾ ಎರಡು ಸಾಲು ಗಿಡಗಳಿಗೆ ಒಂದರಂತೆ ೨ ಅಡಿ ಬಸಿಗಾಲುವೆ
೨. ತೊಟ್ಟೆ ಅಡಿಕೆ ಗಿಡವನ್ನು ತೊಟ್ಟೆ ಮಾತ್ರ ಮುಳುಗುವ ಹೊಂಡದಲ್ಲಿ ನಾಟಿ
೩. ನಾಟಿ ಗಿಡದ ಸುತ್ತ ೩ ಅಡಿ ದೂರದಲ್ಲಿ ಬದು ನಿರ್ಮಾಣ – ಬಿದ್ದ ಮಳೆ ನೀರು , ಫಲವತ್ತತೆ ಕೊಚ್ಚಿ ಹೋಗದಂತೆ ತಡೆ ,
೪. ಅಂತರ ಎಂಟು x ಎಂಟು ರಿಂದ ಒಂಬತ್ತು x ಒಂಬತ್ತು ಅಡಿ
೫. ಒಳಸುರಿ ಪ್ರತಿಗಿಡಕ್ಕೆ ಪ್ರತಿ ವರುಷ ಒಂದು ಬುಟ್ಟಿ ಹಟ್ಟಿ ಗೊಬ್ಬರ ಅಥವಾ ೧೨೩೪೫ ಪ್ರಮಾಣದಲ್ಲಿ ಕ್ರಮವಾಗಿ ೫ ವರುಷ – ಸಮಪ್ರಮಾಣದ ಕೋಳಿಹಿಕ್ಕೆ ಮತ್ತು ಕುರಿಹಿಕ್ಕೆ ಒಂದು ಚೀಲ . ತದನಂತರ ಒಂದು ಬುಟ್ಟಿ
೬. ಒಳಸುರಿ ಪ್ರತಿ ವರುಷ ಗಿಡದಿಂದ ದೂರ ದೂರಕ್ಕೆ ಹಾಕಿ ೪ ವರುಷಗಳ ಬಳಿಕ ೨ ಅಡಿ ಅಂತರದಲ್ಲಿ ಬಳಕೆ
೭. ಈ ಪದ್ಧತಿ ಅಳವಡಿಸಿದರೆ ಗಿಡ ಒಂದಕ್ಕೆ ೫ ವರುಷಗಳಿಗೆ ತಗಲುವ ವೆಚ್ಚ ೨೦೦ ರಿಂದ ೨೫೦ ರೂಪಾಯಿಗಳು . ನೀರಾವರಿ ಹೊರತುಪಡಿಸಿ
೮. ಹೊಳೆಬದಿ , ಬಸಿಗಾಲುವೆ ಬದಿ ತನ್ನಷ್ಟಕ್ಕೆ ಮೊಳಕೆಬಂದ ಗಿಡ ಗರಿಷ್ಠ ಇಳುವರಿ ಕೊಡುವುದು ಜೀವಂತ ನಿದರ್ಶನ – ಪಾಲಿಸೋಣ
೯. ೨ ಅಡಿ ಅಂತರದ ಒಳಗೆ ಹಾಕುವ ಒಳಸುರಿ ಆಧಾರ ಬೇರುಗಳಿಗೆ ಮಾತ್ರ ಲಭ್ಯ – ಆಹಾರ ಬೇರುಗಳಿಗೆ ಸಿಗುವುದಿಲ್ಲ
೧೦. ದೊಡ್ಡ ಹೊಂಡ ಮಾಡದೆ ನಾಟಿಮಾಡಿದ ಗಿಡ ಬೀಳುವ ಸಾಧ್ಯತೆ ಇಲ್ಲವೇ ಇಲ್ಲ . ಸಸ್ಯವರ್ಗ ಮತ್ತು ಪ್ರಾಣಿವರ್ಗ ತಮ್ಮ ರಕ್ಷಣೆ ತಾವೆ ಮಾಡಿಕೊಳ್ಳುತವೆ
೧೧. ಅಡಿಕೆ ತೋಟ ಮಾಡುವವರು ಕನಿಷ್ಠ ೧% ಗಿಡ ಈ ರೀತಿ ನಾಟಿ ಮಾಡಿ – ಅನುಭವ ಹಂಚಿಕೊಳ್ಳೋಣ
೧೨.ಒಂದು ಅಡಿ ಆಳದ ಭೂಮಿಯ ಒಳಗೆ ಸಸ್ಯಕ್ಕೆ ಬೇಕಾದ ಫಲವತ್ತಾದ ಮಣ್ಣು ಇರುವುದಿಲ್ಲ
೧೩. ಯಾವುದೇ ರಾಸಾಯನಿಕ ಗೊಬ್ಬರದ ಅವಶ್ಯಕತೆ ಇರುವುದಿಲ್ಲ
೧೪. ಎಡೆ (ಮದ್ಯ ) ಸಸಿ ದೊಡ್ಡ ಗಿಡಗಳ ಒಂದು ಅಡಿ ದೂರದಲ್ಲಿ ನಾಟಿ ಮಾಡಿದ ತೋಟದ ಭಾವಚಿತ್ರ ಮೇಲೆ ಪ್ರಕಟಿಸಲಾಗಿದೆ
ಸ್ವ ಅನುಭವ ಹಂಚಿಕೊಳ್ಳುತಿದ್ದೇವೆ – ಓದುಗರ ಸಮಯ ಪೋಲು ಮಾಡಿದಕ್ಕೆ ಕ್ಷಮೆಯಿರಲಿ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?