ಅವ್ಯಕ್ತ ಬುಲೆಟಿನ್ ಪ್ರಸಾರ ಮಾಧ್ಯಮವಾಗಿ ಹುಟ್ಟಿಲ್ಲ – ಸಂಕ್ಷಿಪ್ತ ಪ್ರಕಟಣೆಯ ಮೂಲ ಸಿದ್ಧಾಂತದಲ್ಲಿ ಹುಟ್ಟಿ – ಗಗನ ಕುಸುಮವಾಗಿರುವ ಪ್ರಚಾರ ಮಾಧ್ಯಮವನ್ನು ಜನಸಾಮಾನ್ಯರ ಕೈಗೆ ಸಿಗುವಂತೆ ಮಾಡಿ – ದಿನ ನಿತ್ಯ ಬದುಕಿನಲ್ಲಿ ನಮಗೆ ಬೇಕಾದ ಸಕಲ ಮಾಹಿತಿಗಳು ದೊರಕುವಂತೆ ಮಾಡುವ ದ್ಯೇಯ ಉದ್ದೇಶ ಹೊತ್ತು ಅಂಬೆಗಾಲಿಡುತ್ತ ಮುಂದೆ ಮುಂದೆ ಸಾಗುತಿದೆ.
ಪ್ರಸಾರ ಮಾದ್ಯಮದಲ್ಲಿ ದೊರಕುವ ಮಾಹಿತಿಗಳು ಇಲ್ಲಿ ಕೆಲವು ಸಂದರ್ಭಗಳಲ್ಲಿ ಪ್ರಕಟವಾಗಿದ್ದರೂ – ಅದನ್ನು ಪ್ರಚಾರ ಮಾದ್ಯಮದಲ್ಲಿ ಬರುವ ವಿಷಯವನ್ನಾಗಿ ಪರಿವರ್ತಿಸಿ ಪ್ರಕಟಣೆ ಮಾಡುವ ಸದುದ್ದೇಶ ಹೊಂದಿದ್ದು ಸಕಲ ಪ್ರಯತ್ನಗಳು ಈ ನಿಟ್ಟಿನಲ್ಲಿ ಸಾಗುತಿದೆ.
ಪ್ರತಿ ವಲಯದಲ್ಲಿ ಕೂಡ ಸಂಘರ್ಷ ಬದಲಾಗಿ ನೂತನ ಆವಿಸ್ಕಾರಗಳೊಂದಿಗೆ – ವ್ಯಾಪಾರ ಮತ್ತು ದರೋಡೆ ಬದುಕಿನಿಂದ ಬಲು ದೂರ ಸಾಗಿ – ನನ್ನ ಸೇವೆ ನಾನು ಮಾಡಿ -ನಮ್ಮ ಸೇವೆ ಮಾಡಲು ನಾವು ಸನ್ನದ್ಧರಾದಾಗ ಸುಖ ಶಾಂತಿ ನೆಮ್ಮದಿ ಬಾಳಿನುದ್ದಕ್ಕೂ ನಮ್ಮದಾಗುತದೆ
ನಮ್ಮ ಬುಲೆಟಿನ್ ಇದರಲ್ಲಿ ಯಾವುದಕ್ಕೆ ವಿಶೇಷ ಒತ್ತು ಕೊಡಲಾಗುವುದರ ಬಗ್ಗೆ ಸಂಕ್ಷಿಪ್ತ ವಿವರ
೧. ಪ್ರತಿ ದೇವಾಲಯಗಳ ಜೀವನ ಚರಿತ್ರೆ ಮತ್ತು ವಾಸ್ತವ ಪ್ರಕಟಣೆ
೨. ಪ್ರತಿ ದೈವಸ್ಥಾನಗಳ ಜೀವನ ಚರಿತ್ರೆ
೩. ಪ್ರತಿ ವ್ಯಕ್ತಿಗಳ ಜೀವನ ಚರಿತ್ರೆ
೪. ಮೃತ ವ್ಯಕ್ತಿಗಳ ಜೀವನ ಚರಿತ್ರೆ
೫. ಪೇಟೆ ಪಟ್ಟಣಗಳ ಸ್ಪಷ್ಟ ಅರಿವಿನ ಪ್ರಕಟಣೆ
೬. ಜಾತಿವಾರು ಸೇವಾ ಒಕ್ಕೂಟಗಳಿಗೆ ವಿಶೇಷ ಒತ್ತು
೭. ವೃತ್ತಿವಾರು ಸೇವಾ ಒಕ್ಕೂಟಗಳಿಗೆ ಮಹತ್ವ
೮. ಲಿಂಗವಾರು ಸೇವಾ ಒಕ್ಕೂಟಗಳಲಿಗೆ ಸೂಕ್ತ ವ್ಯವಸ್ಥೆ
೬. ಮದುವೆ , ಹುಟ್ಟುಹಬ್ಬ, ಗ್ರಹಪ್ರವೇಶ, ವ್ಯಾಪಾರ ಮಳಿಗೆಗಳ ಶುಭಾರಂಭ ಇತ್ಯಾದಿಗಳಿಗೆ ಮಹತ್ವ
೧೦ . ವಿದ್ಯಾರ್ಥಿಗಳ ಸೇವಾ ಒಕ್ಕೂಟಕ್ಕೆ ಪ್ರಥಮ ಆದ್ಯತೆ
೧೧ . ಭಜನಾ ಮಂಡಳಿಗಳ ಬದುಕಿನ ಚಿತ್ರಣ
೧೨ . ಪ್ರತಿ ಊರಿನ ಗಣೇಶೋತ್ಸವ ನಡೆದು ಬಂದ ಅವಲೋಕನದ ಚಿತ್ರಣ
೧೩ . ಹಾಲು ಉತ್ಪಾದಕರ, ರೈತರ, ಪಿ ಲ್ ಡಿ ಬ್ಯಾಂಕ್ ಸಂಘಗಳ ನಡೆದು ಬಂದ ದಾರಿ – ಪ್ರಕಟಣೆ
೧೪. ರಾಜಕಾರಿಣಿಗಳ ಸೇವಾ ಒಕ್ಕೂಟದ ಬಗ್ಗೆ ಚಿಂತನೆ
೧೫. ಕೃಷಿ ಕಾರ್ಮಿಕರ ಸೇವಾ ಒಕ್ಕೂಟ ಪರಿಕಲ್ಪನೆ
೧೬. ಆಟೋ, ಇತರ ವಾಹನದ ಸೇವಾ ಒಕ್ಕೂಟ
೧೭ . ರೋಗಿಗಳ ಸೇವಾ ಒಕ್ಕೂಟ
೧೮. ಅರ್ಚಕರ ತಂತ್ರಿಗಳ ವೈದ್ಯರ , ವಕೀಲರ, ಗುರುಗಳ ಇತ್ಯಾದಿ ಸೇವಾ ಒಕ್ಕೂಟದ ಅನಿವಾರ್ಯತೆ