ಹಳೆ ವಿದ್ಯಾರ್ಥಿಗಳ ಡೈರೆಕ್ಟರಿ ಮತ್ತು ಹಳೆ ವಿದ್ಯಾರ್ಥಿಗಳ ಒಕ್ಕೂಟ – Alumni Directory and Alumni Association

ಶೇರ್ ಮಾಡಿ
ಸಂಪನ್ಮೂಲ ಕೊರತೆಯಿಂದಾಗಿ ಕುಂಟುತ್ತಾ ನಡೆದುಕೊಂಡು ಸಾಗುತಿರುವ ಸಾಲಿನಲ್ಲಿ ದೈವ ದೇವಸ್ಥಾನಗಳ ಜೊತೆಗೆ ಪ್ರಸ್ತುತ ಸರಕಾರಿ ಶಾಲೆಗಳು ಸೇರ್ಪಡೆಗೊಂಡು ಕೆಲವೊಂದು ವಿಬ್ಬಿಣ್ಣ ನೆಲೆಯಲ್ಲಿ ಮುಚ್ಚಿಹೋಗಿ ಇನ್ನುಳಿದವುಗಳು ನಿಟ್ಟುಸಿರು ಬಿಡುತಿರುವುದನ್ನು ಮನಗಂಡು – ಶಾಲೆಗಳನ್ನು ಬದುಕಿನ ಮೆಟ್ಟಲಾಗಿ ಮುನ್ನಡೆದ ಹಳೆ ವಿದ್ಯಾರ್ಥಿಗಳನ್ನು ಆನ್ಲೈನ್ ಮೂಲಕ ಒಟ್ಟುಗೂಡಿಸಿ – ಅವರ ವ್ಯಕ್ತಿ ವ್ಯಕ್ತಿತ್ವ ಮುಖ ಪರಿಚಯ ಬದುಕಿನ ಚಿತ್ರಣವನ್ನು ಜಗತ್ತಿಗೆ ಸಾರುವ ಪ್ರಕಟಣೆಯನ್ನು ಮುಂದಿಟ್ಟುಕೊಂಡು – ನಿಗದಿತ ಶುಲ್ಕ ವಿಧಿಸಿ – ಆ ಶುಲ್ಕದಲ್ಲಿ ನಿರ್ದಿಷ್ಟ ಪಾಲನ್ನು ತಾನು ಓದಿದ ಶಾಲೆಗಳಿಗೆ ಕೊಡುವ ವ್ಯವಸ್ಥೆಗೆ ಕಾಯಕಲ್ಪ ನೀಡಿದಾಗ – ಮುಂದಕ್ಕೆ ಸುಭದ್ರವಾಗಿ ಶಾಲೆಗಳನ್ನು ದತ್ತು ತೆಗೆದುಕೊಂಡು ನಡೆಸುವ ಸುದಿನದತ್ತ ನಮ್ಮ ಉದ್ದೇಶ ಗುರಿ ಕೇಂದ್ರೀಕೃತವಾಗಿದೆ. ಅಲ್ಪ ಆಯುಸ್ಸು ಹೊಂದಿರುವ ಸಂಘಟನೆಯತ್ತ ಒಲವು ತೋರದೆ ಒಕ್ಕೂಟ ವ್ಯವಸ್ಥೆ ಭದ್ರವಾಗಿದ್ದು ಮನಗಂಡು ಅತ್ತ ದೃಷ್ಟಿ ಹರಿಸಿದ್ದೇವೆ.
ಹಳೆ ವಿದ್ಯಾರ್ಥಿಗಳ ಡೈರೆಕ್ಟರಿ ಕಿರು ಚಿತ್ರಣ
ಹಳೆ ವಿದ್ಯಾರ್ಥಿಗಳ ( ಒಬ್ಬರ ಯಾ ಮನೆಯವರ ) ಭಾವಚಿತ್ರ ಹೆಸರು ಜಾತಿ ವೃತ್ತಿ ಊರು ಆನ್ಲೈನ್ ಪ್ರಕಟಣೆ – ಶಾಶ್ವತ
ಸತಿ /ಪತಿ ಮಕ್ಕಳು ತಂದೆ ತಾಯಿ ಒಡಹುಟ್ಟಿದವರ ಹೆಸರು ಪ್ರಕಟಣೆ
ಪ್ರತಿ ಹಳೆ ವಿದ್ಯಾರ್ಥಿ ತೆರಬೇಕಾದ ಶುಲ್ಕ ೨೦೦ ಮಾತ್ರ – ಮಾಹಿತಿದಾರರಿಗೆ ಕಮಿಷನ್ ೨೦ % – ತಾನು ಓದಿದ ಶಾಲೆಗೆ ೩೦% -ತರಿಗೆ ೩೦% , ಕಂಪನಿ ನಡೆಸಲು ೧೦% – ಅಪ್ಲೋಡಿಗೆ ೧೦%
ಹೆಚ್ಚಿನ ಭಾವಚಿತ್ರ ಪ್ರಕಟಣೆ ಬೇಕಿದ್ದಲ್ಲಿ ಪ್ರತಿ ಭಾವಚಿತ್ರಕ್ಕೆ ೧೦೦ ರೂಪಾಯಿ ಶುಲ್ಕ, ವ್ಯಕ್ತಿ ವ್ಯಕ್ತಿತ್ವ ಪ್ರಕಟಣೆಗೆ ಪತಿ ಪದಕ್ಕೆ ೧೦ ರೂಪಾಯಿ ಶುಲ್ಕ
ಶಾಲೆಗಳು ಮತ್ತು ಜನರ ಸಂಬಂಧ ವೃದ್ಧಿಯಾಗುತದೆ
ಉದ್ಯೋಗ ಸೃಷ್ಟಿಯ ಮಹಾಪುರ ಹರಿದು ಬರಲಿದೆ
ವ್ಯಾಪಾರ ದರೋಡೆಕೋರರ ಹಾವಳಿಯಿಂದ ಸೇವಾವಲಯಕ್ಕೆ ಶಾಲೆಗಳ ದಾಪುಗಾಲು
ಸರಕಾರಕ್ಕೆ ಹೊರೆಯಾಗಿರುವ ವಿದ್ಯಾ ಸಮುಸ್ತೆಗಳ ಭಾರ ಕಾಲಕ್ರಮೇಣ ಇಳಿಮುಖ
ಇತ್ತೀಚಿಗೆ ಹುಟ್ಟುಹಾಕಿರುವ ಹುಟ್ಟುಹಬ್ಬ ಮದುವೆ ದಿನ ಗಣೇಶೋತ್ಸವ ಕೃಷ್ಣಾಷ್ಟಮಿ ……………… ಈ ತೆರನಾಗಿ ಶಾಲೆಗಳ ಅಭಿವೃದ್ಧಿಗೆ ಕಾಯಕಲ್ಪ
ಅಂದಿನ ಉಡುಗೊರೆಯಾಗಿ ಹುಟ್ಟಿ ಬೆಳೆದ ವಿದ್ಯಾ ಸಮುಸ್ತೆಗಳು ಮರಳಿ ದಾನಿಗಳತ್ತ
ಸೇವಾ ದೃಷ್ಟಿಯಿಂದ ದುಡಿಯುವ ಮಾನವರನ್ನು ಹುಟ್ಟಿ ಬೆಳೆಸುವ ಅನಿವಾರ್ಯತೆ ಇದೆ
ಎಲ್ಲಾ ವಲಯಗಳಲ್ಲಿ ದುಡಿಯುವ ವ್ಯಕ್ತಿಗಳನ್ನು ಪ್ರಪಂಚಕ್ಕೆ ಪರಿಚಯಿಸುವ ಘನಕಾರ್ಯಕ್ಕೆ ಚಾಲನೆ
ಮಾನವ ಸಂಬಂಧಗಳ ಅಭಿವೃದ್ಧಿ
ವಿದ್ಯಾ ಬೆಳಕು ಬದುಕಿಗೆ ಬೆಳಕಾಗಿ – ಆಗಸದತ್ತ ಬೆಳವಣಿಗೆಗೆ ಸಾಧ್ಯತೆ
ವಿದೇಶಿ ಸಂಸ್ಸ್ಕೃತಿಯ ಮುಂದೆ ಸ್ವದೇಶೀ ಸಂಸ್ಕೃತಿಯ ನಿಚ್ಚಳ ಗೆಲುವು
ಕೆಲವೇ ಜನರ ಕೈಯಲ್ಲಿರುವ ರೀಮೊಟ್ ಜನಸಾಮಾನ್ಯರ ಪಾಲಿಗೆ
ನಾವೆಲ್ಲರೂ ಸೇರಿ ಮಾಡೋಣ – ಒಕ್ಕೂಟ ವ್ಯವಸ್ಥೆಯ ಮೂಲ – ಸಾಕಾರ ರೂಪಕ್ಕೆ ಚಾಲನೆ
ಆಟಿಕೆಯಾಗಿ ಬಳಸುವ ಮೊಬೈಲ್ ಕಲ್ಪವೃಕ್ಸವಾಗಿ ನಮ್ಮ ಪಾಲಿಗೆ ವರದಾನ
ಕಿತ್ತು ತಿನ್ನುವ ಕೆಟ್ಟ ಪದ್ಧತಿ ಬಿಟ್ಟು ಹಂಚಿ ತಿನ್ನುವ ಒಳ್ಳೆಯ ಪದ್ಧತಿ ಅಳವಡಿಸೋಣ
ಒಳ್ಳೆಯದರಲ್ಲಿ ಕೆಟ್ಟದನ್ನು ನೋಡುವ ಪರಿಪಾಠಕ್ಕೆ ಇತಿಶ್ರೀ ಹಾಡಿ ಕೆಟ್ಟದರಲ್ಲಿ ಒಳ್ಳೆಯದನ್ನು ಕಾಣೋಣ
ದೇವರನ್ನು ದೇವಾಲಯದಲ್ಲಿ ನೋಡುವಾತ ಭಕ್ತ ಆದರೆ ಮಾನವರಲ್ಲಿ ದೇವರನ್ನು ಕಾಣುವಾತ ನಿಜವಾದ ಭಕ್ತ
See also  Birthday Bulletin -ಹುಟ್ಟು ಹಬ್ಬದ ಬುಲೆಟಿನ್

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?