ಡಾಕ್ಟರರು ಇದ್ದಾರೆ – ರೋಗಿಗಳು ಇದ್ದಾರೆ – ಮದ್ದಿನ ಅಂಗಡಿ ಕೂಡ ಇದೆ. ಈ ಮೂರರ ಮದ್ಯ ಅತ್ಯುತ್ತಮ ಬಾಂದವ್ಯ ಏರ್ಪಟ್ಟಾಗ ಮಾತ್ರ ರೋಗ ಮುಕ್ತ ಅಲ್ಲದಿದ್ದರೂ ಮಾನವರಾದ ನಮ್ಮ ನಿಯಂತ್ರದಲ್ಲಿ ಇರಬಹುದು. ಡಾಕ್ಟರರುಗಳ ವಿವರ – ಯಾವ ಪೇಟೆಯಲ್ಲಿ ಯಾವ ಡಾಕ್ಟರರು ಇದ್ದಾರೆ – ಎಂಬ ವಿವರ ಬೆರಳ ತುದಿಯಲ್ಲಿ ನಮಗೆ ಸಿಗಬೇಕಾದ ಅವಶ್ಯಕತೆ ಖಂಡಿತಾ ಇದೆ.ಅಮೆಝೋನ್ ವಸ್ತುಗಳ ಸರಬರಾಜು ಬಗ್ಗೆ ತೊಡಗಿಸಿಕೊಂಡ ರೀತಿಯಲ್ಲಿ ಮಾನವರಿಗೆ ಬೇಕಾದ ಸೌಲಭ್ಯಗಳ ಬಗ್ಗೆ ನಾವು ಚಿಂತನ – ಮಂಥನ – ಅನುಷ್ಠಾನ ಮಾಡಿದಾಗ ಅಭಿವೃದ್ಧಿ ತನ್ನಿಂದ ತಾನೇ ಆಗುತದೆ.
ಡಾಕ್ಟರರುಗಳ ವಿವರದೊಂದಿಗೆ – ಮದ್ದಿನ ಅಂಗಡಿ ವಿವರ, ನಾಟಿ ವೈದ್ಯರ ವಿವರ, ಇತ್ತೀಚಿನ ಬೆಳವಣಿಗೆ ಬಗ್ಗೆ ವಿವರ …………..ಇತ್ಯಾದಿಗಳು ನಮಗೆ ಬೇಕೇ ಬೇಕು.
ಈ ನಿಟ್ಟಿನ್ಲಲಿ ತೊಡಗಿಸಿಕೊಳ್ಳುವವರಿಗೆ ಅವಕಾಶ ನಮ್ಮಲ್ಲಿದೆ. ಒಂದು ಮೂಲೆಯಿಂದ ನಾವು ಕೂಡ ಕಾರ್ಯಚಟುವಟಿಕೆ ಆರಂಭ ಮಾಡುತೇವೆ
.ವೈದ್ಯರ ಬಗ್ಗೆ ಎರಡು ಅವ್ಯಕ್ತ ವಚನಗಳು
ರೋಗಿ ವೈದ್ಯರ ಅನ್ನದಾತ
ವೈದ್ಯ ರೋಗಿಯ ಜೀವದಾತ
ಜೀವನ ಹಿಂಡಿದ ಜೀವದಾತ ವೈದ್ಯನೇ …………………..ಅವ್ಯಕ್ತ
ಮಸ್ತಕದ ವೈದ್ಯ ಸ್ಮಶಾನದಿಂದ ಎದ್ದು ಬರುತಿಹನು
ಯಾಂತ್ರಿಕ ವೈದ್ಯ ಸ್ಮಶಾನದತ್ತ ದಾಪುಗಾಲು ಹಾಕುತಿಹನು
ಮಸ್ತಕ ಯಾಂತ್ರಿಕ ವೈದ್ಯ ನಿಟ್ಟುಸಿರು ಬಿಡುತಿಹನು ……….ಅವ್ಯಕ್ತ